ಐಂದ್ರಿತಾಗೆ ನ್ಯೂಸ್ ಚಾನಲ್ಗಳ ಮೇಲೆ ನಂಬಿಕೆಯೇ ಹೊರಟು ಹೋಗಿದೆಯಂತೆ!
Team Udayavani, Oct 4, 2017, 4:09 PM IST
ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಅವರ ಮೊಮ್ಮಗ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣದಲ್ಲಿ ದಿಗಂತ್, ಪ್ರಜ್ವಲ್ ಮತ್ತು ಅಂಬರೀಶ್ ಅವರ ಮಗ ಅಭಿಷೇಕ್ ಹೆಸರುಗಳನ್ನು ನ್ಯೂಸ್ ಚಾನಲ್ಗಳು ಸೇರಿಸಿದ್ದಿಕ್ಕೆ ಚಿತ್ರರಂಗದ ವಲಯದಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಈಗ ಅದಕ್ಕೆ ನಟಿ ಐಂದ್ರಿತಾ ರೇ ಸಹ ಧ್ವನಿಗೂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಐಂದ್ರಿತಾ ರೇ, “ಟಿಆರ್ಪಿಗೋಸ್ಕರ ಸುಮ್ಮನೆ ಕಲಾವಿದರನ್ನು ಯಾವುದೋ ಪ್ರಕರಣಕ್ಕೆ ಎಳೆದು ತರುವುದು ಸರಿಯಲ್ಲ. ಈ ಕುರಿತು ಯಾವುದೇ ಸಾಕ್ಷಿಗಳಿಲ್ಲ, ಯಾವುದೇ ಫುಟೇಜ್ ಇಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪೊಲೀಸ್ ಕಂಪ್ಲೇಂಟ್ ಸಹ ಆಗಿಲ್ಲ.
ಹೀಗಿರುವಾಗ ಕಲಾವಿದರನ್ನು ಹೀಗೆ ಎಳೆದು ತರುವುದು ಸರಿಯಲ್ಲ. ಇದಕ್ಕಿಂತ ಕೆಳಗೆ ಇಳಿಯುವುದಕ್ಕೆ ಸಾಧ್ಯವೇ ಇಲ್ಲ. ಕನ್ನಡ ನ್ಯೂಸ್ ಚಾನಲ್ಗಳ ಮೇಲೆ ನಂಬಿಕೆಯೇ ಹೊರಟು ಹೋಗಿದೆ’ ಎಂದು ಟ್ವೀಟ್ ಮಾಡಿದ್ದಾರೆ ಐಂದ್ರಿತಾ. ಐಂದ್ರಿತಾ ಒಬ್ಬರೇ ಇಲ್ಲ.
ಇದಕ್ಕೂ ಮುನ್ನ ಕನ್ನಡ ಚಿತ್ರರಂಗದ ಹಲವು ಕಲಾವಿದರು, ಪ್ರಜ್ವಲ್ ಮತ್ತು ದಿಗಂತ್ ಅವರ ಹೆಸರನ್ನು ಅಪಘಾತಕ್ಕೆ ತಳಕು ಹಾಕುವುದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ನಟರಾದ “ನೆನಪಿರಲಿ’ ಪ್ರೇಮ್, ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಜಗ್ಗೇಶ್ ಸೇರಿದಂತೆ ಹಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.