ಮತ್ತೆ ರಶ್ಮಿಕಾ ಬ್ರೇಕಪ್ ಸೌಂಡ್
Team Udayavani, Oct 9, 2018, 11:39 AM IST
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಬ್ರೇಕಪ್ ವಿಷಯ ದಿನದಿಂದ ದಿನಕ್ಕೆ ದೊಡ್ಡ ಸುದ್ದಿಯಾಗುತ್ತಲೇ ಇದೆ. ಆ ಬಗ್ಗೆ ಯಾರು ಏನು ಮಾತನಾಡುತ್ತಾರೆಂಬ ಕುತೂಹಲ ಅಭಿಮಾನಿ ವರ್ಗದಿಂದ ಹಿಡಿದು ಪ್ರತಿಯೊಬ್ಬರಿಗೂ ಇರುವುದು ಸುಳ್ಳಲ್ಲ. ಮೊನ್ನೆಯಷ್ಟೇ ಬೆಂಗಳೂರಿಗೆ ಬಂದಿದ್ದ ವಿಜಯ್ ದೇವರಕೊಂಡ “ಬ್ರೇಕಪ್ ಬಗ್ಗೆ ವಿಷಾದವಿದೆ’ ಎಂದಿದ್ದರು.
ಈಗ ತಮ್ಮ ಬ್ರೇಕಪ್ ಕುರಿತು ಸ್ವತಃ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆಂಬ ಸುದ್ದಿ ಜೋರಾಗಿ ಸೌಂಡು ಮಾಡುತ್ತಿದೆ. ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಶ್ಮಿಕಾ ಮಂದಣ್ಣ, ತಮ್ಮ ಬ್ರೇಕಪ್ ಅನ್ನು ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ. “ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತು. ನನ್ನ ಪ್ರೀತಿಯನ್ನು ಅಮ್ಮನ ಬಳಿ ಹೇಳಿಕೊಂಡಾಗ ಅವರು ಕೂಡಾ ಒಪ್ಪಿ, ನಿನ್ನ ಖುಷಿಗೆ ಅಡ್ಡ ಬರೋದಿಲ್ಲ.
ನಿನ್ನ ಇಷ್ಟದಂತೆ ಬದುಕು ಎನ್ನುವ ಮೂಲಕ ನಿಶ್ಚಿತಾರ್ಥ ನಡೆಯಿತು. ನಿಶ್ಚಿತಾರ್ಥದವರೆಗೆ ಎಲ್ಲವೂ ಚೆನ್ನಾಗಿತ್ತು. ಆ ನಂತರ ನಮ್ಮಿಬ್ಬರ ನಡುವೆ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಉಂಟಾಗಲು ಆರಂಭವಾಯಿತು. ಮುಂದೆ ಇಬ್ಬರ ನಡುವೆ ಮಿಸ್ ಅಂಡರ್‌ಸ್ಟಾಂಡಿಂಗ್ ಬಂದು ಮದುವೆಯಾದ ಮೇಲೆ ದೂರವಾಗುವುದಕ್ಕಿಂತ, ಮದುವೆಗೆ ಮುಂಚೆಯೇ ದೂರವಾಗುವುದು ಒಳ್ಳೆಯದು ಎಂದು ಯೋಚಿಸಿ, ಇಬ್ಬರು ಪರಸ್ಪರ ಸಮ್ಮತಿಯೊಂದಿಗೆ ದೂರವಾಗಿದ್ದೇವೆ.
ಈಗ ನನಗೆ ಸಿನಿಮಾವೇ ಎಲ್ಲಾ. ಸಿನಿಮಾವನ್ನಷ್ಟೇ ನಾನು ಪ್ರೀತಿಸುತ್ತೇನೆ’ ಎಂದು ರಶ್ಮಿಕಾ ಹೇಳಿದ್ದಾರೆನ್ನಲಾಗಿದೆ. ಈ ಮೂಲಕ ತಮ್ಮ ಬ್ರೇಕಪ್ ಕುರಿತ ಸುದ್ದಿಗಳಿಗೆ ರಶ್ಮಿಕಾ ಅಧಿಕೃತವಾಗಿ ಬ್ರೇಕ್ ಹಾಕಿದ್ದಾರೆಂದು ಹೇಳಲಾಗುತ್ತಿದೆ. ಸದ್ಯ ರಶ್ಮಿಕಾ ತೆಲುಗು ಸಿನಿಮಾದಲ್ಲಿ ಬಿಝಿ ನಟಿ. ಆಕೆ ನಟಿಸಿದ “ಗೀತಾ ಗೋವಿಂದಂ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಮೂಲಕ ತೆಲುಗು ಚಿತ್ರರಂಗದಲ್ಲಿ ಆಕೆಯ ಬೇಡಿಕೆ ಹೆಚ್ಚಿದೆ.
ಅಲ್ಲಿನ ಸ್ಟಾರ್ ನಟರ ಚಿತ್ರಗಳಿಂದಲೂ ರಶ್ಮಿಕಾಗೆ ಸಾಕಷ್ಟು ಅವಕಾಶಗಳು ಬರುತ್ತಿದೆ. ಬೇಗನೇ ಮದುವೆಯಾದರೆ ಕೆರಿಯರ್‌ಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರಶ್ಮಿಕಾ, ರಕ್ಷಿತ್ ಜೊತೆಗಿನ ಸಂಬಂಧವನ್ನು ಮುರಿದುಕೊಂಡರು ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿರುವುದಂತೂ ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…
T20; ವೆಸ್ಟ್ ಇಂಡೀಸ್ ಎದುರು ಬಾಂಗ್ಲಾದೇಶ ಗೆಲುವಿನ ಆರಂಭ
T20I;ಡಬಲ್ ಹ್ಯಾಟ್ರಿಕ್ ಸಾಧನೆ ಮೆರೆದ ಆರ್ಜೆಂಟೀನಾದ ಫೆನೆಲ್
Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ
Gukesh Dommaraju; ಚದುರಂಗ ಚಾಂಪಿಯನ್ ಗೆ ತವರೂರು ಚೆನ್ನೈಯಲ್ಲಿ ಭವ್ಯ ಸ್ವಾಗತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.