Kannada Cinema; ‘ಕಾಂಗರೂ’ ಚಿತ್ರದಲ್ಲಿ ಪೊಲೀಸ್‌ ಪಾತ್ರದಲ್ಲಿ ಆದಿತ್ಯ


Team Udayavani, Dec 5, 2023, 3:38 PM IST

aditya in kangaroo movie

ನಟ ಆದಿತ್ಯ ಸದ್ದಿಲ್ಲದೇ ಹೊಸ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅದು “ಕಾಂಗರೂ’. ಕಿಶೋರ್‌ ಮೇಗಳಮನೆ ಈ ಸಿನಿಮಾದ ನಿರ್ದೇಶಕರು. ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಆದಿತ್ಯ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ನಾಯಕಿಯಾಗಿ ರಂಜನಿ ರಾಘವನ್‌ ಅಭಿನಯಿಸಿದ್ದು, ಸೈಕಿಯಾಟ್ರಿಸ್ಟ್‌ ಡಾಕ್ಟರ್‌ ಪಾತ್ರ ನಿರ್ವಹಿಸಿದ್ದಾರೆ. ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ.

“ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್‌ಗಾಗಿ ಮಾಡಿರುವ ಕಥೆಯಿದು. ಇನ್ನು ಕಾಂಗರೂ ಶೀರ್ಷಿಕೆ ಕುರಿತು ಹೇಳುವುದಾದರೆ, ಕಾಂಗರೂ ಒಂದು ಮುಗ್ಧ

ಪ್ರಾಣಿ. ಅದು ಯಾರಿಗೂ ಏನು ಮಾಡುವುದಿಲ್ಲ. ಮತ್ತು ಈ ಕಾಂಗರೂ ತನ್ನ ಮರಿಗೆ ಜನ್ಮ ನೀಡಿದ ನಂತರ ಅದರ ಹೊಟ್ಟೆಯ ಮೇಲಾºಗದಲ್ಲಿ ಇರುವ ಚೀಲದಲ್ಲಿ ಆ ಮರಿಯನ್ನು ಇಟ್ಟು ಕಾಪಾಡುತ್ತದೆ, ಅಂತ ಸಮಯದಲ್ಲಿ ತನ್ನ ಮರಿಯ ತಂಟೆಗೆ ಯಾರಾದರೂ ಹೋದರೆ ಅದು ಯಾರನ್ನು ಬಿಡುವುದಿಲ್ಲ. ಈ ಪ್ರಾಣಿಯ ನಡವಳಿಕೆಯನ್ನು ಹೋಲುವ ಕಥೆಯಾಗಿರುತ್ತದೆ’ ಎನ್ನುವುದು ನಿರ್ದೇಶಕರು ನೀಡುವ ಮಾಹಿತಿ.

ಬೆಂಗಳೂರು, ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯ ಡಬ್ಬಿಂಗ್‌ ನಡೆಯುತ್ತಿದೆ. ಆರೋಹ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್‌ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ರಾಮಚಂದ್ರಯ್ಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಕಿಶೋರ್‌ ಮೇಗಳಮನೆ ಅವರೆ ಬರದಿದ್ದಾರೆ. ಉದಯ್‌ ಲೀಲ ಛಾಯಾಗ್ರಹಣ ಹಾಗೂ ಅರ್ಜುನ್‌ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.

ಟಾಪ್ ನ್ಯೂಸ್

1-aaaa

Mumbai; ಟೀಮ್ ಇಂಡಿಯಾ ಸ್ವಾಗತ ಮೆರವಣಿಗೆ ಬಳಿಕ ಭಾರೀ ಕಸ ಸಂಗ್ರಹ

pune

Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ

ತನಗೆ ಕಚ್ಚಿದ ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ಹಾವು ಸತ್ತಿತು, ವ್ಯಕ್ತಿ ಬದುಕಿದ

Snake: ಹಾವು ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ… ಹಾವು ಸತ್ತಿತು, ವ್ಯಕ್ತಿ ಬದುಕಿದ

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ

Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

Jigar

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

MUST WATCH

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

ಹೊಸ ಸೇರ್ಪಡೆ

Nanna Devru; ದೇವ್ರ ನಂಬಿ ಬಂದ ಮಯೂರಿ

Nanna Devru; ದೇವ್ರ ನಂಬಿ ಬಂದ ಮಯೂರಿ

1-aaaa

Mumbai; ಟೀಮ್ ಇಂಡಿಯಾ ಸ್ವಾಗತ ಮೆರವಣಿಗೆ ಬಳಿಕ ಭಾರೀ ಕಸ ಸಂಗ್ರಹ

pune

Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ

ತನಗೆ ಕಚ್ಚಿದ ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ಹಾವು ಸತ್ತಿತು, ವ್ಯಕ್ತಿ ಬದುಕಿದ

Snake: ಹಾವು ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ… ಹಾವು ಸತ್ತಿತು, ವ್ಯಕ್ತಿ ಬದುಕಿದ

ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.