ಜೂಲಿಯೆಟ್ ಮೇಲೆ ಬೃಂದಾ ಕನಸು
Team Udayavani, Feb 23, 2023, 1:16 PM IST
![ಜೂಲಿಯೆಟ್ ಮೇಲೆ ಬೃಂದಾ ಕನಸು](https://www.udayavani.com/wp-content/uploads/2023/02/brinda-1-620x342.jpg)
![ಜೂಲಿಯೆಟ್ ಮೇಲೆ ಬೃಂದಾ ಕನಸು](https://www.udayavani.com/wp-content/uploads/2023/02/brinda-1-620x342.jpg)
ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ ಚಿತ್ರ “ಜೂಲಿಯೆಟ್-2′. ಚಿತ್ರ ಫೆ.24ರಂದು ತೆರೆಕಾಣುತ್ತಿದೆ. ಬೃಂದಾ ಆಚಾರ್ಯ ಈ ಚಿತ್ರದ ನಾಯಕಿ. ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಟಸಿದ್ದ ಬೃಂದಾ ಈಗ “ಜೂಲಿಯೆಟ್’ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಇಡೀ ಸಿನಿಮಾ ತುಂಬಾ ಅವರೇ ತುಂಬಿಕೊಂಡಿದ್ದಾರೆ.
ಹೌದು, “ಜೂಲಿಯೆಟ್-2′ ನಾಯಕಿ ಪ್ರಧಾನ ಚಿತ್ರ. ಇಡೀ ಸಿನಿಮಾ ಬೃಂದಾ ಅವರ ಸುತ್ತವೇ ಸುತ್ತಲಿದೆ. ಈ ಚಿತ್ರಕ್ಕಾಗಿ ಬೃಂದಾ ಸಾಕಷ್ಟು ಶ್ರಮಪಟ್ಟಿದ್ದಾರೆ. ಇದು ಆ್ಯಕ್ಷನ್ ಹಿನ್ನೆಲೆಯಲ್ಲಿ ಸಾಗುವ ಸಿನಿಮಾವಾಗಿದ್ದು, ಈ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಕಲಿತರಂತೆ. ಜೊತೆಗೆ ಇಡೀ ಸಿನಿಮಾದ ಚಿತ್ರೀಕರಣ ಕರಾವಳಿಯ ಕಾಡೊಂದರಲ್ಲಿ ನಡೆದಿದೆ. ಒಂದು ಕಡೆ ಮಳೆ, ಮತ್ತೂಂದು ಕಡೆ ಜಿಗಣೆ ಕಾಟ, ಇನ್ನೊಂದು ಕಾಲಿಗೆ ಅಂಟಿಕೊಳ್ಳುವ ಕೆಸರು… ಇದರ ಮಧ್ಯೆ ಬೃಂದಾ ಚಿತ್ರೀಕರಣ ಮುಗಿಸಿದ್ದಾರೆ.
ಬಾಲ್ಯದಲ್ಲಿ ತನಗಾದ ಅನ್ಯಾಯದ ವಿರುದ್ಧ ಹೋರಾಡುವ ಹುಡುಗಿಯಾಗಿ ಬೃಂದಾಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿರಾಟ್ ನಿರ್ದೇಶನ “ಪಿ.ಎಲ್ ಪ್ರೊಡಕ್ಷನ್’ ಲಾಂಛನದಡಿಯಲ್ಲಿ ಲಿಖೀತ್.ಆರ್. ಕೋಟ್ಯಾನ್ ಬಂಡವಾಳ ಹೂಡಿದ್ದಾರೆ. ನಗರವಾಸಿಯಾದ ಮಗಳು, ತನ್ನ ತಂದೆಯ ಕೊನೆಯ ಆಸೆ ಈಡೇರಿಸಲು ಹುಟ್ಟೂರಿಗೆ ಹೋಗಿ ನೆಲೆಸುತ್ತಾಳೆ. ಅಲ್ಲಿ ಏನೆಲ್ಲಾ ಆಗುತ್ತದೆ ಹಾಗೂ ಹೆಣ್ಣು ಶಾಂತರೂಪಿಯಾದ ಶಾರದೆಯ ರೀತಿ ಇರುತ್ತಾಳೆ. ಆದರೆ ತನಗೆ ತೊಂದರೆಯಾದಾಗ ಆಕೆ ದುರ್ಗೆಯೂ ಆಗುತ್ತಾಳೆ ಎಂಬುದು ಈ ಚಿತ್ರದ ಕಥಾಹಂದರ.
ಕ್ರೈಮ್ ಥ್ರಿಲ್ಲರ್ ಜಾನರ್‌ನ ಈ ಚಿತ್ರಕ್ಕೆ ವಿರಾಟ್ .ಬಿ.ಗೌಡ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ ಶ್ಯಾಂಟೋ ವಿ ಆಂಟೋ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-150x90.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-150x90.jpg)
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
![mallu jamkhandi vidya ganesh movie](https://www.udayavani.com/wp-content/uploads/2025/02/vi-1-150x84.jpg)
![mallu jamkhandi vidya ganesh movie](https://www.udayavani.com/wp-content/uploads/2025/02/vi-1-150x84.jpg)
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
![nagavalli bangale kannada movie](https://www.udayavani.com/wp-content/uploads/2025/02/nagavalli-150x84.jpg)
![nagavalli bangale kannada movie](https://www.udayavani.com/wp-content/uploads/2025/02/nagavalli-150x84.jpg)
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
![ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?](https://www.udayavani.com/wp-content/uploads/2025/02/2-29-150x90.jpg)
![ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?](https://www.udayavani.com/wp-content/uploads/2025/02/2-29-150x90.jpg)
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
![Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ](https://www.udayavani.com/wp-content/uploads/2025/02/1-26-150x90.jpg)
![Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ](https://www.udayavani.com/wp-content/uploads/2025/02/1-26-150x90.jpg)
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
MUST WATCH
ಹೊಸ ಸೇರ್ಪಡೆ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-150x90.jpg)

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
![19](https://www.udayavani.com/wp-content/uploads/2025/02/19-3-150x80.jpg)
![19](https://www.udayavani.com/wp-content/uploads/2025/02/19-3-150x80.jpg)
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
![1-tengu-dsdsa](https://www.udayavani.com/wp-content/uploads/2025/02/1-tengu-dsdsa-150x88.jpg)
![1-tengu-dsdsa](https://www.udayavani.com/wp-content/uploads/2025/02/1-tengu-dsdsa-150x88.jpg)
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
![1-namm-mannu-1](https://www.udayavani.com/wp-content/uploads/2025/02/1-namm-mannu-1-150x84.jpg)
![1-namm-mannu-1](https://www.udayavani.com/wp-content/uploads/2025/02/1-namm-mannu-1-150x84.jpg)
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