ಮತ್ತೆ ಪ್ರೇಮ ಪರ್ವ


Team Udayavani, Sep 26, 2017, 12:51 PM IST

26-ZZ-20.jpg

ಅದೊಂದು ದಿನ ನಿರ್ಮಾಪಕ ಶ್ರೀರಾಮ್‌ ಫೋನ್‌ ಮಾಡಿದ್ದರಂತೆ. ತೆಲುಗಿನ “ಸೋಗ್ಗಾಡೇ ಚಿನ್ನಿನಾಯನ’ ಎಂಬ ಚಿತ್ರವನ್ನು ಕನ್ನಡಕ್ಕೆ ರೀಮೇಕ್‌ ಮಾಡುತ್ತಿದ್ದು, ಚಿತ್ರದಲ್ಲಿ ಒಂದು ಪಾತ್ರ ಮಾಡಬೇಕು ಎಂದರಂತೆ. ಪ್ರೇಮಾ ಚಿತ್ರ ನೋಡಿದ್ದಾರೆ. ಕಥೆ ಇಷ್ಟವಾಗಿದೆ. ತಕ್ಷಣ “ಐ ವಿಲ್‌ ಡೂ ಇಟ್‌’ ಎಂದಿದ್ದಾರೆ. ಅಲ್ಲಿಗೆ ಪ್ರೇಮ ಮತ್ತೆ ವಾಪಸ್ಸು ಬಂದಿದ್ದಾರೆ. ಅಷ್ಟೇ ಅಲ್ಲ, “ಉಪೇಂದ್ರ’ ಚಿತ್ರದ ನಂತರ, ಈ ಚಿತ್ರದಲ್ಲಿ ಮತ್ತೆ ಉಪೇಂದ್ರ ಅವರೊಂದಿಗೆ ನಟಿಸುತ್ತಿದ್ದಾರೆ. ಇನ್ನೇನು “ಉಪೇಂದ್ರ ಮತ್ತೆ ಬಾ’ ಚಿತ್ರದ ಈ ತಿಂಗಳು ಬಿಡುಗಡೆಯಾಗಲಿದೆ. ಈ ಮೂಲಕ ಪ್ರೇಮ ಬಹಳ ದಿನಗಳ ನಂತರ ಮತ್ತೆ ಚಿತ್ರರಂಗಕ್ಕೆ ವಾಪಸ್ಸು ಬಂದಿದ್ದಾರೆ. ಇಷ್ಟು ದಿನ ಪ್ರೇಮ ಯಾಕೆ ಸಿನಿಮಾ ಮಾಡಲಿಲ್ಲ? ಈ ಪ್ರಶ್ನೆ ಸಹಜ. ಅದೇ ಪ್ರಶ್ನೆಯನ್ನು ಅವರ ಮುಂದಿಟ್ಟಾಗ …

“ಸಿನಿಮಾ ಮಾಡದಿರಬಹುದು. ಆದರೆ, ಬಹಳ ಬಿಝಿ ಇದ್ದೆ’ ಥಟ್ಟಂತ ಹೇಳಿದರು ಪ್ರೇಮ.  
ಅವರು ಮಾತಿಗೆ ಸಿಕ್ಕಿ ಅದ್ಯಾವ ಕಾಲವಾಗಿತ್ತೋ ನೆನಪಿಲ್ಲ. ಅದೊಂದು ದಿನ “ಫ‌ಸ್ಟ್‌ ಲವ್‌’ ಎಂಬ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುವುದಕ್ಕೆ ಚಾಮುಂಡೇಶ್ವರಿ ಸ್ಟುಡಿಯೋಗೆ ಪ್ರೇಮ ಬಂದಿದ್ದರು. ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿ ವೇದಿಕೆ ಇಳಿದರು. ಪ್ರೇಮ ಮಾತಾಡಿದ್ದು ಆಗಲೇ. ಮೊದಲೇ ಹೇಳಿದಂತೆ ಅವರು ಮಾತಿಗೆ ಸಿಕ್ಕಿ ಬಹಳ ದಿನಗಳಾಗಿತ್ತು. ಈ ಗ್ಯಾಪ್‌ನಲ್ಲಿ ಅವರು ಏನು ಮಾಡುತ್ತಿದ್ದರು, ಯಾಕೆ ಚಿತ್ರರಂಗದಿಂದ ದೂರವಿದ್ದರು, ಅವರಿಗೆ ಅವಕಾಶಗಳು ಬರುತಿತ್ತಾ …? ಹೀಗೆ ಅವರನ್ನು ಕೇಳ್ಳೋಕೆ ಹಲವಾರು ಪ್ರಶ್ನೆಗಳು ಇದ್ದವು. ಸರಿ ಒಂದೊಂದನ್ನೇ ಅವರೆದುರು ಇಡಲಾಯಿತು.

