ನಟಿ ಮೇಘನಾ ರಾಜ್ ಡೈಲಾಗ್ ವಿರುದ್ಧ ಗಂಡ್ ಹೈಕ್ಳ ಆಕ್ರೋಶ! ಏನಿದು ವಿವಾದ
Team Udayavani, Jun 5, 2017, 2:03 PM IST
ಬೆಂಗಳೂರು:ಸಿನಿಮಾದ ಹೆಸರುಗಳು, ಸಿನಿಮಾದಲ್ಲಿನ ಡೈಲಾಗ್ ಗಳು ವಿವಾದಕ್ಕೆ ಸಿಲುಕುವುದು ಹೊಸ ವಿಚಾರವೇನಲ್ಲ. ಈಗ ನಟಿ ಮೇಘನಾರಾಜ್ ಅವರು ಹೇಳಿರುವ ಡೈಲಾಗ್ ವೊಂದು ವಿವಾದಕ್ಕೊಳಗಾಗಿದ್ದು, ಕ್ಷಮೆಯಾಚಿಸುವಂತೆ ಪಟ್ಟು ಹಿಡಿದು ಕೆಲವರು ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ!
ನಟಿ ಮೇಘನಾ ರಾಜ್ ಅವರು ಹೇಳಿರುವ ಡೈಲಾಗ್ ಯಾವುದು? ಮೇಘನಾ ಮನೆ ಮುಂದೆ ಪ್ರತಿಭಟಿಸುತ್ತಿರುವುದು ಯಾಕಾಗಿ ಅಂದರೆ, ಮುಸ್ಸಂಜೆ ಮಹೇಶ್ ಅವರು ನಿರ್ದೇಶನ ಮಾಡಿರುವ ಜಿಂದಾ ಸಿನಿಮಾ ಈ ವಾರ ತೆರೆ ಕಾಣುತ್ತಿದೆ.
ಏತನ್ಮಧ್ಯೆ ಜಿಂದಾ ಸಿನಿಮಾದ ಟ್ರೈಲರ್ ನಲ್ಲಿ ನಟಿ ಮೇಘನಾ ರಾಜ್ ಅವರ , ಈ ಗಂಡು ಎನ್ನುವ ಒಬ್ಬ ಕಚಡಾ ನನ್ನ ಮಕ್ಳು ಪ್ರೀತಿ ಮಾಡುವಾಗ ಸತ್ಯ ಹೇಳಲ್ಲ ಅಲ್ವಾ! ಯಾಕೆ ಫ್ರೀ ಆಗಿ ಎಲ್ಲ ಮುಗಿಸಿಕೊಳ್ಳಬಹುದು ಅಂತನಾ” ಎಂಬ ಭರ್ಜರಿ ಡೈಲಾಗ್ ವಿವಾದಕ್ಕೆ ಕಾರಣವಾಗಿದೆ.
ಗಂಡು ಮಕ್ಕಳನ್ನು ಅವಮಾನಿಸುವ ರೀತಿಯಲ್ಲಿ ಡೈಲಾಗ್ ಇದೆ ಎಂದು ಆರೋಪಿಸಿರುವ ಜನ್ಮಭೂಮಿ ರಕ್ಷಣಾ ಪಡೆಯ ಕಾರ್ಯಕರ್ತರು ಮೇಘನಾ ಮನೆ ಮುಂದೆ ಪ್ರತಿಭಟನೆ ನಡೆಸಿ, ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಆದರೆ ನಟಿ ಮೇಘನಾ ಅವರು ಸ್ಪಷ್ಟನೆ ನೀಡಿ, ಜಿಂದಾ ಒಂದು ನೈಜ ಘಟನೆ ಆಧಾರಿತ ಕಥೆಯನ್ನು ಹೊಂದಿರುವ ಸಿನಿಮಾವಾಗಿದೆ. ನಾನು ಆ ಸಿನಿಮಾದಲ್ಲಿ ಒಂದು ಪಾತ್ರವಾಗಿ ಡೈಲಾಗ್ ಹೇಳಿದ್ದೇನೆಯೇ ಹೊರತು ಮೇಘನಾ ಆಗಿ ಅಲ್ಲ. ಅಷ್ಟೇ ಅಲ್ಲ ಸಿನಿಮಾ ನೋಡಿ ನಾನು ಎಲ್ಲಾ ಗಂಡಸರನ್ನು ಬೈಯುವ ದಾಟಿಯಲ್ಲಿ ಆ ಡೈಲಾಗ್ ಇಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ
Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.