ಮದುವೆ ಬಳಿಕ ನಟನೆ ಬಗ್ಗೆ ಯೋಚಿಸಿಲ್ಲ
Team Udayavani, Feb 26, 2017, 11:06 AM IST
ಅಮೂಲ್ಯಗೆ ಜಗದೀಶ್ ಅವರ ಜೊತೆಗೆ ಮದುವೆ ಫಿಕ್ಸ್ ಆಗಿರೋದು ಗೊತ್ತೇ ಇದೆ. ಸದ್ಯಕ್ಕೆ ಎರಡೂ ಕುಟುಂಬದವರು ಅಮೂಲ್ಯ ಮತ್ತು ಜಗದೀಶ್ ಅವರ ಮದುವೆಗೆ ಒಪ್ಪಿದ್ದು, ಮಾರ್ಚ್ 6ಕ್ಕೆ ನಿಶ್ಚಿತಾರ್ಥ ನಡೆಯಲಿದೆ. ಇನ್ನು ಮದುವೆಯ ದಿನಾಂಕ ಮೇನಲ್ಲಿ ಎಂದು ಹೇಳಲಾಗುತ್ತಿದೆ. ಮದುವೆಯ ಸಡಗರದಲ್ಲಿರುವ ಅಮೂಲ್ಯ, ಶಾಪಿಂಗ್ ಮುಂತಾದ ಕೆಲಸಗಳಲ್ಲಿ ಬಿಝಿಯಾಗಿದ್ದಾರೆ. ಈ ನಡುವೆಯೇ ಇಲ್ಲಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
* ಮದುಮಗಳು ಫುಲ್ ಬಿಝಿನಾ?
– ಹೌದು, ಶಾಪಿಂಗ್‌ನಲ್ಲಿ ಬಿಝಿಯಾಗಿದ್ದೇವೆ. ಎಲ್ಲವೂ ದಿಢೀರನೇ ಆಯಿತು. ಹಾಗಾಗಿ, ನಿಶ್ಚಿತಾರ್ಥಕ್ಕೆ ತಯಾರಿ ನಡೆಸುತ್ತಿದ್ದೇವೆ. ಮಾರ್ಚ್ 6ಕ್ಕೆ ನಿಶ್ಚಿತಾರ್ಥ. ಸಮಯ ಬೇರೆ ಕಡಿಮೆ ಇದೆ. ಹಾಗಾಗಿ, ಆ ತಯಾರಿಯಲ್ಲಿ ಎಲ್ಲರೂ ಬಿಝಿಯಾಗಿದ್ದೇವೆ.
* ಇದು ನಿಮ್ಮ ನಿರ್ಧಾರನಾ? ಮನೆಯವರದ್ದಾ?
– ಇಬ್ಬರದ್ದೂ ಎಲ್ಲರೂ ಜೊತೆಯಾಗಿ ಕುಳಿತು ಚರ್ಚಿಸಿದ ನಂತರವೇ ಮದುವೆ ನಿರ್ಧಾರಕ್ಕೆ ಬಂದಿದ್ದು. ಎಲ್ಲವನ್ನು ಪರಿಗಣಿಸಬೇಕು. ಹಾಗಾಗಿ, ನಾನು ಕೂಡಾ ಮದುವೆಗೆ ಒಪ್ಪಿಕೊಂಡೆ.
* ಗಣೇಶ್ ಮನೆಯಲ್ಲಿ ಮದುವೆ ಮಾತುಕತೆ ನಡೆಯಲು ಕಾರಣ?
– ಅವರು ಎರಡೂ ಕುಟುಂಬಗಳಿಗೂ ಫ್ರೆಂಡ್. ಹಿಂದೊಮ್ಮೆ ಅಮ್ಮ, ಗಣೇಶ್ ಹಾಗೂ ಶಿಲ್ಪಾ ಅವರಲ್ಲಿ, “ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಮಾಡುತ್ತೇವೆ’ ಎಂದಿದ್ದಾರೆ. ಅದರಂತೆ ಗಣೇಶ್ ಕುಟುಂಬ ಈ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಗಣೇಶ್ ಕುಟುಂಬ ಪ್ರತಿ ಹಂತದಲ್ಲೂ ನಮ್ಮನ್ನು ಬೆಂಬಲಿಸುತ್ತಲೇ ಬಂದಿದೆ. ಹಾಗಾಗಿ, ಅವರ ಮನೆಯಲ್ಲೇ ಮಾತುಕತೆ ನಡೆದಿದೆ.
* ಮದುವೆಯಾದ ನಂತರ ಅಮೂಲ್ಯ ಸಿನಿಮಾದಲ್ಲಿ ನಟಿಸುತ್ತಾರಾ?
– ಗೊತ್ತಿಲ್ಲ, ಈಗಲೇ ಯಾವುದನ್ನೂ ಪ್ಲಾನ್ ಮಾಡಿಲ್ಲ. ಆ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ. ಅವರ ಕುಟುಂಬ ಕೂಡಾ ಆ ಬಗ್ಗೆ ಏನೂ ಮಾತನಾಡಿಲ್ಲ. ಮುಂದೆ ಆ ಬಗ್ಗೆ ಯೋಚಿಸಬೇಕು.
* ವೈಯಕ್ತಿಕವಾಗಿ ನಿಮ್ಮ ಅಭಿಪ್ರಾಯ?
– ಒಳ್ಳೆಯ ಸಿನಿಮಾ ಸಿಕ್ಕರೆ ಆಲೋಚಿಸಬೇಕು. ಅದು ಕುಟುಂಬದೊಂದಿಗೆ ಚರ್ಚಿಸಿ. ಈಗಲೇ ಈ ಬಗ್ಗೆ ಹೇಳ್ಳೋದು ಕಷ್ಟ. ಏಕೆಂದರೆ ಮೊನ್ನೆಯಷ್ಟೇ ಮದುವೆ ಫಿಕ್ಸ್ ಆಗಿದೆ. ಮುಂದಿನ ಯೋಜನೆಗಳ ಬಗ್ಗೆ ನಾವೇನೂ ಮಾತನಾಡಿಕೊಂಡಿಲ್ಲ.
* ನಿಮ್ಮ ಹುಡುಗನಿಗೆ ಸಿನಿಮಾ ಆಸಕ್ತಿ ಇದೆಯಾ?
– ಇದೆ, ಅವರು ಕೂಡಾ ತುಂಬಾ ಸಿನಿಮಾ ನೋಡುತ್ತಾರೆ.
* ನಿಮ್ಮ ಯಾವ ಸಿನಿಮಾ ಅವರಿಗೆ ಇಷ್ಟ?
– “ಚೆಲುವಿನ ಚಿತ್ತಾರ’, “ಶ್ರಾವಣಿ ಸುಬ್ರಮಣ್ಯ’ ಚಿತ್ರಗಳು ಅವರಿಗೆ ಇಷ್ಟವಂತೆ.
* ಮದುವೆ ಅದ್ಧೂರಿಯಾಗಿರುತ್ತಾ?
– ಮಾರ್ಚ್ 6ಕ್ಕೆ ಎಂಗೇಜ್‌ಮೆಂಟ್ ನಡೆಯಲಿದೆ. ಆ ನಂತರ ಆ ಬಗ್ಗೆ ಚರ್ಚಿಸಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.