ಪುರ್‌ಸೊತ್ತೆ ಇಲ್ಲದ ಪುಕ್ಸಟ್ಟೆ ಲೈಫ್
Team Udayavani, Jan 17, 2019, 10:33 AM IST
ನಟ ಸಂಚಾರಿ ವಿಜಯ್ ನಾಯಕರಾಗಿರುವ ‘ಪುಕ್ಸಟ್ಟೆ ಲೈಫು’ ಚಿತ್ರ ಸಂಕ್ರಾಂತಿ ಹಬ್ಬದಂದು ಸೆಟ್ಟೇರಿದೆ. ಚಿತ್ರದ ಸ್ಕ್ರಿಪ್ಟ್ಗೆ ಪೂಜೆ ಸಲ್ಲಿಸುವ ಮೂಲಕ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವೇಳೆ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ‘ಪುಕ್ಸಟ್ಟೆ ಲೈಫು..!’ ಚಿತ್ರಕ್ಕೆ ‘ಪುರ್‌ಸೊತ್ತೆ ಇಲ್ಲಾ…’ ಎಂಬ ಅಡಿಬರಹವಿದ್ದು, ಫೆಬ್ರವರಿ ಮೊದಲ ವಾರದಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಇನ್ನು ಚಿತ್ರದ ಬಗ್ಗೆ ಮಾತನಾಡುವ ನಟ ಸಂಚಾರಿ ವಿಜಯ್, ‘ಇದು ನಮ್ಮ ನಡುವೆಯೇ ಇರುವ ಜನಗಳ ಕಥೆ. ಕೆಲವರು ಯಾವಾಗಲೂ ತುಂಬ ಬ್ಯುಸಿ ಇದ್ದೀನಿ ಅಂತ ಓಡಾಡಿಕೊಂಡಿರುತ್ತಾರೆ. ಆದ್ರೆ ಏನು ಮಾಡುತ್ತಾರೆ, ಅದ್ರಿಂದ ಯಾರಿಗೆ ಪ್ರಯೋಜನ? ಏನೂ ಗೊತ್ತಿರುವುದಿಲ್ಲ. ಅಂತಹ ಜನಕ್ಕೆ ಅನ್ವಯಿಸುವ ಸಬ್ಜೆಕ್ಟ್ ಈ ಚಿತ್ರದಲ್ಲಿದೆ. ಅಂಥ ವ್ಯಕ್ತಿಯೊಬ್ಬನಿಗೆ ದುಡ್ಡಿನ ಆಸೆ ಬಂದ್ರೆ ಜೀವನದಲ್ಲಿ ಏನೆಲ್ಲಾ ಆಗುತ್ತೆ ಅವನು ಯಾವ ಪರಿಸ್ಥಿತಿಗೆ ಹೋಗುತ್ತಾನೆ ಅನ್ನೋದು ಚಿತ್ರ. ಇಡೀ ಚಿತ್ರವನ್ನು ನವಿರಾದ ಹಾಸ್ಯದ ಮೂಲಕ ಹೇಳಲಾಗುತ್ತಿದೆ. ಚಿತ್ರದಲ್ಲಿ ನಾನೊಬ್ಬ ಬಡ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ’ ಎನ್ನುತ್ತಾರೆ.
‘ಸರ್ವಸ್ವ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಾಗರಾಜ ಸೋಮಯಾಜಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅರವಿಂದ್ ಕುಪ್ಲಿಕರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಅದ್ವೆ„ತ ಗುರುಮೂರ್ತಿ ಚಿತ್ರದ ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದುರ್ಗ, ಬೆಂಗಳೂರು, ಮೈಸೂರು, ದಾವಣಗೆರೆ, ಚನ್ನಪಟ್ಟಣ, ಕೋಲಾರ ಸುತ್ತಮುತ್ತ ಸುಮಾರು ನಲವತ್ತು ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಇದೇ ವರ್ಷದ ಕೊನೆಗೆ ‘ಪುಕ್ಸಟ್ಟೆ ಲೈಫು..!’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದಲ್ಲಿ ಅಚ್ಯುತ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಮೊದಲಾದ ಕಲಾವಿದರ ತಾರಾಗಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.