ವರ್ಷಪೂರ್ತಿ ‘ಅದಿತಿ’ ಮಿಂಚು: ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಲ್ಲಿ ಮದುಮಗಳು
Team Udayavani, Nov 25, 2022, 1:22 PM IST
ಪ್ರತಿ ವರ್ಷ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಒಬ್ಬೊಬ್ಬ ನಾಯಕಿಯರು ಮಿಂಚುತ್ತಿರುತ್ತಾರೆ. ಹಾಗಾದರೆ, 2022ರಲ್ಲಿ ಅತಿ ಹೆಚ್ಚು ಸಿನಿಮಾ ರಿಲೀಸ್ ಆಗಿ ಮಿಂಚಿರುವ ನಟಿ ಯಾರೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಮದ್ವೆ ಹುಡುಗಿ!
ಸದ್ಯ ಕನ್ನಡ ಚಿತ್ರರಂಗದ ಮದ್ವೆ ಹುಡುಗಿ ಯಾರೆಂದು ಎಲ್ಲರಿಗೂ ಗೊತ್ತೇ ಇದೆ. ಅದು ಅದಿತಿ ಪ್ರಭುದೇವ. ಹೌದು, ಅದಿತಿ ಪ್ರಭುದೇವ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ನ.27 ಅದಿತಿ ಆರತಕ್ಷತೆಯಾದರೆ ನ.28 ಮದುವೆ.
ಈ ವರ್ಷದ ರಿಲೀಸ್ ವಿಷಯಕ್ಕೆ ಬರುವುದಾದರೆ ಅದಿತಿ ನಟಿಸಿರುವ ಆರು ಸಿನಿಮಾಗಳು ಈಗಾಗಲೇ ತೆರೆಕಂಡಿದ್ದು, ಏಳನೇ ಸಿನಿಮಾ “ಜಮಾಲಿಗುಡ್ಡ’ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ. ಅಲ್ಲಿಗೆ 2022ರಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿರುವ ನಟಿಯಾಗಿ ಅದಿತಿ ಹೊರಹೊಮ್ಮಿದ್ದಾರೆ. ಈ ವರ್ಷ ಅದಿತಿ ನಾಯಕಿಯಾಗಿ ತೆರೆಮೇಲೆ ಬಂದಿರುವ ಸಿನಿಮಾಗಳ ಪಟ್ಟಿ ನೋಡುವುದಾದರೆ, “ಒಂಭತ್ತನೇ ದಿಕ್ಕು’, “ಓಲ್ಡ್ ಮಾಂಕ್’, “ಗಜಾನನ ಅಂಡ್ ಗ್ಯಾಂಗ್’, “ತೋತಾಪುರಿ’, “ಚಾಂಪಿಯನ್’, “ತ್ರಿಬಲ್ ರೈಡಿಂಗ್’, “ಜಮಾಲಿಗುಡ್ಡ’ ಚಿತ್ರಗಳಲ್ಲಿ ಈ ವರ್ಷ ಅದಿತಿ ಮಿಂಚಿದ್ದಾರೆ. ಇದರ ಜೊತೆಗೆ “ಅಂದೊಂದಿತ್ತು ಕಾಲ’ ಹಾಗೂ “5ಡಿ’ ಚಿತ್ರಗಳು ಕೂಡಾ ಬಿಡುಗಡೆಗೆ ಸಿದ್ಧವಿದ್ದು, ಒಂದು ವೇಳೆ ಡಿಸೆಂಬರ್‌ನಲ್ಲಿ ತೆರೆಕಂಡರೆ, ಈ ವರ್ಷ ಒಂಭತ್ತು ಸಿನಿಮಾಗಳಲ್ಲಿ ಅದಿತಿ ಮಿಂಚಿದಂತಾಗುತ್ತದೆ.
ಹೊಸಬರಿಂದ ಹಿಡಿದು ಸ್ಟಾರ್‌ಗಳವರೆಗೆ…
ಅದಿತಿ ಪ್ರಭುದೇವ ಸಿನಿಮಾ ರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟ ದಿನದಿಂದಲೂ ಬಿಝಿ ನಟಿಯಾಗಿಯೇ ಬಂದವರು. ಸ್ಟಾರ್ ಗಳಿಂದ ಹಿಡಿದು ಹೊಸಬರ ಚಿತ್ರಗಳಲ್ಲೂ ಅದಿತಿ ನಟಿಸುತ್ತಾ ಬಂದ ಪರಿಣಾಮ ಅದಿತಿ ವರ್ಷಪೂರ್ತಿ ಬಿಝಿಯಾಗಿದ್ದಾರೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗಳ ಜೊತೆಗೆ ನಾಯಕಿ ಪ್ರಧಾನ ಹಾಗೂ ಹೊಸ ಬಗೆಯ ಸಿನಿಮಾಗಳಲ್ಲೂ ಅದಿತಿ ಕಾಣಿಸಿಕೊಂಡಿದ್ದಾರೆ.
ಕನಸಿನ ಹುಡುಗ
ಅದಿತಿ ಪ್ರಭುದೇವ ಅವರಿಗೆ ತಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು ಎಂಬ ಕಲ್ಪನೆ ಇತ್ತಂತೆ. ಈಗ ಅದಕ್ಕೆ ತಕ್ಕಂತಹ ಹುಡುಗ ಸಿಕ್ಕಿದ್ದಾನೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅದಿತಿ ಹೇಳಿಕೊಂಡಂತೆ, “ನಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ನನಗೆ ಸ್ಪಷ್ಟತೆಯಿತ್ತು. ಆ ಹುಡುಗನ ಬಗ್ಗೆ ನನ್ನದೇ ಆದ ಒಂದಷ್ಟು ಕನಸುಗಳಿದ್ದವು. ಅದೆಲ್ಲವನ್ನೂ ಪರಿಪೂರ್ಣ ಮಾಡುವಂಥ ಹುಡುಗ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ. ನನಗೆ ಎಂಥ ಹುಡುಗ ಬೇಕು ಅನ್ನೋದನ್ನ ನಮ್ಮ ಮನೆಯವರೇ ಹುಡುಕಿ ಕೊಟ್ಟಿದ್ದಾರೆ. ಮನೆಯವರಿಗೆ ಇಷ್ಟವಾದ ಹುಡುಗ ನನಗೂ ಇಷ್ಟವಾಗಿದ್ದಾರೆ. ಅದು ಇನ್ನೂ ಖುಷಿಯ ವಿಷಯ’ ಎನ್ನುತ್ತಾರೆ ಅದಿತಿ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.