5ಡಿಯಲ್ಲಿ ನಾನು ಡಿಫರೆಂಟ್ ಅದಿತಿ.. ಹೊಸ ಚಿತ್ರದ ಮೇಲೆ ಭರ್ಜರಿ ನಿರೀಕ್ಷೆ
Team Udayavani, Aug 10, 2021, 10:34 AM IST
ನಟ ಆದಿತ್ಯ ಮತ್ತು ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ, ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದ “5ಡಿ’ ಚಿತ್ರದ ಚಿತ್ರೀಕರಣ ಇದೇ ಆಗಸ್ಟ್ 4ಕ್ಕೆ ಪೂರ್ಣಗೊಂಡಿತು. ಚಿತ್ರೀಕರಣ ಮುಗಿದ ಬಳಿಕ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “5ಡಿ’ಯ ಚಿತ್ರೀಕರಣದ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿತು.
ಚಿತ್ರದ ಬಗ್ಗೆ ಮಾತನಾಡಿದ ನಟ ಆದಿತ್ಯ, “ಈ ಹಿಂದೆ ಎಸ್. ನಾರಾಯಣ್ ಅವರ ಜೊತೆಗೆ ನಿರ್ಮಾಪಕನಾಗಿ ಕೆಲಸ ಮಾಡಿದ್ದೆ. ಅವರ ಕೆಲಸವನ್ನು ಹತ್ತಿರದಿಂದ ನೋಡಿದ್ದೆ. ಆದರೆ ಅವರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರಲಿಲ್ಲ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಎಸ್. ನಾರಾಯಣ್ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಕಥೆ, ಪಾತ್ರ ಏನೂ ಕೇಳದೆಈಸಿನಿಮಾ ಒಪ್ಪಿಕೊಂಡೆ. ಅಂದುಕೊಂಡಂತೆ ಸಿನಿಮಾ ಚೆನ್ನಾಗಿ ಬಂದಿದೆ. ತಂಡದಲ್ಲಿ ಪ್ರತಿಯೊಬ್ಬರೂ ತುಂಬ ಚೆನ್ನಾಗಿ ತಮ್ಮಕೆಲಸ ನಿರ್ವಹಿಸಿದ್ದಾರೆ’ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು.
ಇದನ್ನೂ ಓದಿ:ಸೀತಾರಾಮ್ ಬಿನೋಯ್ ಟ್ರೇಲರ್ ಬಂತು
ಚಿತ್ರದ ಬಗ್ಗೆ ಮಾತನಾಡಿದ ಅದಿತಿ ಪ್ರಭುದೇವ, “ಇಡೀ ಸಿನಿಮಾ ಟೀಮ್ ಒಂಥರಾ ಫ್ಯಾಮಿಲಿ ಥರ ಇತ್ತು. ತುಂಬ ಎಂಜಾಯ್ ಮಾಡಿಕೊಂಡು ಶೂಟಿಂಗ್ ಮಾಡುತ್ತಿದ್ದೆವು. ಎಲ್ಲರ ಸಹಕಾರದಿಂದ ಶೂಟಿಂಗ್ ಮುಗಿಸಿದ್ದೇ ಶೂಟಿಂಗ್ ಸಿನಿಮಾದ ಕಥೆ, ಪಾತ್ರ ಎಲ್ಲವೂ ಹೊಸಥರವಾಗಿದ್ದು ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದರು.
ಚಿತ್ರೀಕರಣದ ಬಗ್ಗೆ ಮಾತನಾಡಿದ ನಿರ್ದೇಶಕ ಎಸ್. ನಾರಾಯಣ್, “ಕಳೆದ ವರ್ಷ ಆಗಸ್ಟ್ 5ರಂದು ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡುವ ಮೂಲಕ “5ಡಿ’ ಸಿನಿಮಾದ ಕೆಲಸ ಶುರು ಮಾಡಿದ್ದೆವು. ಇದೇ ವರ್ಷ ಜ. 1ರಿಂದ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ಸರಿಯಾಗಿ ಒಂದು ವರ್ಷದೊಳಗೆ ಕುಂಬಳಕಾಯಿ ಒಡೆದು ಸಿನಿಮಾದ ಶೂಟಿಂಗ್ ಮುಗಿಸಿದ್ದೇವೆ. ಕೊರೊನಾ ಲಾಕ್‌ಡೌನ್ ಇಲ್ಲದಿದ್ದರೆ, ಇಷ್ಟೊತ್ತಿಗಾಗಲೇ ನಮ್ಮ ಸಿನಿಮಾ ರಿಲೀಸ್ ಆಗಬೇಕಿತ್ತು. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಿದ್ದು, ಆದಷ್ಟು ಬೇಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ’ ಎಂದರು.
ಕಲಾವಿದರಾದ ಜ್ಯೋತಿ ರೈ, ರಾಜೇಶ್ ರಾವ್, ಆಕಾಶ್, ರವಿಕುಮಾರ್, ಚಿತ್ರದ ನಿರ್ಮಾಪಕ ಸ್ವಾತಿ ಕುಮಾರ್, ಛಾಯಾಗ್ರಹಕ ಕುಮಾರ್, ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು”5ಡಿ’ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.