Not Out; ವಿಜಯದ ನಿರೀಕ್ಷೆಯಲ್ಲಿ ಅಜಯ್ ಪೃಥ್ವಿ

Team Udayavani, Jul 12, 2024, 3:11 PM IST

Ajay prithvi

ಒಂದು ಸಿನಿಮಾದ ಗೆಲುವು ಒಬ್ಬ ನಾಯಕ ನಟನಿಂದ ಹಿಡಿದು ಇಡೀ ತಂಡಕ್ಕೆ ದೊಡ್ಡ ಅವಕಾಶಗಳನ್ನೇ ತರುತ್ತದೆ. ಈಗ ಇದೇ ನಿರೀಕ್ಷೆಯೊಂದಿಗೆ ನವನಟರೊಬ್ಬರು ಎದುರು ನೋಡುತ್ತಿದ್ದಾರೆ. ಅದು ಅಜಯ್‌ ಪೃಥ್ವಿ.

ಯಾರು ಈ ಅಜಯ್‌ ಪೃಥ್ವಿ ಎಂದರೆ “ನಾಟ್‌ ಔಟ್‌’ ಚಿತ್ರದ ಬಗ್ಗೆ ಹೇಳಬೇಕು.”ನಾಟ್‌ ಔಟ್‌’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿ ಬಿಡುಗಡೆ ಹಂತಕ್ಕೆ ಬಂದಿದೆ. ಚಿತ್ರ ಜು.19ರಂದು ಬಿಡುಗಡೆಯಾಗುತ್ತಿದೆ. ರಾಷ್ಟ್ರಕೂಟ ಪಿಕ್ಚರ್ಸ್‌ ಲಾಂಛನದಲ್ಲಿ ವಿ.ರವಿಕುಮಾರ್‌ ಹಾಗೂ ಶಮ್ಸುದ್ದೀನ್‌ ಎ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಂಬರೀಶ್‌ ಈ ಸಿನಿಮಾ ನಿರ್ದೇಶಕರು.

ನಾಯಕ ಅಜಯ್‌ ಪೃಥ್ವಿ ಹೀರೋ ಆಗುವ ಮುನ್ನ ವಿದೇಶದಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಈ ಕುರಿತು ಮಾತನಾಡುವ ಅಜಯ್‌, “ನಾನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಐದನೇ ತರಗತಿಯಿಂದಲೇ ಬಿಂಬ ಮೂಲಕ ಸಾಕಷ್ಟು ಕಲಿತೆ. ನಂತರ ಪ್ರಸಿದ್ಧ ತರಬೇತಿ ಶಾಲೆಯಲ್ಲಿ ನಟನೆ ಕೂಡ ಕಲಿತೆ’ ಎನ್ನುತ್ತಾರೆ.

ಅಜಯ್‌ ಈಗಾಗಲೇ “ಪುರುಷೋತ್ತನ ಪ್ರಸಂಗ’ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದಲ್ಲಿನ ಇವರ ನಟನೆಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಇನ್ನು, ನಾಟ್‌ ಔಟ್‌ ಚಿತ್ರದಲ್ಲಿ ಅಜಯ್‌ ಅಂಬ್ಯುಲೆನ್ಸ ಡ್ರೈವರ್‌ ಆಗಿ ಕಾಣಿಸಿಕೊಂಡಿದ್ದು, ಇಡೀ ಪಾತ್ರ ಪೋಷಣೆಯೇ ಬೇರೆ ತರಹ ಇದೆ. ರೆಗ್ಯುಲರ್‌ ಜಾನರ್‌ ಬಿಟ್ಟು ಮಾಡಿರುವ ಸಿನಿಮಾದಾಗಿರುವುದರಿಂದ ಈ ಸಿನಿಮಾ ಮೇಲೆ ಇಡೀ ತಂಡ ವಿಶ್ವಾಸವಿಟ್ಟಿದೆ. ಅದಕ್ಕೆ ಪೂರಕವಾಗಿ ಸಿನಿಮಾದ ಟ್ರೇಲರ್‌ ಕೂಡಾ ಹಿಟ್‌ಲಿಸ್ಟ್‌ ಸೇರಿದೆ. ಚಿತ್ರದ ತಮ್ಮ ಪಾತ್ರವನ್ನು ಪೃಥ್ವಿ ಎಲ್ಲಾ ಅಂಬ್ಯುಲೆನ್ಸ್‌ ಚಾಲಕರಿಗೆ ಅರ್ಪಿಸುತ್ತಾರೆ.

ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, “ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪು ನಾಟ್‌ ಔಟ್‌. ಪ್ರತಿ ಆಟದಲ್ಲಿ ಒಬ್ಬ ಅಂಪೈರ್‌ ಇರ್ತಾನೆ. ಜೀವನದ ಆಟಕ್ಕೂ ಒಬ್ಬ ಅಂಪೈರ್‌ ಇರ್ತಾನೆ.. ಈ ಚಿತ್ರದಲ್ಲಿ ಹುಲಿ – ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತೆ. ಆಟದಲ್ಲಿ ಬೆಟ್ಟದ ತುದಿಯಲ್ಲಿರುವ ಹುಲಿಗಳು ಮತ್ತು ಬೆಟ್ಟದ ತಳದಲ್ಲಿರುವ ಕುರಿಗಳು ಬೆಟ್ಟವನ್ನು ಹತ್ತುವಾಗ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳು ಆಟದಲ್ಲಿ ಇದ್ದಂತೆ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಅದನ್ನ ನೋಡಬಹುದು’ ಎನ್ನುವುದು ತಂಡದ ಮಾತು.

