ವಿಜಯ್ ಜೊತೆ ಅದಿತಿ ಕುಸ್ತಿ
Team Udayavani, Sep 12, 2018, 11:43 AM IST
“ದುನಿಯಾ’ ವಿಜಯ್ ಮತ್ತು ಅವರ ಪುತ್ರ ಸಾಮ್ರಾಟ್ “ಕುಸ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಆ ಚಿತ್ರಕ್ಕೆ ರಾಘು ಶಿವಮೊಗ್ಗ ನಿರ್ದೇಶಕರು ಎಂಬುದು ಗೊತ್ತು. ಆದರೆ, ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿರಲಿಲ್ಲ. ಈಗ ನಿರ್ದೇಶಕರು ವಿಜಯ್‌ಗೆ ನಾಯಕಿಯನ್ನು ಅಂತಿಮಗೊಳಿಸಲಾಗಿದೆ.
“ಧೈರ್ಯಂ’ ಖ್ಯಾತಿಯ ಅದಿತಿ ಪ್ರಭುದೇವ “ಕುಸ್ತಿ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಎಲ್ಲಾ ತಯಾರಿ ನಡೆದಿದ್ದು, ಮುಂದಿನ ತಿಂಗಳು “ಕುಸ್ತಿ’ಪಟುವನ್ನು ಸೇರಿಕೊಳ್ಳಲಿದ್ದಾರೆ ಅದಿತಿ ಪ್ರಭುದೇವ. ಅದಿತಿ ಸದ್ಯಕ್ಕೆ ಸುನಿ ನಿರ್ದೇಶನದ “ಬಜಾರ್’ ಮತ್ತು ಮಧುಸೂದನ್ ನಿದೇಶನದ “ಆಪರೇಷನ್ ನಕ್ಷತ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ “ಬಜಾರ್’ ಬಿಡುಗಡೆಗೆ ರೆಡಿಯಾಗಿದೆ.
ಇನ್ನು, “ಕುಸ್ತಿ’ ಚಿತ್ರಕ್ಕಾಗಿ ವಿಜಯ್ ಮತ್ತು ಅವರ ಪುತ್ರ ಸಾಮ್ರಾಟ್ ಇಬ್ಬರೂ ನಾಲ್ಕೈದು ಗಂಟೆಗಳ ಕಾಲ ಕಸರತ್ತು ನಡೆಸಿ, ಪಾತ್ರಕ್ಕೆ ಪಕ್ಕಾ ಆಗಿದ್ದಾರೆ. ವಿಜಯ್, ದೇಹವನ್ನು ಹುರಿಗೊಳಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಕಟ್ಟುಮಸ್ತಾದ ದೇಹಕ್ಕಾಗಿ ಹಗಲಿರುಳು ಶ್ರಮಿಸಿರುವುದೂ ಉಂಟು. ಅವರಂತೆ ಅವರ ಪುತ್ರ ಸಾಮ್ರಾಟ್ ಕೂಡ ಸಿಕ್ಕಾಪಟ್ಟೆ ವರ್ಕೌಟ್ ಮಾಡಿರುವುದು ವಿಶೇಷ.
ವಿಜಯ್ ದಿನವೊಂದಕ್ಕೆ ಐದು ತಾಸು ವರ್ಕೌಟ್ ಮಾಡಿದರೆ, ಸಾಮ್ರಾಟ್ ಕೂಡ ಅಪ್ಪನಿಗಿಂತ ನಾನೇನು ಕಮ್ಮಿ ಎಂಬಂತೆ ದಿನಕ್ಕೆ ನಾಲ್ಕು ತಾಸು ವರ್ಕೌಟ್ ಮಾಡುವ ಮೂಲಕ “ಕುಸ್ತಿ’ ಅಖಾಡಕ್ಕಿಳಿದಿದ್ದಾರೆ. ಈ ಚಿತ್ರದಲ್ಲಿ ರಿಯಲ್ “ಕುಸ್ತಿ’ ಇರಲಿದ್ದು, ಅದಕ್ಕೆ ಪಕ್ಕಾ ಕುಸ್ತಿಪಟುವಿನಂತೆಯೇ ಅಣಿಯಾಗುವ ಅವಶ್ಯಕತೆ ಇದೆ. ಹಾಗಾಗಿ, ಸಾಮ್ರಾಟ್‌ಗೆ ಈಗಾಗಲೇ ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತರಬೇತಿ ಕೊಟ್ಟಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.