Sandalwood; ‘ರೇಸರ್’ ಮೂಲಕ ಎಂಟ್ರಿಗೆ ರೆಡಿಯಾದ ಅಕ್ಷಿತಾ ಸತ್ಯನಾರಾಯಣ
Team Udayavani, Jun 20, 2023, 3:38 PM IST
ಈಗಾಗಲೇ ಒಂದಷ್ಟು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕನ್ನಡದ ಹುಡುಗಿ ಅಕ್ಷಿತಾ ಸತ್ಯನಾರಾಯಣ ಈಗ, ಕನ್ನಡ ಸಿನಿಮಾದ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿಕೊಡುವ ತಯಾರಿಯಲ್ಲಿದ್ದಾರೆ.
ಹೌದು, “ರೇಸರ್’ ಬೈಕ್ ರೇಸಿಂಗ್ ಕುರಿತ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದ್ದು, ಗ್ಯಾರೇಜ್‌ನಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣವಾಗುತ್ತಿದೆ. ನೈಜ ಘಟನೆಗೆ ಒಂದಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು “ರೇಸರ್’ ಕಥೆಯನ್ನು ತೆರೆಮೇಲೆ ತರಲಾಗುತ್ತಿದೆ. “ರೇಸರ್’ ಸಿನಿಮಾದಲ್ಲಿ ಅಕ್ಷಿತಾ ಸತ್ಯನಾರಾಯಣ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಅಕ್ಷಿತಾ ಬಿಗ್ ಸ್ಕ್ರೀನ್‌ಗೆ ಅಡಿಯಿಡುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಸಿನಿಮಾದ ಶೇಕಡ 35ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ “ರೇಸರ್’ ಸಿನಿಮಾದಲ್ಲಿ ಅಕ್ಷಿತಾ ಸತ್ಯನಾರಾಯಣ್ ಅವರ ಫಸ್ಟ್‌ಲುಕ್ ಮತ್ತು ಹೀರೋಯಿನ್ ಇಂಟ್ರಡಕ್ಷನ್ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದೆ.
ಇನ್ನು “ರೇಸರ್’ ಸಿನಿಮಾದಲ್ಲಿ ಅಕ್ಷಿತಾ ಸತ್ಯನಾರಾಯಣ್ ಇಂದಿನ ಜನರೇಶನ್‌ನ ಮಾಡರ್ನ್ ಹುಡುಗಿಯಾಗಿ ಬಬ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿಮಾಕ್ಕಾಗಿ ಅಕ್ಷಿತಾ ಬೈಕ್ ರೇಸ್ ಕೂಡ ಕಲಿತಿದ್ದಾರಂತೆ. ಸದ್ಯ ದುಬಾರಿ ಬೆಲೆ ಬೈಕ್ ಏರಿ ಅಕ್ಷಿತಾ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿರುವ ಮೋಶನ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
“ಭರತ್ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ರೇಸರ್’ ಸಿನಿಮಾ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರ ವಿಷ್ಣುಕಾಂತ್ ಪುತ್ರ ಭರತ್ ವಿಷ್ಣುಕಾಂತ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. “ರೇಸರ್’ ಸಿನಿಮಾದಲ್ಲಿ ಸಂದೇಶ್ ಪ್ರಸನ್ನ ನಾಯಕನಾಗಿ ನಟಿಸುತ್ತಿದ್ದು ಉಳಿದಂತೆ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲ ರಾಜವಾಡಿ, ಕಾಮಿಡಿ ಕಿಲಾಡಿ ಸೂರಜ್, ಸ್ವಾತಿ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ:Married: 5 ಬಾರಿ ಮದುವೆ; ಯುವತಿಯನ್ನು ಅಪಹರಣ ಮಾಡಿ,ಮತಾಂತರಗೊಳಿಸಿ 6ನೇ ಮದುವೆಯಾದ ವ್ಯಕ್ತಿ!
“ರೇಸರ್’ ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಿದ್ದು, ಮೈಸೂರು ಸ್ವಾಮಿ ಛಾಯಾಗ್ರಹಣವಿದೆ. ಇದೇ ಜನವರಿಯಲ್ಲಿ ಸೆಟ್ಟೇರಿದ್ದ ರೇಸರ್ ಸಿನಿಮಾದ ಬಾಕಿ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಇದೇ ವರ್ಷದ ಕೊನೆಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಪ್ಲಾನ್ ಹಾಕಿಕೊಂಡಿದೆ ಚಿತ್ರತಂಡ.
ಒಟ್ಟಾರೆ “ರೇಸರ್’ ಮೋಶನ್ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿರುವ ನವ ಪ್ರತಿಭೆ ಅಕ್ಷಿತಾ ಹೀರೋಯಿನ್ ಆಗಿ ಬಿಗ್ ಸ್ಕ್ರೀನ್‌ನಲ್ಲಿ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು ಈ ವರ್ಷಾಂತ್ಯದ ವೇಳೆಗೆ ಗೊತ್ತಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.