ಅಪ್ಪ ಆಗುವ ಖುಷಿಯಲ್ಲಿ ಅಜೇಯ್ರಾವ್
Team Udayavani, Sep 16, 2018, 11:18 AM IST
ಈಗಷ್ಟೇ “ತಾಯಿಗೆ ತಕ್ಕ ಮಗ’ ಚಿತ್ರ ಮುಗಿಸಿ, ಬಿಡುಗಡೆಯ ಎದುರು ನೋಡುತ್ತಿರುವ ಅಜೇಯ್ರಾವ್, ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದು ಅವರು ತಂದೆ ಆಗುತ್ತಿರುವ ಸುದ್ದಿ. ಹೌದು, “ನಾನು ಅಪ್ಪ ಆಗುತ್ತಿದ್ದೇನೆ’ ಎಂಬುದನ್ನು “ಉದಯವಾಣಿ’ಗೆ ಸ್ಪಷ್ಟಪಡಿಸಿರುವ ಅಜೇಯ್ರಾವ್, ಡಿಸೆಂಬರ್ನಲ್ಲಿ ನಮ್ಮ ಮನೆಗೊಂದು ಮಗು ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಅಜೇಯ್ರಾವ್ ಮನೆಗೆ “ತಂದೆಗೆ ತಕ್ಕ ಮಗ’ನ ಆಗಮನವಾಗುತ್ತೋ, “ತಾಯಿಗೆ ತಕ್ಕ ಮಗಳು’ ಬರುತ್ತಾಳ್ಳೋ ಕಾದು ನೋಡಬೇಕು.
ಇನ್ನು, ಅಜೇಯ್ರಾವ್ ಅವರು ಜನವರಿಯಲ್ಲಿ ತಮ್ಮ ಹೋಮ್ ಬ್ಯಾನರ್ನಲ್ಲೊಂದು ಚಿತ್ರ ನಿರ್ಮಿಸುವ ನಿರ್ಧಾರ ಮಾಡಿದ್ದಾರೆ. ಸದ್ಯಕ್ಕೆ ಕಥೆ, ನಿರ್ದೇಶಕರು, ತಂತ್ರಜ್ಞರ ಆಯ್ಕೆ ಆಗಿಲ್ಲ ಎಂಬುದು ಅಜೇಯ್ ಮಾತು. “ತಾಯಿಗೆ ತಕ್ಕ ಮಗ’ ಚಿತ್ರ ಅಕ್ಟೋಬರ್ನಲ್ಲಿ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರಿಗಿದೆ ಎನ್ನುವ ಅಜೇಯ್, “ತಾಯಿಗೆ ತಕ್ಕ ಮಗ’ ನಂತರ ಯಾವ ಚಿತ್ರವನ್ನೂ ಒಪ್ಪಿಲ್ಲ. ಎರಡ್ಮೂರು ಕಥೆ ಕೇಳಿದ್ದು, ಯಾವ ನಿರ್ಮಾಪಕರಿಗೂ ಕಮಿಟ್ ಆಗಿಲ್ಲ.
ಎಲ್ಲಾ ಅಂದುಕೊಂಡಂತೆ ನಡೆದರೆ ಜನವರಿಯಲ್ಲಿ ಅವರ ಬ್ಯಾನರ್ನಲ್ಲಿ ಚಿತ್ರ ಸೆಟ್ಟೇರಲಿದೆ. ನಾಲ್ಕು ವರ್ಷಗಳ ಹಿಂದೆ ಅಜೇಯ್ರಾವ್ ನಿರ್ಮಿಸಿದ್ದ “ಕೃಷ್ಣ ಲೀಲ’ ಸಕ್ಸಸ್ ಆಗಿದ್ದರೂ, ಆ ಯಶಸ್ಸನ್ನು ಯಾರೂ ಸರಿಯಾಗಿ ಬಳಸಿಕೊಳ್ಳಲಿಲ್ಲ. ಈಗ “ತಾಯಿಗೆ ತಕ್ಕ ಮಗ’ ಚಿತ್ರದ ಮೇಲೆ ಎಲ್ಲೆಡೆ ನಿರೀಕ್ಷೆ ಹೆಚ್ಚಿದೆ. ಅಜೇಯ್ರಾವ್ ಅವರಿಗೂ “ತಾಯಿಗೆ ತಕ್ಕ ಮಗ’ ಹೊಸ ಇಮೇಜ್ ತಂದುಕೊಡುತ್ತೆ ಎಂಬ ಅದಮ್ಯ ವಿಶ್ವಾಸವಿದೆ.
“ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದ ನಿರ್ಮಾಪಕರು ನನ್ನ ಹಾದಿಯಲ್ಲಿ ಸಿಕ್ಕರೆ ಅವರಿಗೆ ಮುಂದಿನ ಚಿತ್ರ ಮಾಡ್ತೀನಿ. ಇಲ್ಲವಾದರೆ, ನನ್ನ ಬ್ಯಾನರ್ನಲ್ಲಿ ಹೊಸ ಚಿತ್ರವಾಗಲಿದೆ ಎನ್ನುತ್ತಾರೆ ಅಜೇಯ್. ಅಂದಹಾಗೆ, “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಶಶಾಂಕ್ ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಯಶಸ್ವಿ ಚಿತ್ರ ಕೊಟ್ಟಿದ್ದ ಈ ಜೋಡಿ ಪುನಃ “ತಾಯಿಗೆ ತಕ್ಕ ಮಗ’ ಚಿತ್ರ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.