ರಾಮು ಅಗಲಿಕೆಯಿಂದ ಹೃದಯ ಚೂರಾಗಿದೆ : ನಟಿ ಮಾಲಾಶ್ರೀ
Team Udayavani, May 10, 2021, 9:24 AM IST
ಪತಿ ರಾಮುವನ್ನು ಕಳೆದುಕೊಂಡು ದುಃಖದಲ್ಲಿರುವ ನಟಿ ಮಾಲಾಶ್ರೀ ಈಗ ತಮ್ಮ ಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಸಾಂತ್ವನ ಹೇಳಿದ ಎಲರಿಗೂ ಧನ್ಯವಾದ ತಿಳಿಸಿದ್ದಾರೆ. ಈ ಬಗ ಟ್ವೀಟರ್ ನಲ್ಲಿ ತಮ್ಮ ಮನದ ಮಾತು ಹಂಚಿ ಕೊಂಡಿರುವ ಮಾಲಾಶ್ರೀ, “ಕಳೆದ 12 ದಿನಗಳು ನಮ್ಮ ಕುಟುಂಬಕ್ಕೆ ತುಂಬಾ ನೋವಿನ ದಿನಗಳಾಗಿದ್ದವು.
ಪತಿ ರಾಮು ಆಗಲಿಕೆಯಿಂದ ಹೃದಯ ಚೂರಾಗಿದೆ. ಅವರು ನಮಗೆ ಸದಾ ಬೆನ್ನುಲುಬಾಗಿ ಇದ್ದವರು ಮತ್ತು ಮುಂದೆಯೂ ಇರು ತ್ತಾರೆ. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಇಡೀ ಚಿತ್ರ ರಂಗ, ಸ್ನೇಹಿತರು, ಆಪ್ತರು ಬೆಂಬಲ, ಧೈರ್ಯ ತುಂಬಿದ್ದೀರಿ. ಸಿನಿಮಾ ಮಂದಿ, ಮಾಧ್ಯಮ, ಕಲಾವಿದರು, ನಿರ್ಮಾಪಕರು ತಂತ್ರಜ್ಞರು, ರಾಮು ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಷಿ ಗಳು… ಪ್ರತಿ ಯೊಬ್ಬರಿಗೂ ಧನ್ಯವಾದ’ ಎಂದು ಹೇಳಿದ್ದಾರೆ.
ಕೊರೊನಾಕ್ಕೆ ತುತ್ತಾಗಿ ನಿರ್ಮಾಪಕ ರಾಮು ಏ.26ರಂದು ನಿಧನ ಹೊಂದಿದ್ದರು. ಅವರ ನಿರ್ಮಾಣದ “ಅರ್ಜುನ್ ಗೌಡ’ ಚಿತ್ರ ಇನ್ನಷ್ಟೇ ತೆರೆ ಕಾಣಬೇಕು. ಪ್ರಜ್ವಲ್ ದೇವ ರಾಜ್ ನಾಯಕರಾಗಿರುವ ಈ ಚಿತ್ರವನ್ನು ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.