ಹೌಸ್ಪಾರ್ಟಿ ಮೂಡ್ನಲ್ಲಿ ಆಲ್ ಓ.ಕೆ; ಆಲ್ಬಂ ಹಾಡಿಗೆ ಅದ್ವಿಕಾ ಹೆಜ್ಜೆ
Team Udayavani, Mar 26, 2022, 10:48 AM IST
ಹೊಸ ಥರದ ಸಂಗೀತ ಪ್ರಯೋಗಗಳ ಮೂಲಕ ಯೂ-ಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ರ್ಯಾಪರ್ ಸಿಂಗರ್, ಕಂಪೋಸರ್ ಆಲ್ ಓ.ಕೆ ಉರೂಫ್ ಅಲೋಕ್. ಇದೀಗ ಸದ್ದಿಲ್ಲದೆ ಮತ್ತೂಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅಂದಹಾಗೆ, ಅಲೋಕ್ ತಮ್ಮ ಹೊಸ ಮ್ಯೂಸಿಕ್ ವಿಡಿಯೋ ಆಲ್ಬಂಗೆ ಇಟ್ಟಿರುವ ಹೆಸರು “ಹೌಸ್ಪಾರ್ಟಿ’.
ಇತ್ತೀಚೆಗಷ್ಟೇ ಈ “ಹೌಸ್ಪಾರ್ಟಿ’ ಮ್ಯೂಸಿಕ್ ವಿಡಿಯೋ ಆಲ್ಬಂ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ರ್ಯಾಪ್ ಮ್ಯೂಸಿಕ್ ಪ್ರಿಯರ ಗಮನ ಸೆಳೆಯುತ್ತಿದೆ.
ತಮ್ಮ ಹೊಸ ಮ್ಯೂಸಿಕ್ ಆಲ್ಬಂ ಬಗ್ಗೆ ಮಾತನಾಡುವ ಅಲೋಕ್, “ಇದು ಕೋವಿಡ್ ಸಮಯದಲ್ಲಿ ಬಹುತೇಕರು ಮನೆಯಲ್ಲೇ ಇರಬೇಕಾಗಿತ್ತು. ಈ ಸಮಯದಲ್ಲಿ ಮನೆಯಲ್ಲಿ “ಹೌಸ್ಪಾರ್ಟಿ’ ಮಾಡುತ್ತಿದ್ದರು. ಇದೇ ಕಾನ್ಸೆಪ್ಟ್ ಇಟ್ಟುಕೊಂಡು “ಹೌಸ್ಪಾರ್ಟಿ’ ಮ್ಯೂಸಿಕ್ ವಿಡಿಯೋ ಆಲ್ಬಂ ಮಾಡಿದ್ದೇವೆ. ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಈ ಆಲ್ಬಂನಲ್ಲಿ ಕಲರ್ಫುಲ್ ಆಗಿ ತೋರಿಸಿದ್ದೇವೆ’ ಎನ್ನುತ್ತಾರೆ.
ಇದನ್ನೂ ಓದಿ:ಆರ್ಆರ್ಆರ್ ವಿಮರ್ಶೆ: ಹೋರಾಟದ ಹಾದಿಯಲ್ಲಿ ಕಂಡ ದೃಶ್ಯ ವೈಭವ
ಇನ್ನು “ಹೌಸ್ಪಾರ್ಟಿ’ ಮ್ಯೂಸಿಕ್ ವಿಡಿಯೋ ಆಲ್ಬಂ ಹಾಡಿನಲ್ಲಿ ಅಲೋಕ್ ಜೊತೆಗೆ “ಕಿರಿಕ್ ಶಂಕರ್’ ಸಿನಿಮಾದ ನಾಯಕ ನಟಿ ಅದ್ವಿಕಾ ಕೂಡ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್ ಮತ್ತು ಬೋಲ್ಡ್ ಲುಕ್ನಲ್ಲಿ ಅದ್ವಿಕಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
“ಹೌಸ್ಪಾರ್ಟಿ’ ಮ್ಯೂಸಿಕ್ ವಿಡಿಯೋ ಆಲ್ಬಂ ಬಗ್ಗೆ ಮಾತನಾಡುವ ಅದ್ವಿಕಾ, “ಇದು ನನ್ನ ಮೊದಲ ಮ್ಯೂಸಿಕ್ ವಿಡಿಯೋ ಆಲ್ಬಂ. ಮೊದಲ ಸಿನಿಮಾ ಬಿಡುಗಡೆಯಾಗುವ ಮೊದಲೇ ಇಂಥ ಅವಕಾಶಗಳು ಸಿಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. “ಹೌಸ್ಪಾರ್ಟಿ’ ಮಾಡುವವರಿಗೆ ಇದೊಂಥರ ಕಿಕ್ ಕೊಡುವಂಥ ಸಾಂಗ್ ಆಗಲಿದೆ. ತುಂಬ ಎನರ್ಜಿಟಿಕ್ ಟೀಮ್ ಜೊತೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ’ ಎನ್ನುತ್ತಾರೆ. “ಹೌಸ್ಪಾರ್ಟಿ’ ಮ್ಯೂಸಿಕ್ ಆಲ್ಬಂಗೆ ಆಕಾಶ್ ಜೋಷಿ ಛಾಯಾಗ್ರಹಣ, ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.