ಟಾಪ್ ನ್ಯೂಸ್

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ

Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ

Mangaluru home stay attack case: All accused acquitted

Mangaluru ಹೋಂ ಸ್ಟೇ ದಾಳಿ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

Gadag; ಶಾಲಾ‌‌ ಮಕ್ಕಳ ಕೂದಲು ಕಟ್ ಮಾಡಿದ‌ ಶಿಕ್ಷಕನಿಗೆ ಬಿತ್ತು ಧರ್ಮದೇಟು!

Gadag; ಶಾಲಾ‌‌ ಮಕ್ಕಳ ಕೂದಲು ಕಟ್ ಮಾಡಿದ‌ ಶಿಕ್ಷಕನಿಗೆ ಬಿತ್ತು ಧರ್ಮದೇಟು!

Chikkamagaluru; Arrest of rowdy sheeter who made new sense  under the influence of ganja and alcohol

Chikkamagaluru; ಗಾಂಜಾ, ಕುಡಿತದ ಅಮಲಿನಲ್ಲಿ ಹೈಡ್ರಾಮಾ ನಡೆಸಿದ ರೌಡಿಶೀಟರ್‌ ಬಂಧನ

Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?

Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?

Paris 2024; ಕುಸ್ತಿಯಲ್ಲಿ ಮಿಂಚು ಹರಿಸಿದ ವಿನೀಶ್‌ ಫೋಗಟ್‌ ಸೆಮಿ ಫೈನಲ್‌ ಗೆ ಪ್ರವೇಶ

Paris 2024; ಕುಸ್ತಿಯಲ್ಲಿ ಮಿಂಚು ಹರಿಸಿದ ವಿನೀಶ್‌ ಫೋಗಟ್‌ ಸೆಮಿ ಫೈನಲ್‌ ಗೆ ಪ್ರವೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kichcha Sudeep: ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ನಿರಾಕರಿಸಿದ ನಟ ಸುದೀಪ್

Kichcha Sudeep: ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ನಿರಾಕರಿಸಿದ ನಟ ಸುದೀಪ್

Fraud: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತೇನೆಂದು ಯುವತಿಯಿಂದ ಲಕ್ಷ ಲಕ್ಷ ಪೀಕಿದ ವ್ಯಕ್ತಿ

Fraud: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತೇನೆಂದು ಯುವತಿಯಿಂದ ಲಕ್ಷ ಲಕ್ಷ ಪೀಕಿದ ವ್ಯಕ್ತಿ

Sandalwood: ಟ್ರೇಲರ್‌ ಇಲ್ಲ ಹಾಡೇ ಎಲ್ಲಾ… ‌’ಕೃಷ್ಣಂ ಪ್ರಣಯ ಸಖಿ’ ಹಾಡು ಸೂಪರ್‌ ಹಿಟ್‌

Sandalwood: ಟ್ರೇಲರ್‌ ಇಲ್ಲ ಹಾಡೇ ಎಲ್ಲಾ… ‌’ಕೃಷ್ಣಂ ಪ್ರಣಯ ಸಖಿ’ ಹಾಡು ಸೂಪರ್‌ ಹಿಟ್‌

Martin Movie: ಮುಂಬೈನಲ್ಲಿ ಮಾರ್ಟಿನ್‌ ಮೇನಿಯಾ

Martin Movie: ಮುಂಬೈನಲ್ಲಿ ಮಾರ್ಟಿನ್‌ ಮೇನಿಯಾ

Kurugodu: ದೇವಸ್ಥಾನದ ಗರ್ಭ ಗುಡಿಯಲ್ಲಿ ನಟ ದರ್ಶನ್‌ ಫೋಟೋ ಇಟ್ಟು ಪೂಜೆ; ಭಕ್ತರ ಆಕ್ರೋಶ

Kurugodu: ದೇವಸ್ಥಾನದ ಗರ್ಭ ಗುಡಿಯಲ್ಲಿ ನಟ ದರ್ಶನ್‌ ಫೋಟೋ ಇಟ್ಟು ಪೂಜೆ; ಭಕ್ತರ ಆಕ್ರೋಶ

MUST WATCH

udayavani youtube

ಶಿರೂರಿಗೆ ಬಂದ ಈಶ್ವರ್‌ ಮಲ್ಪೆ ತಂಡಕ್ಕೆ ಕಾರ್ಯಾಚರಣೆಗೆ ಸಿಗದ ಅನುಮತಿ

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

ಹೊಸ ಸೇರ್ಪಡೆ

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

Screenshot (124)

Katpadi : ರಸ್ತೆ ಗುಂಡಿಗೆ ತೇಪೆ, ತಾತ್ಕಾಲಿಕ ಪರಿಹಾರ

Screenshot (122)

Malpe -ಕಲಾಡಿ: ರಸ್ತೆಯೇ ಮಾಯ, ಎಲ್ಲವೂ ಹೊಂಡಮಯ!

Screenshot (121)

Indrali: ರಸ್ತೆಯಲ್ಲೇ ನಿಲ್ಲುವ ಬಸ್‌, ಗುಂಡಿಗಳಿಂದ ಅಪಾಯಕ್ಕೆ ಆಹ್ವಾನ

Dharwad  University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

Dharwad University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.