“ಈ ಗ್ಯಾಪ್‌ನಲ್ಲಿ ನಾನು ಬಹಳ ಕಲಿತಿದ್ದೀನಿ. ನಿಜ ಹೇಳಬೇಕೆಂದರೆ, ನಾನು ಸಿನಿಮಾ ಮಾಡದಿದ್ದರೂ ಬಹಳ ಬಿಝಿಯಾಗಿದ್ದೆ. ಹಿಂದೊಮ್ಮೆ ನಾನು ಸತತವಾಗಿ ಚಿತ್ರಗಳಲ್ಲಿ ನಟಿಸುವಾಗ, ತಂದೆ-ತಾಯಿ ಅವರೊಂದಿಗೆ ಹೆಚ್ಚು ಸಮಯ ಇರೋಕೆ, ಅವರ ಬಗ್ಗೆ ಗಮನ ಕೊಡೋಕೆ ಆಗುತ್ತಿರಲಿಲ್ಲ. ಈಗ ಅವರಿಗಾಗಿ ಟೈಮ್‌ ಕೊಡ್ತಿದ್ದೀನಿ. ಈ ವಯಸ್ಸಲ್ಲಿ ಅವರು ಸಂತೋಷವಾಗಿರಬೇಕು ಅಂತ ನನ್ನ ಆಸೆ. ಅವರ ಜೊತೆಗೆ ನಾನೂ ಸಂತೋಷವಾಗಿದ್ದೀನಿ’ ಎನ್ನುತ್ತಾರೆ ಪ್ರೇಮ.

ಒಂದು ಬ್ರೇಕ್‌ ಬೇಕು ಅಂತ ಪ್ರೇಮಗೆ ಅನಿಸುತಿತ್ತಂತೆ. ಅದಕ್ಕೆ ಕಾರಣವೂ ಇದೆ. 
“ನಂಗೆ ಒಂದೇ ತರಹದ ಚಿತ್ರಗಳನ್ನ, ಪಾತ್ರಗಳನ್ನ ಮಾಡೋಕೆ ಇಷ್ಟವಿಲ್ಲ. ವಿಭಿನ್ನವಾದ ಸಿನಿಮಾಗಳು ಮಾಡಬೇಕು ಅಂತ ಆಸೆ. ಆಗ ನನಗೆ ಅಂತಹ ಪಾತ್ರಗಳೇ ಸಿಗೋದು; ಇಷ್ಟವಾಗೋದು. ಅದಕ್ಕೇ ಕಂಟಿನ್ಯೂಸ್‌ ಆಗಿ ಮಾಡುತ್ತಿದ್ದೆ. ಈಗಲೂ ವಿಭಿನ್ನ ಪಾತ್ರಗಳು ಬಂದರೆ, ಅಭಿನಯಿಸೋಕೆ ನಾನು ಸಿದ್ಧ. ಜನ ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಬಂದಾಗ, ಅವರಿಗೂ ಏನೋ ನಿರೀಕ್ಷೆ ಇರುತ್ತೆ. ಅವರ ಆಸೆಗೆ ಭಂಗ ತರೋಕೆ ನನಗೆ ಇಷ್ಟವಿಲ್ಲ. ಮಾಡಿದರೆ ವಿಭಿನ್ನವಾಗಿ ಏನಾದರೂ ಮಾಡಬೇಕು. ಅದೇ ನನ್ನ ಆಸೆ. ಈಗ ನೋಡಿ ಹಿಂದಿಯಲ್ಲಿ ಕಾಜೋಲ್‌, ಶ್ರೀದೇವಿ ಅವರೆಲ್ಲಾ ಎಷ್ಟು ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ನನಗೂ ಅದೇ ತರಹದ ಆಸೆ ಇದೆ. ಒಳ್ಳೆಯ ಪಾತ್ರ ಮಾಡಬೇಕು, ಆ ಪಾತ್ರಕ್ಕೆ ಜೀವ ತುಂಬಬೇಕು ಅಂತ. ಅಂತಹ ಪಾತ್ರ ಬಂದರೆ ಖಂಡಿತಾ ಮಾಡುತ್ತೀನಿ’ ಎನ್ನುವುದು ಅವರ ಅಭಿಪ್ರಾಯ.

