ಫೈರ್‌ನಿಂದ ಹೊರಬಂದ ಪ್ರಿಯಾಂಕ ಉಪೇಂದ್ರ
Team Udayavani, Oct 25, 2018, 3:28 PM IST
ಇತ್ತೀಚೆಗಷ್ಟೇ ಭಾರೀ ಸದ್ದು ಮಾಡುವುದರೊಂದಿಗೆ ಚಾಲನೆ ಗೊಂಡಿದ್ದ “ಫೈರ್’ (ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ) ಸಂಸ್ಥೆಯಿಂದ ನಟಿ ಪ್ರಿಯಾಂಕ ಉಪೇಂದ್ರ ಹೊರ ಬಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಕ “ಕನ್ನಡ ಚಿತ್ರರಂಗದಲ್ಲಿನ ತಾರತಮ್ಯ ಮತ್ತು ಲೈಂಗಿಕ ಕಿರುಕುಳದ ವಿರುದ್ದ ಹೋರಾಟ ನಡೆಸುವ ಉದ್ದೇಶದಿಂದ ಪ್ರಾರಂಭವಾದ “ಫೈರ್’ ಸಂಸ್ಥೆ ತನ್ನ ನಿಲುವು,
ನೀತಿ-ನಿರೂಪಣೆಯಲ್ಲಿ ಸ್ಪಷ್ಟತೆ ಹೊಂದಿಲ್ಲ. ಶ್ರುತಿ ಹರಿಹರನ್ ಪ್ರಕರಣವನ್ನು ಬೇರೆ ನೆಲೆಗಟ್ಟಿನಲ್ಲಿ ನೋಡಿ, ಅದಕ್ಕೊಂದು ಪರಿಹಾರ ಕಂಡು ಕೊಳ್ಳುವ ಅವಕಾಶವಿದ್ದರೂ, ಸಂಸ್ಥೆ ಏಕಮುಖವಾಗಿ ವರ್ತಿಸಿ ಇಡೀ ಪ್ರಕರಣವನ್ನು ಮತ್ತಷ್ಟು ಗೊಂದಲ, ಜಟಿಲವಾಗುವಂತೆ ಮಾಡಿದೆ.
“ಫೈರ್’ ಇನ್ನಷ್ಟು ವಿಸ್ತಾರವಾಗಿ ಯೋಚಿಸುವ ಅಗತ್ಯವಿದೆ. ಜೊತೆಗೆ ಮನಸ್ಥಿತಿ ಹೊಂದಾಣಿಕೆಯಾಗಬೇಕು. ಅಲ್ಲಿಯವರೆಗೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಏನೇ ಸಮಸ್ಯೆಗಳಿದ್ದರೂ ಅದನ್ನು ಗುಟ್ಟಾಗಿ ಪರಿಹರಿಸೋದು ಉದ್ದೇಶವಾಗಿತ್ತೇ ಹೊರತು, ಅದನ್ನು ಮಾಧ್ಯಮ ಮುಂದೆ, ತಂದು ಪ್ರಚಾರ ತೆಗೆದುಕೊಳ್ಳುವುದಾಗಿರಲಿಲ್ಲ. ಆದರೆ, ಈಗ ಆಗುತ್ತಿರುವುದೇ ಬೇರೆ. ಹಾಗಾಗಿ ಇದರಿಂದ
ಹೊರಬಂದಿದ್ದೇನೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.