ಮದುವೆಯಾದರೇನು? ಮಕ್ಕಳಾದರೇನು?;ಸಿಂಧು ನೇರ ಮಾತು
Team Udayavani, Mar 27, 2018, 3:16 PM IST
ಸಿಂಧು ಲೋಕನಾಥ್‌ಗೆ ಮದುವೆಯಾಗಿದ್ದಾರೆಂದು ಗೊತ್ತಾಗಿದ್ದು, ಅವರ ಮದುವೆ ಫೋಟೋ ಓಡಾಡಿದಾಗಲೇ. ಆ ಮಟ್ಟಿಗೆ ಸಿಂಧು ಸದ್ದಿಲ್ಲದೇ ಮದುವೆಯಾಗಿದ್ದರು. ತಮ್ಮ ಕುಟುಂಬ ವರ್ಗ ಹಾಗೂ ಆಪ್ತೆಷ್ಟರನ್ನಷ್ಟೇ ಕರೆದು ಮದುವೆಯಾಗಿದ್ದ ಸಿಂಧು ಅವರ ಸಿನಿಮಾವೊಂದು ಈಗ ಬಿಡುಗಡೆಯಾಗುತ್ತಿದೆ. ಅದು “ಹೀಗೊಂದು ದಿನ’. ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಸಿಂಧು ಲೋಕನಾಥ್ ಚಿಟ್‌ಚಾಟ್‌ನಲ್ಲಿ ಮಾತನಾಡಿದ್ದಾರೆ …
* ಮದುವೆಯಾಗಿದ್ದೀರಿ. ಹೇಗಿದೆ ಲೈಫ್?
– ಆರಾಮವಾಗಿದೆ. ಮದುವೆಯ ನಂತರ ದೊಡ್ಡ ಬದಲಾವಣೆಯೇನೂ ಆಗಿಲ್ಲ. ಆಗ ಹೇಗಿದ್ದೆನೋ ಈಗಲೂ ಹಾಗೇ ಇದ್ದೇನೆ. ಸದ್ಯಕ್ಕೆ “ಹೀಗೊಂದು ದಿನ’ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು ಬಿಟ್ಟರೆ “ಕಾಣದಂತೆ ಮಾಯವಾದನೋ’ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿದು ಹೋಗಿದೆ.
* ನಿಮ್ಮ ಮದುವೆ ಮೊದಲೇ ಪ್ಲ್ರಾನ್ ಆಗಿತ್ತಾ ಅಥವಾ ದಿಢೀರ್ ಆಗಿ ಆಯಿತಾ?
– ಒಂಥರಾ ದಿಢೀರ್ ಆಗಿ ಆಯಿತು ಎಂದರೂ ತಪ್ಪಲ್ಲ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು ಎಂಬ ಟೆನ್ಶನ್ ಅಪ್ಪ-ಅಮ್ಮನಿಗೆ ಇರುತ್ತದೆ. ಅದೇ ರೀತಿ ನಮ್ಮ ಅಪ್ಪ-ಅಮ್ಮ ಕೂಡಾ ನನ್ನ ಮದುವೆ ಬಗ್ಗೆ ಕನಸು ಕಂಡಿದ್ದರು. ಅದರಂತೆ ಹುಡುಗ ನೋಡಿ ಮದುವೆ ಮಾಡಿದರು.
* ಮದುವೆ ನಂತರ ಸಿನಿಮಾ ಮಾಡಬಾರದೆಂದೇನಾದರೂ ಇದ್ಯಾ?
– ಆ ತರಹದ ಯಾವ ಕಟ್ಟುಪಾಡು ಇಲ್ಲ. ಹಿಂದೆಯೂ ಸಿನಿಮಾ ಮಾಡಿದ್ದೆ, ಮುಂದೆಯೂ ಮಾಡುತ್ತೇನೆ. ಆ ವಿಚಾರದಲ್ಲಿ ಯಾರೂ ಇಂಟರ್‌ಫಿಯರ್ ಆಗಲ್ಲ. ಸಾಕಷ್ಟು ಅವಕಾಶಗಳು ಬರುತ್ತಿವೆ. ಒಂದಷ್ಟು ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿವೆ. ಮಾಡಿದ್ದನ್ನೇ ಮಾಡೋದು ಬೇಡ ಎಂದು ನಾನು ಯಾವುದನ್ನೂ ಒಪ್ಪಿಕೊಂಡಿಲ್ಲ.
