ಶೂಟಿಂಗ್ ಗೆ ಅದಿತಿ ರೆಡಿ: ಹೊಸ ಜೋಶ್ ನಲ್ಲಿ ಕೆಲಸಕ್ಕೆ ಹಾಜರ್
Team Udayavani, Jul 6, 2021, 10:31 AM IST
ಈಗಷ್ಟೇ ಕೋವಿಡ್ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದು,ಕಳೆದ ಎರಡು-ಮೂರು ತಿಂಗಳಿನಿಂದ ಸಿನಿಮಾ ಕೆಲಸಗಳಿಲ್ಲದೆ ಮನೆಯಲ್ಲೇಕುಳಿತಿದ್ದ ನಟ, ನಟಿಯರು ನಿಧಾನವಾಗಿ ಶೂಟಿಂಗ್ ಸೆಟ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ನಟಿ ಅದಿತಿ ಪ್ರಭುದೇವ ಕೂಡ ತಮ್ಮ ಕೈಯಲ್ಲಿರುವ ಸಿನಿಮಾಗಳ ಕೆಲಸ ಶುರು ಮಾಡಲು ರೆಡಿಯಾಗುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ಅದಿತಿ, “ಇತ್ತೀಚಿನ ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದರಿಂದ, ಯಾವಾಗಲೂ ಶೂಟಿಂಗ್, ಡಬ್ಬಿಂಗ್, ಮೀಟಿಂಗ್, ಪ್ರಮೋಶನ್ಸ್ ಅಂಥ ಸಿನಿಮಾ ಕೆಲಸಗಳಲ್ಲಿ ಬಿಝಿಯಾಗಿರುತ್ತಿದ್ದೆ. ಮನೆಯಲ್ಲಿ ಇರೋದಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಮೊದಲೆಲ್ಲ ಎಷ್ಟೋ ಸಲ ಸ್ವಲ್ಪವಾದ್ರೂ ಕೆಲಸದ ನಡುವೆ ಬ್ರೇಕ್ ಸಿಗಬಾರದಾ? ಅಂಥ ಅಂದುಕೊಳ್ಳುತ್ತಿದ್ದೆ. ಆದ್ರೆ, ಇದ್ದಕ್ಕಿದ್ದಂತೆ ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಲ್ಲರಂತೆ ನಾನೂ ಮನೆಯಲ್ಲಿರಬೇಕಾಯ್ತು. ಮೊದಲಿಗೆ ಮನೆಯವರ ಜೊತೆ ಸ್ವಲ್ಪ ದಿನ ಆರಾಮಾಗಿ ಇರಬಹುದಲ್ಲ ಅಂಥ ಅಂದುಕೊಂಡಿದ್ದೆ. ಆಮೇಲೆ ಮನೆಯಲ್ಲೇ ಇದ್ದು, ಬೋರಾಗೋದಕ್ಕೆ ಶುರುವಾಯ್ತು. ಮತ್ತೆ ಯಾವಾಗ ಕೆಲಸ ಶುರುವಾಗುತ್ತೋ, ನಾನು ಮತ್ತೆ ಯಾವಾಗ ಮೊದಲಿನಂತೆ ಬಿಝಿಯಾಗ್ತಿನೋ ಅಂಥ ಅನಿಸೋಕೆ ಶುರುವಾಗಿತ್ತು. ಸದ್ಯ ಅಷ್ಟರಲ್ಲಿ,ಕೋವಿಡ್ ಎರಡನೇ ಅಲೆಯ ಆತಂಕ ನಿಧಾನವಾಗಿ ಕಡಿಮೆಯಾಗುತ್ತಿದೆ. ನಿಧಾನವಾಗಿ ಜನರು ಓಡಾಟ ಶುರು ಮಾಡಿದ್ದಾರೆ, ನಮ್ಮ ಸಿನಿಮಾ ಕೆಲಸಗಳೂ ಶುರುವಾಗುತ್ತಿದೆ’ ಎಂದು ನಿಟ್ಟುಸಿರು ಬಿಡುತ್ತಾರೆ.
ಇದನ್ನೂ ಓದಿ:‘ಕನ್ನಡತಿ’ ಹೇಳಿದ ಕಥೆಯ ವೃತ್ತಾಂತ
ಇನ್ನು ಲಾಕ್‌ಡೌನ್‌ಗೂ ಮೊದಲು ಅದಿತಿ ಪ್ರಭುದೇವ ತಮ್ಮ ಸಿನಿಮಾಗಳಿಗೆ ಬೇಕಾದ ತಮ್ಮ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಅನಿರೀಕ್ಷಿತವಾಗಿ ಬಂದ ಲಾಕ್‌ಡೌನ್ ಅದಿತಿ ಪ್ಲಾನಿಂಗ್ ಅನ್ನು ತಲೆಕೆಳಗಾಗುವಂತೆ ಮಾಡಿದೆ. ಈಗ ಮತ್ತೆ ಅದಿತಿ ತಮ್ಮ ಸಿನಿಮಾಗಳಿಗೆ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುವ ಕೆಲಸದಲ್ಲಿದ್ದು, ಇದೇ ಜುಲೈ ಎರಡನೇ ವಾರದಿಂದ ಮತ್ತೆ ಸಿನಿಮಾ ಕೆಲಸ ಶುರು ಮಾಡುವುದಾಗಿ ಹೇಳುತ್ತಾರೆ ಅದಿತಿ.
ಸದ್ಯ ಅದಿತಿ ಪ್ರಭುದೇವ ಕನ್ನಡದಲ್ಲಿ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅದರಲ್ಲಿ ಈಗಾಗಲೇ “ಒಂಬತ್ತನೇ ದಿಕ್ಕು’, “ದಿಲ್‌ಮಾರ್’, “ತೋತಾಪುರಿ’ ಭಾಗ-1, “ತೋತಾಪುರಿ’ ಭಾಗ-2, “ಓಲ್ಡ್ ಮಾಂಕ್’, “ಆನ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನು “ಗಜಾನನ ಆ್ಯಂಡ್ ಗ್ಯಾಂಗ್’, “ತ್ರಿಬಲ್ ರೈಡಿಂಗ್’ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಉಳಿದಂತೆ “ಅಂದೊದಿತ್ತು ಕಾಲ’, “5ಡಿ’, “ಚಾಂಪಿಯನ್’, “ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಸಿನಿಮಾಗಳು ಇನ್ನೂ ಚಿತ್ರೀಕರಣದ ಹಂತದಲ್ಲಿವೆ.
ಇದಲ್ಲದೆ ಇನ್ನೂ ಎರಡೂ – ಮೂರು ಸಿನಿಮಾಗಳಲ್ಲಿ ಅದಿತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಗಳು ಇನ್ನೂ ಮಾತುಕತೆಯಯ ಹಂತದಲ್ಲಿರುವುದರಿಂದ, ಸಿನಿಮಾಗಳ ಟೈಟಲ್ ಮತ್ತು ಪಾತ್ರಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.