ಕೋವಿಡ್ ಲಸಿಕೆ ಪಡೆದ ನಟ ಪುನೀತ್ ರಾಜಕುಮಾರ್
Team Udayavani, Apr 7, 2021, 3:35 PM IST
ಬೆಂಗಳೂರು : ಚಂದನವನದ ನಟ ಪುನೀತ್ ರಾಜಕುಮಾರ್ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಅಪ್ಪು ಇಂದು (ಏ.7) ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದಿದ್ದಾರೆ.
ಕೋವಿಡ್ ಲಸಿಕೆ ಪಡೆದಿರುವ ಕುರಿತು ಟ್ವಿಟರ್ ನಲ್ಲಿ ಹೇಳಿಕೊಂಡಿರುವ ರಾಜಕುಮಾರ್, 45 ವರ್ಷ ವಯಸ್ಸಿನವರು ಹಾಗೂ ಅದಕ್ಕೂ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಏಪ್ರಿಲ್ 1 ರಂದು ಪುನೀತ್ ರಾಜಕುಮಾರ್ ಅಭಿನಯಿಸಿರುವ ಯುವರತ್ನ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ಈ ಚಿತ್ರದ ಕುರಿತು ಫೇಸ್‍ಬುಕ್‍ನಲ್ಲಿ ಮಾತನಾಡುತ್ತಿದ್ದ ವೇಳೆ ಕೋವಿಡ್ ಜಾಗೃತಿ ಬಗ್ಗೆ ಪುನೀತ್ ಹೇಳಿದ್ದರು. ಎಲ್ಲರೂ ಫೇಸ್‍ಮಾಸ್ಕ್ ಧರಿಸುವಂತೆ ವಿನಂತಿಸಿಕೊಂಡಿದ್ದರು. ತಾನೂ ಕೂಡ ಕೋವಿಡ್ ಲಸಿಕೆ ಪಡೆಯುವುದಾಗಿ ಹೇಳಿಕೊಂಡಿದ್ದರು. ಅದರಂತೆ ಇಂದು ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
Got my first dose of vaccination today. If you are 45 years & above ensure you get vaccinated. #vaccinated #LargestVaccineDrive pic.twitter.com/QsX9NnkjGS
— Puneeth Rajkumar (@PuneethRajkumar) April 7, 2021
ಇನ್ನು ಮಂಗಳವಾರವಷ್ಟೆ ( ಏ.6) ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಜಗ್ಗೇಶ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಕೋವಿಡ್ ವಿಶ್ವಕ್ಕೆ ಬಂದಾಗ ಲಸಿಕೆ ಬೇಗ ಬರಲಿ ಎಂದು ಮನುಕುಲ ಪ್ರಾರ್ಥಿಸಿದೆವು. ಈಗ ವ್ಯಾಕ್ಸಿನ್ ಬಂದಿದೆ, ತೆಗೆದುಕೊಳ್ಳಲು ಅನಾವಶ್ಯಕ ಭಯವೇಕೆ ? ಭಯ ಬಿಡಿ ಲಸಿಕೆ ಪಡೆದು ನಿರ್ಭಯವಾಗಿ ಬಾಳಿ ಎಂದು ಎಲ್ಲರಿಗೂ ಹೇಳಿದ್ದಾರೆ.
#corona ವಿಶ್ವಕ್ಕೆ ಬಂದಾಗ
#vaccine ಬೇಗಬರಲಿ ಎಂದು ಮನುಕುಲ ಪ್ರಾರ್ಥಿಸಿದೆವು!
ಈಗ vacation ಬಂದಿದೆ ತೆಗೆದುಕೊಳ್ಳಲು!ಅನಾವಶ್ಯಕ ಭಯವೇಕೆ!
ಭಯಬಿಡಿ #vaccine ಪಡೆದು ನಿರ್ಭಯವಾಗಿ ಬಾಳಿ!
ನಾನು ನನ್ನಮಡದಿ #COVIDVaccine #NSSHಆಸ್ಪತ್ರೆ dr.Narayanswamy ದ ಪಡೆದೆವು!@BSYBJP@BJP4Karnataka @blsanthosh @MUKUNDAckpura pic.twitter.com/hLyXJwiqIR— ನವರಸನಾಯಕ ಜಗ್ಗೇಶ್ (@Jaggesh2) April 6, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.