* ಮದುವೆಯಾದ ನಂತರ ನಟಿಯರಿಗೆ ಬರುವ ಅವಕಾಶದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ ಎಂಬ ಮಾತಿದೆಯಲ್ಲ. ಹೌದಾ?
– ಗೊತ್ತಿಲ್ಲ. ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಮುಖ್ಯವಾಗಿ ಮದುವೆಯಾದ ನಂತರ ಆ ಪಾತ್ರ ಮಾಡಬಾರದು, ಈ ಪಾತ್ರ ಮಾಡಬಾರದು ಎಂಬುದನ್ನು ಯಾವ ನಟಿಯೂ ಹೇಳಿರಲ್ಲ. ಚಿತ್ರರಂಗವೇ ಆ ತರಹ ಭಾವಿಸಿಕೊಂಡಿರೋದು. ಇವರು ಮದುವೆ ಆಗಿಬಿಟ್ಟಿದ್ದಾರೆ, ಇವರ ಬಳಿ ಹೋಗಬಾರದು ಎಂದು. ಅದು ತಪ್ಪು. ಪಾತ್ರಕ್ಕೆ ಹೊಂದಿಕೆಯಾದರೆ ಮದುವೆಯಾದರೇನು, ಮಕ್ಕಳಾದರೇನು? ನಾನು ಆ ವಾದವನ್ನು ಒಪ್ಪೋದಿಲ್ಲ.
* ಸಿನಿಮಾ ಬಿಟ್ಟು ಬೇರೇನು ನಡೀತಾ ಇದೆ?
- ಒಂದು ಶಾರ್ಟ್ ಫಿಲಂ ಮಾಡಿದ್ದೇನೆ. “ಐಯಾಮ್ 30′ ಎಂಬ ಶಾರ್ಟ್ ಫಿಲಂಗೆ ನಾನೇ ಕಥೆ ಬರೆದು, ನಟಿಸಿ-ನಿರ್ಮಿಸಿದ್ದೇನೆ. ಹುಡುಗಿಯರಿಗೆ 25 ದಾಟಿದ ನಂತರ ಮನೆಯಲ್ಲಿ ಮದುವೆ ವಿಚಾರದಲ್ಲಿ ಎಷ್ಟು ಒತ್ತಡ ಹಾಕುತ್ತಾರೆ ಎಂಬ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ.
* “ಹೀಗೊಂದು ದಿನ’ ಬಗ್ಗೆ ಹೇಳಿ?
– ಹೊಸ ಕಾನ್ಸೆಪ್ಟ್ ನ ಸಿನಿಮಾವಿದು. ಒಂದು ದಿನದಲ್ಲಿ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಯಾವುದೋ ಒಂದು ಕೆಲಸಕ್ಕೆ ಹೊರಟಾಗ ಏನೆಲ್ಲಾ ವಿಘ್ನಗಳು ಎದುರಾಗುತ್ತವೆ ಮತ್ತು ಅವೆಲ್ಲವನ್ನು ದಾಟಿ ಹೇಗೆ ತನ್ನ ಗುರಿ ಮುಟ್ಟುತ್ತಾಳೆ ಎಂಬ ಪಾತ್ರ ನನ್ನದು. ಬೆಳಗ್ಗೆ 6 ರಿಂದ 8 ಗಂಟೆಯೊಳಗೆ ನಡೆಯುವ ಕಥೆಯಿದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
Sandalwood: ಪ್ಯಾನ್ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್ ಆಗಲಿದೆ ಕನ್ನಡದ ʼಭಗತ್ʼ
Sandalwood: ಡಿ.27ಕ್ಕೆ ‘ರಾಜು ಜೇಮ್ಸ್ ಬಾಂಡ್’ ರಿಲೀಸ್
Toxic Movie: ಯಶ್ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್‌ಐಆರ್ ದಾಖಲು
Abishek Ambareesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.