ಪುನೀತ್ ರಾಜಕುಮಾರ್ “ಅಜಾತಶತ್ರು”; ಪುನೀತ್ ಜೀವನ ಚರಿತ್ರೆ ಕಿರುಚಿತ್ರ ಆಗ್ತಿದೆ…
ಕಿರುಚಿತ್ರವಾಯಿತು ಪುನೀತ್ ಜೀವನಚರಿತ್ರೆ!
Team Udayavani, Jan 27, 2020, 9:50 AM IST
ಯಾವುದೇ ಸ್ಟಾರ್ ನಟರ ಅಭಿಮಾನಿಗಳಿರಲಿ, ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು, ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕಾಗಿ, ತಮಗೆ ಸರಿಯೆಂದು ತೋಚಿದ ಹಲವು ಮಾರ್ಗಗಳನ್ನು, ವೇದಿಕೆಗಳನ್ನು ಬಳಸಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಅಭಿಮಾನವನ್ನು ಜಗಜ್ಜಾಹೀರು ಮಾಡುತ್ತಲೇ ಇರುತ್ತಾರೆ. ಈಗ ಯಾಕೆ ಅಭಿಮಾನಿಗಳ ಬಗ್ಗೆ, ಅಭಿಮಾನದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ.
ಸ್ಯಾಂಡಲ್‌ವುಡ್ ನಟ, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೆಲ ಕಟ್ಟಾ ಅಭಿಮಾನಿಗಳು ಈಗ ಕಿರುಚಿತ್ರದ ಮೂಲಕ ತಮ್ಮ ಅಭಿಮಾನವನ್ನು ಪ್ರದರ್ಶಿಸಲು ಮುಂದಾಗುತ್ತಿದ್ದಾರೆ. ಹೌದು, ಪುನೀತ್ ರಾಜಕುಮಾರ್ ಅವರ ಒಂದಷ್ಟು ಅಭಿಮಾನಿಗಳು ಸೇರಿಕೊಂಡು, ಈಗ ತಮ್ಮ ನೆಚ್ಚಿನ ನಟನ ಕುರಿತು ಕಿರುಚಿತ್ರ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ. ತೇಜಸ್ ರಂಗನಾಥ್, ಮನೋಜ್ ಕುಮಾರ್, ವಿಶ್ವನಾಥ್ ಗೌಡ, ಶರತ್ ಕುಮಾರ್, ಪೃಥ್ವಿರಾಜ್, ತಿಲಕ್ ಗೌಡ, ಸಮಂಜು ಮಣಿ ಸೇರಿದಂತೆ ಪುನೀತ್ ರಾಜಕುಮಾರ್ ಅವರ ಒಂದಷ್ಟು ಕಟ್ಟಾ ಅಭಿಮಾನಿಗಳು “ಅಜಾತಶತ್ರು’ ಎಂಬ ಹೆಸರಿನಲ್ಲಿ ಕಿರುಚಿತ್ರವನ್ನು ತಯಾರು ಮಾಡುತ್ತಿದ್ದಾರೆ.
ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ, ಅಭಿ ಮಾನಿಗಳಿ ಗಾಗಿ, ಅಭಿಮಾನಿಗಳಿಗೋಸ್ಕರ ನಿರ್ಮಾಣವಾಗುತ್ತಿರುವ ಈ “ಅಜಾತಶತ್ರು’ ಎಂಬ ಕಿರುಚಿತ್ರದಲ್ಲಿ, ಪುನೀತ್ ರಾಜಕುಮಾರ್ ಜೀವನ ಮತ್ತು ಅವರು ಮಾಡಿರುವ ಉತ್ತಮ ಕಾರ್ಯಗಳ ಕುರಿತಾದ ಅನೇಕ ಸಂಗತಿಗಳ ಬಗ್ಗೆ ಚಿತ್ರಣವಿದೆಯಂತೆ. ಈಗಾಗಲೇ ಈ ಕಿರುಚಿತ್ರದ ಕೆಲಸಗಳು ತೆರೆಮರೆಯಲ್ಲಿ ನಡೆ ಯುತ್ತಿದ್ದು, ಇದೇ ಮಾರ್ಚ್ 17ರಂದು ಪುನೀತ್ ರಾಜ ಕುಮಾರ್ ಅವರ ಹುಟ್ಟುಹಬ್ಬವಿದ್ದು, ಅಂದು “ಅಜಾತ ಶತ್ರು’ ಕಿರುಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಕಿರುಚಿತ್ರವೊಂದು ನಿರ್ಮಾಣವಾಗುತ್ತಿದೆ ಎನ್ನುವ ವಿಷ ಯವೇ ಅಭಿಮಾನಿಗಳು ಮತ್ತು ಸಿನಿಪ್ರಿಯರ ಕುತೂಹಲಕ್ಕೆ ಕಾರಣ ವಾಗಿದ್ದು “ಅಜಾತ ಶತ್ರು’ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಇನ್ನು ದಕ್ಷಿಣ ಭಾರತ ದಲ್ಲಿಯೇ ಅಭಿಮಾನಿಗಳೇ ಸೇರಿ ತಮ್ಮ ನಟನ ಕುರಿತಾಗಿ ಕಿರುಚಿತ್ರ ಮಾಡುತ್ತಿರುವುದು ಇದೇ ಮೊದಲು ಎನ್ನಲಾ ಗುತ್ತಿದ್ದು, “ಅಜಾತಶತ್ರು’ ಚೆನ್ನಾಗಿ ಮೂಡಿಬರಲಿ ಎಂದು ಸಿನಿಪ್ರಿಯರು, ಚಿತ್ರರಂಗದ ಮಂದಿ ಶುಭ ಹಾರೈಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.