ಒಂದು ಪಾತ್ರ ಬರೆದು, ಅದನ್ನು ಯಾರಿಂದ ಮಾಡಿಸಬೇಕು ಅಂತ ಯೋಚಿಸುವುದಕ್ಕಿಂತ, ಪಾತ್ರ ಬರೆಯುವಾಗಲೇ ಅದು ಇಂಥವರೇ ಮಾಡಬೇಕು ಎಂದು ನಿರ್ದೇಶಕರಿಗೆ ಗೊತ್ತಿರಬೇಕು ಎನ್ನುತ್ತಾರೆ ಪ್ರೇಮ. 
“ಐ ನೀಡ್‌ ಇಂಟಲೆಕುಯಲ್‌ ಡೈರೆಕ್ಟರ್- ಸಾಧಾರಣ ನಿರ್ದೇಶಕರು ಬೇಡ. ಕಥೆ ಬರೆಯುವಾಗಲೇ, ಈ ಪಾತ್ರವನ್ನ ಪ್ರೇಮ ಅವರೇ ಮಾಡಿದರೆ ಚೆನ್ನ ಅಂತ ಗೊತ್ತಾಗಬೇಕು. ಸುನೀಲ್‌ ಕುಮಾರ್‌ ದೇಸಾಯಿ, ಉಪೇಂದ್ರ ಎಲ್ಲರೂ ಪಾತ್ರ ಬರೆಯುವಾಗಲೇ, ಈ ಪಾತ್ರವನ್ನು ಮಾಡಬೇಕು ಎಂದು ನಿರ್ಧರಿಸೋರು. ಅವರಿಗೆ ನಾನು ಪಾತ್ರ ಮಾಡುತ್ತೀನಿ ಎಂಬ ನಂಬಿಕೆ ಇತ್ತು. ಅದೇ ತರಹದ ನಂಬಿಕೆ ಬೇರೆ ನಿರ್ದೇಶಕರಿಗೂ ಇರಬೇಕು. ಉದಾಹರಣೆಗೆ- “ಶಿಶಿರ’ ಕಥೆ ತಗೊಂಡು ಮಂಜು ಸ್ವರಾಜ್‌ ಬಂದಾಗ, “ನಾನು ಮಾಡಲ್ಲ, ನನಗೆ ಸೆಟ್‌ ಆಗಲ್ಲ, ಇದು ಹೋಗಲ್ಲ …’ ಅಂತ ಹೇಳಿದ್ದೆ. ಆದರೆ, ಅವರು ಬಿಡಲಿಲ್ಲ. 10 ಸಾರಿ ಬಂದು ಕನ್ವಿನ್ಸ್‌ ಮಾಡೋಕೆ ಪ್ರಯತ್ನಪಟ್ಟರು. ಅವರಿಗೆ ನಿರಾಶೆ ಮಾಡುವುದಕ್ಕೆ ನನಗೆ ಇಷ್ಟವಿರಲಿಲ್ಲ’ ಹಾಗಾಗಿ ಒಪ್ಪಿಕೊಂಡೆ ಎನ್ನುತ್ತಾರೆ ಪ್ರೇಮ.

ಹಾಗಂತ ದೊಡ್ಡ ನಿರ್ದೇಶಕರ ಚಿತ್ರದಲ್ಲೇ ನಟಿಸಬೇಕು ಎಂಬ ಆಸೆ ಇಲ್ಲ ಎನ್ನುವುದು ಪ್ರೇಮ ಅವರ ಮಾತಿನ ಅರ್ಥ. 
“ಇಲ್ಲಿ ದೊಡ್ಡವರು, ಚಿಕ್ಕವರು ಎಂಬ ಪ್ರಶ್ನೆ ಬರಲ್ಲ. ಸಿನಿಮಾ ಅನ್ನೋದು ಯಾರು ಬೇಕಾದರೂ ಮಾಡಬಹುದು. ಆದರೆ, ಒಂದೊಳ್ಳೆಯ ಚಿತ್ರಕ್ಕೆ ಟೇಸ್ಟು, ಪ್ಯಾಶನ್‌ ಎಲ್ಲವೂ ಬೇಕು. ಬರೆಯುವಾಗಲೇ ಏನಾದರೂ ವಿಭಿನ್ನವಾಗಿ ಬರೆದಿರಬೇಕು ಮತ್ತು ಪಾತ್ರ ಕೇಳುತ್ತಿದ್ದಂತೆ, ಇವರೇನೋ ವಿಶೇಷವಾಗಿ ಬರೆದಿದ್ದಾರೆ ಅಂತ ನಮಗೂ ಅನಿಸಬೇಕು. ಅದು ಆಗ್ತಿಲ್ಲ. ಎಷ್ಟೋ ಬಾರಿ ಕಥೆ ಕೇಳುವಾಗಲೇ ಗೊತ್ತಾಗಿಬಿಡುತ್ತದೆ. ಆಗ ನಿರಾಕರಿಸದೆ ಬೇರೆ ದಾರಿಯೇ ಇಲ್ಲ. ಆ ತರಹದ ಅದೆಷ್ಟು ಚಿತ್ರಗಳನ್ನು ನಿರಾಕರಿಸಿದ್ದೀನಿ ಗೊತ್ತಾ?’ ಎಂದು ಪ್ರಶ್ನಿಸಿದರು ಪ್ರೇಮ.

