ಅವಕಾಶಕ್ಕಾಗಿ ಅಲೆದ ದಿನಗಳನ್ನು ನೆನೆದು ಕಣ್ಣೀರು ಸುರಿಸಿದ ನಟ ಸೃಜನ್
Team Udayavani, Jul 17, 2021, 1:05 PM IST
ಪಟ-ಪಟ ಅಂತಾ ಅರಳು ಹುರಿದಂತೆ ಮಾತಾಡುವ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಪ್ರತಿಭಾವಂತ ನಟ ಅಂತಾ ಎಲ್ಲರಿಗೂ ಗೊತ್ತು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಕುಟುಂಬದವರೂ ಅನ್ನೋದು ಗೊತ್ತು. ಆದರೆ, ಸಿನಿಮಾದಲ್ಲಿ ಅವಕಾಶಕ್ಕಾಗಿ ಇವರು ಪಟ್ಟ ಕಷ್ಟ ಎಂತಹದು ಎನ್ನುವುದು ಬಹುತೇಕರಿಗೆ ತಿಳಿಯದ ವಿಚಾರ.
ಮಜಾ ಟಾಕೀಸ್ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಸೃಜನ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅವಕಾಶಕ್ಕೆ ತಾವು ಅಲೆದದ್ದನ್ನು ಎಲ್ಲರೆದರು ಬಿಚ್ಚಿಟ್ಟಿದ್ದಾರೆ.
ಹೊಸದಾಗಿ ಪ್ರಾರಂಭವಾಗಿರುವ ರಾಜಾರಾಣಿ ರಿಯಾಲಿಟಿ ಶೋನಲ್ಲಿ ಸೃಜನ್ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೃಜನ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
‘ಸುಬ್ಬಯ್ಯ ನಾಯ್ಡು ಮೊಮ್ಮೊಗನಾಗಿ, ಗಿರಿಜಾ ಲೋಕೇಶ್-ಲೋಕೇಶ್ ಮಗನಾಗಿ, ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್ಗಾಗಿ 14 ವರ್ಷ ಸೈಕಲ್ ಹೊಡೆದಿದ್ದೇನೆ. ಎಷ್ಟೋ ಪ್ರಯತ್ನಗಳನ್ನು ಮಾಡಿದ್ದೇನೆ. ಆ ತಾಳ್ಮೆಯನ್ನು ಕಲಿಸಿಕೊಡೋದೆ ರಂಗಭೂಮಿ. ಅದಕ್ಕಾಗಿಯೇ ಅದನ್ನು ರಂಗಭೂಮಿ ಎಂದು ಕರೆಯೋದು’ ಎಂದು ಸೃಜನ್ ಕಣ್ಣೀರು ಹಾಕಿದ್ದಾರೆ.
ಜೀವನದ ಅಂತ್ಯ ಎನ್ನುವುದಿದ್ದರೆ ಅದು ರಂಗಭೂಮಿ ಮೇಲೆ ಆಗಲಿ ಅನ್ನೋದು ನನ್ನ ಆಸೆ ಎಂದು ಸೃಜನ್ ಹೇಳಿದ್ದಾರೆ. ಈ ವಿಡಿಯೋ ತುಣುಕನ್ನು ತಮ್ಮ ಟ್ವಿಟರಿನಲ್ಲಿ ಸೃಜನ್ ಹಂಚಿಕೊಂಡಿದ್ದಾರೆ.
Life journey pic.twitter.com/VCzZvfWuuC
— srujan lokesh (@srujanlokesh) July 17, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.