Aindritha Ray: ಕನ್ನಡದಲ್ಲಿ ಅವಕಾಶವೇ ಸಿಗುತ್ತಿಲ್ಲ: ʼಮನಸಾರೆʼ ಬೆಡಗಿ ಮನಸ್ಸಿನ ಮಾತು
Team Udayavani, Aug 22, 2024, 1:10 PM IST
ಬೆಂಗಳೂರು: ಮದುವೆ ಬಳಿಕ ಕೆಲ ನಟಿಯರು ಸಿನಿಮಾರಂಗದಿಂದ ದೂರವಾಗಿ ಉಳಿಯುತ್ತಾರೆ. ಇನ್ನು ಕೆಲವರು ಮಧ್ಯದಲ್ಲಿ ಬಂದು ಒಂದೆರೆಡು ಸಿನಿಮಾಗಳಿಗೆ ಬಣ್ಣ ಹಚ್ಚುತ್ತಾರೆ. ಆದರೆ ಆ ಬಳಿಕ ಮತ್ತೆ ಮಾಯಾವಾಗಿ ಬಿಡುತ್ತಾರೆ.
ಈ ಮಾತಿಗೆ ಉದಾಹರಣೆ ಒಂದು ಕಾಲದಲ್ಲಿ ಪ್ರೇಕ್ಷಕರ ಮನದಲ್ಲಿ ಪ್ರೀತಿಯ ʼಮೆರವಣಿಗೆʼಯನ್ನು ಹೊತ್ತು ಸಾಗಿದೆ ʼಮನಸಾರೆʼ ಬೆಡಗಿ ಐಂದ್ರಿತಾ ರೇ( Aindritha Ray) ಕೂಡ ಒಬ್ಬರು. ದಿಗಂತ್ (Diganth Manchale) ಜತೆ ಮದುವೆಯಾದ ಬಳಿಕ ಐಂದ್ರಿತಾ ರೇ ಸಿನಿಮಾರಂಗದಿಂದಲೇ ದೂರವಾಗಿಬಿಟ್ರಾ ಎನ್ನುವ ಮಾತುಗಳನ್ನು ಅನೇಕರು ಆಡುತ್ತಿದ್ದರು. ಆದರೆ ಅವರು ಕನ್ನಡದ ಸಿನಿಮಾದಲ್ಲಿ ಯಾಕ ನಟಿಸುತ್ತಿಲ್ಲ ಎನ್ನುವುದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ʼನ್ಯೂಸ್ 18 ಕನ್ನಡʼಕ್ಕೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿರುವ, “ನಾನು ಹಿಂದಿನ ವರ್ಷದವರೆಗೂ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದೆ. ಎರಡು ಹಿಂದಿ ಹಾಗೂ ವೆಬ್ ಸಿರೀಸ್ ಗಳನ್ನು ಮಾಡಿದೆ. ಕನ್ನಡದಲ್ಲಿ ನನಗೆ ಒಳ್ಳೆಯ ಅವಕಾಶಗಳು ಸಿಗಬೇಕೆಂದು ಕಾಯುತ್ತಿದ್ದೇನೆ. ಮದುವೆ ಆದ್ಮೇಲೆ ಎಲ್ಲರೂ ನನ್ನನ್ನೂ ರಿಜೆಕ್ಟ್ ಮಾಡಿಬಿಟ್ಟಿದ್ದಾರೆ. ಮದುವೆ ಆದ್ಮೇಲೆ ನನಗೆ ಆಫರ್ ಗಳು ಸಿಗುತ್ತಿಲ್ಲ. ಇಲ್ಲಿ ನಾನು ಯಾರನ್ನೂ ದೂರಬೇಕು. ಪ್ರೇಕ್ಷಕರನ್ನಾ, ನಿರ್ಮಾಪಕರಿಗಾ ಅಥವಾ ಇಂಡಸ್ಟ್ರಿಗಾ” ಎಂದು ಹೇಳಿದ್ದಾರೆ.
ಇನ್ನು ಕನಸಿನ ಪಾತ್ರದ ಬಗ್ಗೆ ಮಾತನಾಡಿದ ಅವರು, ನನಗೆ ಮಹಿಳಾ ಪ್ರಧಾನ ಪಾತ್ರ ಇಷ್ಟ. ಆದರೆ ಅದಕ್ಕೆ ನಮ್ಮಲ್ಲಿ ಹೆಚ್ಚಿನ ವೀಕ್ಷಕರಿಲ್ಲ. ಮುಂಚೆಯಿಂದಲೂ ನನಗೆ ಕಮರ್ಷಿಯಲ್ ಮೂವಿ ಮಾಡೋದು ಅಂದ್ರೆ ಇಷ್ಟ. ಲವ್, ರೊಮ್ಯಾನ್ಸ್, ಆಕ್ಷನ್ ಹೀಗೆ ಎಲ್ಲವಿರುವ ಚಿತ್ರಗಳು ಇಷ್ಟವೆಂದು ಅವರು ಹೇಳಿದ್ದಾರೆ.
ಇದೇ ವೇಳೆ ಅವರು ದಿಗಂತ್ ಅವರ ಮುಂದಿನ ಸಿನಿಮಾ ʼಪೌಡರ್ʼ ಹಾಗೂ ಮದುವೆ ಜೀವನದ ಬಗ್ಗೆ ಮಾತನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.