ಪ್ರೇಮಲೋಕದ ದೊರೆ ರವಿ ಚಂದ್ರನ್ ‘ಕನ್ನಡಿಗ’ ಚಿತ್ರಕ್ಕೆ ಶಿವಣ್ಣ ಸಾಥ್
Team Udayavani, Jun 29, 2021, 12:46 PM IST
ಬೆಂಗಳೂರು : ಪ್ರೇಮ ಲೋಕದ ದೊರೆ ರವಿಚಂದ್ರನ್ ಅವರ ಕನ್ನಡಿಗ ಚಿತ್ರಕ್ಕೆ ಶಿವಣ್ಣ ಸಾಥ್ ನೀಡಿದ್ದಾರೆ. ಈ ಸಿನಿಮಾದ ಟೈಟಲ್ ಟ್ರ್ಯಾಕ್ ಗೆ ಕರುನಾಡ ಚಕ್ರವರ್ತಿ ಧ್ವನಿಯಾಗಿದ್ದಾರೆ.
ಹಾಗೆ ನೋಡಿದರೆ ಶಿವಣ್ಣ ಹಾಗೂ ರವಿಮಾಮ ಒಟ್ಟಿಗೆ ಚಿತ್ರರಂಗ ಪ್ರವೇಶಿಸಿದವರು. ಸೋಲು-ಗೆಲುವು ಸಮನಾಗಿ ಎದುರಿಸಿದವರು. ಅಂದಿನಿಂದ ಇಂದಿನ ವರೆಗೆ ಚಂದನವನದಲ್ಲಿ ಈ ತಾರೆಯವರು ಒಳ್ಳೆಯ ಸ್ನೇಹಿತರೆಂದೆ ಗುರುತಿಸಿಕೊಂಡಿದ್ದಾರೆ. ಇವರ ಗಟ್ಟಿಯಾದ ಗೆಳೆತನಕ್ಕೆ ಸಾಕ್ಷಿಯಾಗಿದ್ದು ‘ಕೊದಂಡರಾಮ’ ಸಿನಿಮಾ. ಈ ಚಿತ್ರದಲ್ಲಿ ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಜೊತೆಯಾಗಿ ತೆರೆ ಹಂಚಿಕೊಂಡಿದ್ದರು. ಈ ಬಿಗ್ ಸ್ಟಾರ್ ಗಳ ಕಾಂಬಿನೇಶನ್ ಕನ್ನಡ ಸಿನಿ ರಸಿಕರಿಗೆ ಭರ್ಜರಿ ರಸದೌತನ ನೀಡಿತು.
ಇನ್ನು ಶಿವರಾಜ್ ಅವರ ವಜ್ರಕಾಯ ಚಿತ್ರದಲ್ಲಿ ರವಿಚಂದ್ರನ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು. ಆ ಪ್ರೀತಿ ಮತ್ತು ಸ್ನೇಹ ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ರವಿಚಂದ್ರನ್ ನಟಿಸುತ್ತಿರುವ ಕನ್ನಡಿಗ ಚಿತ್ರಕ್ಕೆ ಶಿವಣ್ಣ ಹಾಡಿದ್ದಾರೆ. ಜನಪದ ಶೈಲಿಯ ಟೈಟಲ್ ಟ್ರ್ಯಾಕ್`ಗೆ ಶಿವಣ್ಣ ಧ್ವನಿ ನೀಡಿದ್ದಾರೆ. ಎ ಹರ್ಷ ನಿರ್ದೇಶನದಲ್ಲಿ ಹಾಡಿನ ಚಿತ್ರೀಕರಣವೂ ಆಗಿದೆ. ಜಟ್ಟ ಗುರುರಾಜ್ ನಿರ್ದೇಶನದ ಚಿತ್ರದಲ್ಲಿ ರವಿಚಂದ್ರನ್, ಹಿಂದೆಂದೂ ಕಾಣಿಸಿಕೊಂಡಿರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.