ಆ್ಯಕ್ಷನ್ ಹೀರೋಯಿನ್ಸ್ ಗೆ ಒಂದು ಹ್ಯಾಟ್ಸಾಫ್: ಪೂಜಾಗಾಂಧಿ
Team Udayavani, Feb 22, 2021, 3:26 PM IST
“ಮಾಲಾಶ್ರೀ ಸೇರಿದಂತೆ ಆ್ಯಕ್ಷನ್ ಹೀರೋಯಿನ್ ಗಳಿಗೊಂದು ಹ್ಯಾಟ್ಸಾಫ್’ – ಹೀಗೆ ಹೇಳಿ ನಗೆ ಬೀರಿದರು ಪೂಜಾ ಗಾಂಧಿ. ನಟಿ ಪೂಜಾಗಾಂಧಿ ಹೀಗೆ ಹೇಳಲು ಕಾರಣ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಅವರು ಪಟ್ಟ ಕಷ್ಟ.
ಹೌದು, ಪೂಜಾಗಾಂಧಿ “ಸಂಹಾರಿಣಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ. ಪೂಜಾ ಇಷ್ಟು ದಿನ ಮಾಡಿರದಂತಹ ಸಿನಿಮಾ. ಈ ಚಿತ್ರದಲ್ಲಿ ಬರೋಬ್ಬರಿ ಆರು ಫೈಟ್ ಇದ್ದು, ಪೂಜಾ ಸಖತ್ತಾಗಿಯೇ ಫೈಟ್ ಮಾಡಿದ್ದಾರಂತೆ. ಆದರೆ, ಈ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಕಷ್ಟವಾಗಿದೆ. ಆಗ ಅವರಿಗೆ ನೆನಪಾಗಿದ್ದು ಮಾಲಾಶ್ರೀ ಹಾಗೂ ಇತರ ಆ್ಯಕ್ಷನ್ ಹೀರೋಯಿನ್‌ಗಳು.
ಇದನ್ನೂ ಓದಿ:ಸುಧಾರಾಣಿ ಸಿನಿಪಯಣಕ್ಕೆ 35ರ ಸಂಭ್ರಮ
“ಆ್ಯಕ್ಷನ್ ಸಿನಿಮಾ ಮಾಡೋದು ಸುಲಭಲ್ಲ. ಸಾಕಷ್ಟು ಕಷ್ಟಪಟಿದ್ದೇನೆ. ಮಾಲಾಶ್ರೀ ಮೇಡಂಗೊಂದು ಹ್ಯಾಟ್ಸಾಫ್. ಅವರು ಅಷ್ಟೊಂದು ಆ್ಯಕ್ಷನ್ ಸಿನಿಮಾಗಳನ್ನು ಮಾಡಿದ್ದಾರೆ. ಅದರ ಹಿಂದಿನ ಶ್ರಮ ನನನೆ ಈಗ ಅರ್ಥವಾಗುತ್ತಿದೆ. ಅವರನ್ನೆಲ್ಲಾ ಸ್ಫೂರ್ತಿಯಾಗಿ ತಗೊಂಡು ನಾನು ಈ ಸಿನಿಮಾದಲ್ಲಿ ಆ್ಯಕ್ಷನ್ ಮಾಡಿದೆ’ ಎನ್ನುತ್ತಾರೆ ಪೂಜಾಗಾಂಧಿ.
ಪೂಜಾ ಗಾಂಧಿ ಕೆರಿಯರ್‌ನ ಮೊದಲ ಆ್ಯಕ್ಷನ್ ಸಿನಿಮಾ “ಸಂಹಾರಿಣಿ’. ಈ ಅವಕಾಶ ಅವರಿಗೆ ಸಿಕ್ಕಿದ್ದು “ದಂಡುಪಾಳ್ಯ’ ಸಿನಿಮಾದಿಂದ. “ದಂಡುಪಾಳ್ಯ’ ಸಿನಿಮಾ ನೋಡಿದ ತಮಿಳಿನ ನಿರ್ಮಾಪಕರು ಈ ಸಿನಿಮಾ ಮಾಡಲು ಮುಂದಾದರಂತೆ. ಹಾಗಂತ ಆ ಸಿನಿಮಾಕ್ಕೂ “ಸಂಹಾರಿಣಿ’ಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದು ಪೂಜಾ ಮಾತು.
ಈ ಚಿತ್ರದಲ್ಲಿ ಅಂಡರ್‌ವಾಟರ ಫೈಟ್, ಕಾಡು, ಸ್ವಿಮ್ಮಿಂಗ್ ಪೂಲ್.. ಹೀಗೆ ಸಾಕಷ್ಟು ಲೊಕೇಶನ್‌ಗಳಲ್ಲಿ ಫೈಟ್ ಮಾಡಿದ್ದಾರಂತೆ. “ಚಿತ್ರದಲ್ಲಿನ ವಿಲನ್‌ಗಳೆಲ್ಲರೂ ಆರಡಿ. ಅವರ ಜೊತೆ ಎಲ್ಲಾ ಫೈಟ್ ಮಾಡಿದ್ದೇನೆ. ಶೂಟಿಂಗ್ ಸಮಯ ಸಾಕಷ್ಟು ತಮಾಷೆಯಿಂದ ಕೂಡಿತ್ತು’ ಎನ್ನುತ್ತಾರೆ ಪೂಜಾ ಗಾಂಧಿ. ಈ ಚಿತ್ರದಲ್ಲಿ ಮಹಿಳೆಯರನ್ನು ಎದುರು ಹಾಕಿಕೊಂಡರೆ ಏನಾಗುತ್ತದೆ ಎಂಬ ಸಂದೇಶವೂ ಇದೆಯಂತೆ.
ಇದನ್ನೂ ಓದಿ: 65ರ ಹರೆಯದಲ್ಲೂ ಕಟ್ಟುಮಸ್ತಾದ ದೇಹ… ‘still I Am Fit’ ಎಂದ ಈ ಹಿರಿಯ ನಟ ಯಾರು ?
“2ಎಂ ಸಿನಿಮಾಸ್’ ಬ್ಯಾನರ್‌ನಲ್ಲಿ ಶಬರೀಶ್ ಕೆ.ವಿ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜವಾಹರ್ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Lacchi Kannada Movie: ಲಚ್ಚಿ ಚಿತ್ರಕ್ಕೆ ಪ್ರಶಸ್ತಿ ಗರಿ
Chowkidar Movie: ಶೂಟಿಂಗ್ ಮುಗಿಸಿದ ಚೌಕಿದಾರ್
KD Movie: ಪ್ರೇಮ್ ಕೆಡಿಗೆ ಅಜಯ್ ದೇವಗನ್ ಸಾಥ್; ಶಿವನ ಹಾಡಿಗೆ ಧ್ರುವ ಭರ್ಜರಿ ಸ್ಟೆಪ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.