ಅದಕ್ಕೆ ಉತ್ತರವಾಗಿ ಅವರೇ ಮಾತು ಮುಂದುವರೆಸಿದರು- 
“ಯಾವುದೋ ಕಥೆ ಒಪ್ಪಿಕೊಂಡು, ನಾನು ಈಗಲೂ ಬಿಝಿಯಾಗಬಹುದು. ಅದು ದೊಡ್ಡ ವಿಷಯವೇ ಅಲ್ಲ. ಆದರೆ, ನನಗೆ ಅದು ಇಷ್ಟವಿಲ್ಲ. ವರ್ಷಕ್ಕೆ ಒಂದೇ ಚಿತ್ರ ಮಾಡಿದರೂ, ಒಂದೇ ಕಥೆ ಒಪ್ಪಿದರೂ, ಅದು ಚೆನ್ನಾಗಿರಬೇಕು ಮತ್ತು ತೃಪ್ತಿ ಕೊಡಬೇಕು ಎಂದು ಬಯಸುವವಳು ನಾನು. ಅಮೀರ್‌ ಖಾನ್‌ ಎರಡು ವರ್ಷಕ್ಕೊಂದು ಚಿತ್ರ ಮಾಡಿದರೂ, ತಮಗೆ ಖುಷಿಯಾಗುವ ಮತ್ತು ತೃಪ್ತಿಯಾಗುವ ಪಾತ್ರಗಳನ್ನೇ ಯಾಕೆ ಮಾಡುತ್ತಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ ಕಾಜೋಲ್‌ ಹೇಗೆ ವಿಭಿನ್ನ ಚಿತ್ರಗಳನ್ನು ಮಾಡುತ್ತಾರೆ? ಇಲ್ಲಿ ಬರವಣಿಗೆ ಮುಖ್ಯ. ಅವರಿಗೋಸ್ಕರ ಪಾತ್ರ ಬರೆಯುವವರು ಇದ್ದಾರೆ… ನಮ್ಮಲ್ಲಿ ಯಾಕೆ ಅದು ಸಾಧ್ಯವಿಲ್ಲ. ವಿಭಿನ್ನ ಅಂದರೆ ಯಾರೂ ಮಾಡದ, ಯಾರೂ ಬರೆಯದ ಪಾತ್ರವನ್ನು ಮಾಡಬೇಕು ಅಂತ ನಾನು ಹೇಳುತ್ತಿಲ್ಲ. ಒಂದು ರೇಂಜ್‌ಗಾದರೂ ವಿಭಿನ್ನತೆ ಇರಬೇಕಲ್ಲವಾ? ನನಗೇನೂ ಸಮಸ್ಯೆ ಇಲ್ಲ. ಒಳ್ಳೆಯ ಪಾತ್ರಕ್ಕೆ ಕಾಯುತ್ತೀನಿ. ಬೇಕಾದರೆ, ಸುಮ್ಮನೆ ಹೀಗೆ ಕೂತಿರ್ತಿನಿ. ಆದರೆ, ಯಾವುದೋ ಒಂದು ಪಾತ್ರ ಆದರೆ ಸಾಕು ಅಂತ ಪಾತ್ರ ಮಾಡುವುದಿಲ್ಲ; ಒಪ್ಪಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿ ಹೊರಟರು ಪ್ರೇಮ.

ಬರಹ: ಚೇತನ್‌; ಚಿತ್ರಗಳು: ಮನು ಮತ್ತು ಸಂಗ್ರಹ

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.