ನನ್ನ ಹೆಸರಿಗೆ ಮಸಿ ಬಳಿಯಬೇಡಿ; ಪೂಜಾಗಾಂಧಿ ನುಡಿ
Team Udayavani, Mar 21, 2019, 8:56 AM IST
ಅದೇನೊ ಗೊತ್ತಿಲ್ಲ. ಚಂದನವನದಲ್ಲಿ ಇತ್ತೀಚೆಗೆ ಒಬ್ಬರಾದ ನಂತರ ಒಬ್ಬರು ನಾಯಕ ನಟಿಯರು ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇಬ್ಬರ ಹೊಡೆದಾಟ ಪ್ರಕರಣವೊಂದರಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರು ತಳುಕು ಹಾಕಿಕೊಂಡಿತ್ತು. ಅಂತೂ ರಾಗಿಣಿ ಒಂದಷ್ಟು ಸಮಜಾಯಿಷಿ ನೀಡಿ ಆ ಪ್ರಕರಣದಿಂದ ಜಾರಿಕೊಂಡಿದ್ದರು.
ಅದರ ಬೆನ್ನಲ್ಲೇ ನಟಿ ಪೂಜಾ ಗಾಂಧಿ ವಿವಾದವೊಂದರಲ್ಲಿ ಸಿಲುಕಿದ್ದರು. ಬೆಂಗಳೂರಿನ ಪ್ರತಿಷ್ಟಿತ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ರೂಂ ಬಾಡಿಗೆ ತೆಗೆದುಕೊಂಡಿದ್ದ ಪೂಜಾ ಮತ್ತು ಅನಿಲ್ ಮೆಣಸಿನಕಾಯಿ ಎನ್ನುವವರು ಅದರ ಬಾಡಿಗೆ ಕಟ್ಟಿಲ್ಲ ಎಂದು ಹೋಟೆಲ್‌ನ ವ್ಯವಸ್ಥಾಪಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಅದಾದ ಬಳಿಕ ಪೂಜಾಗಾಂಧಿ ಬಾಕಿಯಿರುವ ಬಿಲ್ ಮೊತ್ತವನ್ನು ಪಾವತಿಸಿದ್ದರೂ, ಪೂಜಾಗಾಂಧಿ ಹೆಸರು ಅನಿಲ್ ಮೆಣಸಿನಕಾಯಿ ಮತ್ತಿತರ ಜೊತೆ ತಳುಕು ಹಾಕಿಕೊಂಡು ಒಂದಷ್ಟು ಚರ್ಚೆಗೆ ಕಾರಣವಾಗಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲೂ ಒಂದಷ್ಟು ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಉದಯವಾಣಿ ಯೊಂದಿಗೆ ಮಾತಿಗೆ ಸಿಕ್ಕ ಪೂಜಾ ಗಾಂಧಿ, ತಮ್ಮ ವಿರುದ್ದ ಕೇಳಿಬಂದಿರುವ ಆರೋಪಗಳಿಗೆ ಉತ್ತರಿಸಿದ್ದಾರೆ.
ನನಗೂ ಲಲಿತ್ ಅಶೋಕ್ ಹೋಟೆಲ್‌ಗೂ ಹಲವು ವರ್ಷಗಳಿಂದ ಒಡನಾಟವಿದೆ. ನನ್ನ ಪೊ›ಡಕ್ಷನ್ ಹೌಸ್ ಚಿತ್ರಗಳ ಚರ್ಚೆಗಾಗಿ ಆ ಹೋಟೆಲ್‌ನಲ್ಲಿ ರೂಂ ಬಾಡಿಗೆಗೆ ಪಡೆದಿರುವುದು ನಿಜ. ಸಿನಿಮಾಕ್ಕೆ ಸಂಬಂಧಿಸಿದ ಪ್ರಸ್‌ಮೀಟ್, ಅನೇಕ ಇವೆಂಟ್‌ಗಳನ್ನ ಅಲ್ಲಿ ಮಾಡಿದ್ದೇವೆ.
ಇಲ್ಲಿಯವರೆಗೆ ಆ ಹೋಟೆಲ್‌ಗೆ ಸುಮಾರು 56 ಲಕ್ಷ ರೂ ಗಳಷ್ಟು ಬ್ಯುಸಿನೆಸ್ ಕೊಟ್ಟಿದ್ದೇವೆ. ಅದರಲ್ಲಿ 52 ಲಕ್ಷದಷ್ಟು ಬಿಲ್ ಕೂಡ ಕ್ಲಿಯರ್ ಮಾಡಿದ್ದೇನೆ. ಹೀಗಿರುವಾಗಲೇ ನನ್ನ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ನಾನು ಆ ಕಡೆ ಹೆಚ್ಚು ಗಮನ ಕೊಡಬೇಕಾಯಿತು. ಇದರ ನಡುವೆಯೇ ಸಂಹಾರಿಣಿ ಅನ್ನುವ ಸಿನಿಮಾದ ಶೂಟಿಂಗ್ ಕೂ ಇತ್ತು.
