ಎರಡು ಕಾಲಘಟ್ಟದಲ್ಲಿ ‘ಅಗ್ರಸೇನಾ’
Team Udayavani, Feb 21, 2022, 2:30 PM IST
ವಿಭಿನ್ನ ಟೈಟಲ್ ಮೂಲಕ ಅನೇಕ ಸಿನಿಮಾಗಳು ಗಮನ ಸೆಳೆಯುತ್ತಿವೆ. ಆ ಸಾಲಿಗೆ ಹೊಸ ಸೇಪìಡೆ “ಅಗ್ರಸೇನಾ’. ಹೀಗೊಂದು ಸಿನಿಮಾ ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಯಾಯಿತು.
ಮುರುಗೇಶ್ ಕಣ್ಣಪ್ಪ ನಿರ್ದೇಶನವಿದ್ದು, ಮಮತಾ ಜಯರಾಮ ರೆಡ್ಡಿ ಈ ಚಿತ್ರದ ನಿರ್ಮಾಪಕರು. ಅಮರ್ ವಿರಾಜ್, ರಚನಾ ದಶರಥ್ ಈ ಚಿತ್ರದ ನಾಯಕ- ನಾಯಕಿ.
ಚಿತ್ರದ ಕಥೆ ಎರಡು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆಯಂತೆ. ಜೊತೆಗೆ ಇಂದಿನ ಸಮಾಜಕ್ಕೆ ಕಥೆ ಪ್ರಸ್ತುತವಾಗಿದ್ದು, ಪ್ರೇಕ್ಷಕರು ಇಷ್ಟಪಡುತ್ತಾರೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಜಯರಾಮ ರೆಡ್ಡಿ, ಹೆಂಡತಿಯ ಸಿನಿಮಾ ಪ್ರೀತಿಗೆ ಮಣಿದು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಮುಂದೆ ಮತ್ತಷ್ಟು ಸಿನಿಮಾ, ವೆಬ್ ಸೀರಿಸ್ ನಿರ್ಮಿಸುವ ಉದ್ದೇಶ ಇವರಿಗಿದೆ.
ಚಿತ್ರಕ್ಕೆ ಬೆಳಗಾವಿ, ಕೋಲಾರ, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಕಥೆಯಲ್ಲಿ ಬರುವ ಅಗ್ರಸೇನಾ ಪಾತ್ರವನ್ನು ಹಿರಿಯ ನಟ ರಾಮಕೃಷ್ಣ ನಿರ್ವಹಿಸಿದ್ದಾರೆ. ನಾಯಕ ಅಮರ್ ಇಲ್ಲಿ ಲವರ್‌ಬಾಯ್. ನಿರ್ಮಾಪಕರು ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ ಎನ್ನುವುದು ನಿರ್ದೇಶಕ ಮುರುಗೇಶ್ ಕಣ್ಣಪ್ಪ ಅವರ ಮಾತು.
ಚಿತ್ರದಲ್ಲಿ ನಟಿಸಿದ ಭಾರತಿ ಹೆಗಡೆ , ರಿತ್ವಿಕ್ ಕೃಷ್ಣರಾಜು, ರವಿಕುಮಾರ್, ಗೌರವ್ ತಮ್ಮ ಅನುಭವ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.