Kreem Movie Review: ಮಾಟ-ಮಂತ್ರ ಮತ್ತು ಅವಳು!
Team Udayavani, Mar 3, 2024, 4:25 PM IST
ಮಾಟ-ಮಂತ್ರ, ತಂತ್ರ, ಕ್ಷುದ್ರಶಕ್ತಿಗಳ ಆರಾಧಕ, ನರಬಲಿ, ನಿಗೂಢ ನಡೆ… ಇಂತಹ ಕಥಾಹಂದರದ ಹಲವು ಸಿನಿಮಾಗಳು ಕನ್ನಡದಲ್ಲಿ ಬಂದಿವೆ.
“ಕ್ರೀಂ’ ಕೂಡಾ ಅದೇ ಹಾದಿಯಿಂದ ಆರಂಭವಾಗಿ ಅಲ್ಲಲ್ಲಿ ಹೊಸ ತಿರುವುಗಳನ್ನು ಪಡೆದುಕೊಂಡು ಭಿನ್ನವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿರುವ ಸಿನಿಮಾ. ಮೇಲ್ನೋಟಕ್ಕೆ ವ್ಯಾಪಾರಿಯಂತೆ ಕಾಣುವ ಕ್ಷುದ್ರ ಆರಾಧಕ ಹಾಗೂ ಆತನ ನಿಗೂಢ ನಡೆಯಿಂದ ಆರಂಭವಾಗುವ ಸಿನಿಮಾಕ್ಕೆ ಪ್ರಮುಖ ತಿರುವು ಸಿಗುವುದು ನಾಯಕಿಯ ಎಂಟ್ರಿಯಾದ ಮೇಲೆ. ಕ್ಷುದ್ರ ಶಕ್ತಿಗಳ ಆರಾಧಕನ ಜಗತ್ತಿಗೆ ಆಕೆ ಎಂಟ್ರಿಕೊಟ್ಟ ನಂತರ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಅಷ್ಟಕ್ಕೂ ಆಕೆ ಯಾರು, ಆಕೆಯ ಉದ್ದೇಶವೇನು ಎಂಬ ಕುತೂಹಲವಿದ್ದರೆ ಸಿನಿಮಾ ನೋಡಬಹುದು.
ಚಿತ್ರ ತನ್ನ ಅದ್ಧೂರಿತನ, ಲೈಟಿಂಗ್, ಸೆಟ್ ಹಾಗೂ ಕಥೆಯ ವಿಸ್ತಾರ ಹಾಗೂ ಡೀಟೆಲಿಂಗ್‌ನಿಂದ ಗಮನ ಸೆಳೆಯುತ್ತದೆ. ಇದರ ಜೊತೆಗೆ ಸಿನಿಮಾದಲ್ಲಿ ಭಯಂಕರ ಕ್ರೌರ್ಯವೂ ಇದೆ. ಇನ್ನು, ಚಿತ್ರದ ಹಿನ್ನೆಲೆ ಸಂಗೀತ ಕಥೆಯ ಓಟಕ್ಕೆ ಸಾಥ್ ನೀಡಿದೆ.
ಚಿತ್ರದಲ್ಲಿ ಹೆಚ್ಚು ಮಾತಿಲ್ಲ. ಆದರೆ, ಆಡುವ ಮಾತು ತೂಕವಾಗಿದೆ. ಚಿತ್ರದಲ್ಲಿ ನಟಿಸಿರುವ ಸಂಯುಕ್ತಾ ಹೆಗ್ಡೆ ತಮ್ಮ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಉಳಿದಂತೆ ಅಗ್ನಿ ಶ್ರೀಧರ್ ಗಾಂಭೀರ್ಯ ಪಾತ್ರಕ್ಕೆ ಹೊಂದಿಕೆಯಾಗಿದೆ. ಉಳಿದಂತೆ ಅಚ್ಯುತ್ ಕುಮಾರ್, ಅರುಣ್ ಸಾಗರ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.