Toxic Movie: ಯಶ್ ʼಟಾಕ್ಸಿಕ್ʼ ತಂಡಕ್ಕೆ ಪವರ್ ಫುಲ್ ಬಾಲಿವುಡ್ ನಟ ಎಂಟ್ರಿ
Team Udayavani, Aug 14, 2024, 1:29 PM IST
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ʼಟಾಕ್ಸಿಕ್ʼ (Toxic Movie) ಸೆಟ್ಟೇರಿದೆ. ಸರಳವಾಗಿ ಚಿತ್ರಕ್ಕೆ ಮುಹೂರ್ತ ನೆರವೇರಿಸಿ ಶೂಟಿಂಗ್ ಆರಂಭಿಸಲಾಗಿದೆ.
ಭರಪೂರ ಸಿದ್ದತೆಗಳೊಂದಿಗೆ ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ದಾಸ್ (Geetu Mohandas) ಬೆಂಗಳೂರಿನಲ್ಲಿ ʼಟಾಕ್ಸಿಕ್ʼ ಶೂಟಿಂಗ್ ಆರಂಭಿಸಿದ್ದಾರೆ.
ʼಟಾಕ್ಸಿಕ್ʼ ಪಾತ್ರವರ್ಗದ ಬಗ್ಗೆ ಹತ್ತಾರು ಗಾಸಿಪ್‌ಗಳು ಸಿನಿಮಾ ಅನೌನ್ಸ್ ಆದ ದಿನದಿಂದಲೇ ಹಬ್ಬಿದೆ. ಶಾರುಖ್, ಕರೀನಾ ಅವರ ಹೆಸರು ಕೂಡ ಇದರಲ್ಲಿ ಕೇಳಿಬಂದಿದೆ. ಸದ್ಯ ಮಾಹಿತಿಯ ಪ್ರಕಾರ ಸಿನಿಮಾದಲ್ಲಿ ನಯನತಾರಾ (Nayanthara) ,ಕಿಯಾರಾ ಅಡ್ವಾಣಿ (Kiara Advani) ಹುಮಾ ಖುರೇಷಿ (Human Qureshi) ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ನವಾಝುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಅಧಿಕೃತವಾಗಿ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿ ʼಟಾಕ್ಸಿಕ್ʼ ಗೆ ಆಗಿದೆ. ಭಾರತೀಯ ಮೂಲದ ಅಮೇರಿಕನ್ ನಟ ಅಕ್ಷಯ್ ಒಬೆರಾಯ್ (Akshay Oberoi) ʼಟಾಕ್ಸಿಕ್ʼ ತಂಡ ಸೇರಿಕೊಂಡಿದ್ದಾರೆ. ಬಾಲಿವುಡ್ ಹಲವರು ಸಿನಿಮಾಗಳಲ್ಲಿ ನಟಿಸಿರುವ ಅಕ್ಷಯ್ ಈ ವರ್ಷದ ಹೃತಿಕ್ ರೋಷನ್ ಅವರ ʼಫೈಟರ್ʼ ಸಿನಿಮಾದಲ್ಲಿ ನಟಿಸಿದ್ದರು.
ಪವರ್ ಫುಲ್ ನಟನೆಯಿಂದ ಪ್ರೇಕ್ಷಕರ ಗಮನ ಸೆಳೆದಿರುವ ಅಕ್ಷಯ್ ಅವರನ್ನು ʼಟಾಕ್ಸಿಕ್ʼ ಚಿತ್ರತಂಡ ಪ್ರೀತಿಯಿಂದ ಬರಮಾಡಿಕೊಂಡಿದೆ.
ಇನ್ನು ತೆರೆಕಾಣಬೇಕಿರುವ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಜೊತೆಗಿನ ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಚಿತ್ರದಲ್ಲಿ ಕೂಡ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ.
ʼಟಾಕ್ಸಿಕ್ʼ 2025ರ ಏ.10 ರಂದು ರಿಲೀಸ್ ಆಗಲಿದೆ. ಗೋವಾದಲ್ಲಿನ ಡ್ರಗ್ ಕಾರ್ಟೆಲ್ ಸುತ್ತ ʼಟಾಕ್ಸಿಕ್ʼ ಕಥೆ ಸುತ್ತುತ್ತದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಿದೆ.
ʼಟಾಕ್ಸಿಕ್ʼ ಪ್ಯಾನ್ ಇಂಡಿಯಾ ಭಾಷೆ ಸೇರಿದಂತೆ ವಿದೇಶಿ ಭಾಷೆಯಲ್ಲೂ ತೆರೆಗೆ ಬರಲಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tollywood: ‘ಪುಷ್ಪ-3ʼ ಟೈಟಲ್ ರಿವೀಲ್.. ವಿಲನ್ ಆಗಿ ಅಬ್ಬರಿಸಲಿದ್ದಾರೆ ಈ ಖ್ಯಾತ ನಟ
Silk Smitha – Queen of the South; ಬರುತ್ತಿದೆ ಸಿಲ್ಕ್ ಸ್ಮಿತಾ ಬಯೋಪಿಕ್
Suriya 45: ಮುಹೂರ್ತದಲ್ಲಿ ಸೂರ್ಯ 45
Producer: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕುಸಿದು ಬಿದ್ದು ಖ್ಯಾತ ನಿರ್ಮಾಪಕ ಮೃ*ತ್ಯು
Tollywood: ಓಯೋ ರೂಮಲ್ಲಿ ಡ್ರಗ್ಸ್ ಪಾರ್ಟಿ; ಖ್ಯಾತ ನೃತ್ಯ ಸಂಯೋಜಕ ಸೇರಿ ನಾಲ್ವರ ಬಂಧನ
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.