ಹೀಗಾಗಿ ನಿಗಧಿತ ಸಮಯಕ್ಕೆ ಹೋಟೆಲ್‌ಗೆ ಹೋಗಲು ಆಗಿರಲಿಲ್ಲ. ಇಷ್ಟರಲ್ಲೆ ಮಿಸ್ ಕಮ್ಯುನಿಕೇಷನ್‌ನಿಂದಾಗಿ ಹೋಟೆಲ್‌ನವರು ಕಂಪ್ಲೇಂಟ್ ಮಾಡಿದ್ದರು. ನನಗೆ ವಿಷಯ ಗೊತ್ತಾಗುತ್ತಿದ್ದಂತೆ. ಕೂಡಲೇ ಬಾಕಿಯಿದ್ದ ಬಿಲ್ ಕೂಡ ಕ್ಲಿಯರ್ ಮಾಡಿದ್ದೇನೆ. ಆದ್ರೆ ಅದಾದ ನಂತರ ಕೆಲವು ಟಿವಿಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ನನ್ನ ಕ್ಯಾರೆಕ್ಟರ್‌ಗೆ ಮಸಿ ಬಳಿಯುವಂಥ ಸುದ್ದಿಗಳು ಪ್ರಸಾರವಾಗುತ್ತಿವೆ. ನನ್ನ ಹೆಸರಿನ ಜೊತೆ ಕೆಲವರ ಹೆಸರುಗಳನ್ನು ಸೇರಿಸಿ ಇಲ್ಲಸಲ್ಲದ ವರದಿ ಪ್ರಸಾರ ಮಾಡಲಾಗುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಿದ್ದರೂ ಅನಗತ್ಯವಾಗಿ ನನ್ನ ಹೆಸರನ್ನು ಪದೇ ಪದೇ ಬಳಸುತ್ತಿದ್ದಾರೆ. ದಯವಿಟ್ಟು ಹೀಗೆ ಮಾಡಬೇಡಿ ಎನ್ನುವುದು ಪೂಜಾ ಗಾಂಧಿ ಅಳಲು.
ಸದ್ಯ ನಾನು ನನ್ನಷ್ಟಕ್ಕೆ ನನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಹೀಗೆ ಪದೇ ಪದೇ ನನ್ನನ್ನೇ ಏಕೆ ವಿವಾದಕ್ಕೆ ಗುರಿ ಮಾಡಲಾಗುತ್ತಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ನನಗೆ ನನ್ನದೇ ಆದ ವೈಯಕ್ತಿಕ ಬದುಕಿದೆ. ಹೀಗೆ ವಿವಾದಗಳಾದರೆ ನನ್ನ ಜೀವನ ಏನಾಗಬೇಕು ಎಂದು ಪ್ರಶ್ನಿಸುತ್ತಾರೆ ಪೂಜಾ ಗಾಂಧಿ.
ಇನ್ನು ಹೋಟೆಲ್‌ನವರು ಕೊಟ್ಟಿರುವ ದೂರಿನಲ್ಲಿ ಯಾವುದೇ ಸ್ಪಷ್ಟನೆ ಇಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅನಿಲ್ ಮೆಣಸಿನಕಾಯಿ, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಹೆಸರು ಜೊತೆಗೆ ತಮ್ಮ ಹೆಸರು ಪ್ರಸ್ತಾಪವಾಗಿರುವುದನ್ನೂ ಪೂಜಾ ನಿರಾಕರಿಸಿದ್ದಾರೆ.
ಇವೆಲ್ಲದರ ನಡುವೆ ಜೆಡಿಎಸ್ ಪರ ಪ್ರಚಾರಕ್ಕೆ ಭರ್ಜರಿ ತಯಾರಿ ನಡೆಸಿರುವ ಪೂಜಾ ಗಾಂಧಿ ಏಪ್ರಿಲ್1 ರಿಂದ ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಪರವಾಗಿ ಪ್ರಚಾರ ಕೈಗೊಳ್ಳಲಿ¨ªಾರೆ. ಬಳಿಕ ರಾಜ್ಯಾದ್ಯಂತ ನಡೆಯೋ ಜೆಡಿಎಸ್ ಯಾತ್ರೆಯಲ್ಲಿ ಪೂಜಾ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.