![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 22, 2020, 11:18 AM IST
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟ ದಿ.ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಗುರುವಾರ (ಅಕ್ಟೋಬರ್ 22, 2020) ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಮೇಘನಾ ಗಂಡು ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದ್ದು, ಚಿರಂಜೀವಿಯೇ ಜ್ಯೂನಿಯರ್ ಚಿರಂಜೀವಿಯಾಗಿ ಮತ್ತೆ ಜನಿಸಲಿದ್ದಾರೆ ಎಂದು ಕುಟುಂಬ ಸದಸ್ಯರು ನಂಬಿಕೆ ವ್ಯಕ್ತಪಡಿಸಿದ್ದು, ಇದೀಗ ನಿಜವಾಗಿದೆ.
ಜೂನ್ ನಲ್ಲಿ ಮೇಘನಾ ಪತಿ, ಸ್ಯಾಂಡಲ್ ವುಡ್ ಸ್ಟಾರ್ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದರು. ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿಯಾಗಿದ್ದರು. ಸರ್ಜಾ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಗರ್ಭಿಣಿಯಾಗಿದ್ದ ವಿಚಾರ ಹಂಚಿಕೊಂಡಿದ್ದು, ಚಿರು ಮತ್ತೆ ಹುಟ್ಟಿ ಬರಲಿದ್ದಾರೆ ಎಂದು ತಿಳಿಸಿದ್ದರು.
ಚಿರು ನಿಧನರಾದ ಎರಡು ವಾರಗಳ ನಂತರ ಮೇಘನಾ ಇನ್ಸ್ ಸ್ಟಾಗ್ರಾಮ್ ನಲ್ಲಿ ತನ್ನ ಮನದಾಳ ಹಂಚಿಕೊಂಡಿದ್ದರು. “ಚಿರು ನಾನು ಮತ್ತೆ, ಮತ್ತೆ ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ನಾನು ಏನು ಹೇಳಬೇಕೆಂಬುದನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ನಾನು ಹೇಳಬೇಕಾಗಿರುವ ಮಾತು ಹೇಗೆ ವಿವರಿಸಲಿ…ನೀನು ನನ್ನ ಗೆಳೆಯ, ನೀನು ನನ್ನ ಪ್ರೇಮಿ, ಸಹಪಾಠಿ, ಮಗು, ನನ್ನ ವಿಶ್ವಾಸ, ಪತಿ..ಹೀಗೆ ಇವೆಲ್ಲವನ್ನೂ ಮೀರಿದವನಾಗಿದ್ದೆ. ನೀನು ನನ್ನ ಆತ್ಮದ ಒಂದು ಭಾಗವಾಗಿದ್ದೀಯಾ” ಎಂದು ತಿಳಿಸಿದ್ದರು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.