ಹೊರದೇಶಗಳಲ್ಲಿ ಅಲ್ಲಮ ಹವಾ!
Team Udayavani, Feb 20, 2017, 12:28 PM IST
ಅದ್ಯಾಕೋ ಟಿ.ಎಸ್. ನಾಗಾಭರಣರ “ಅಲ್ಲಮ’ ಚಿತ್ರ ದೊಡ್ಡ ಸದ್ದು ಮಾಡಲೇ ಇಲ್ಲ. 12ನ ಶತಮಾನದ ವಚನಕಾರ ಅಲ್ಲಮ ಪ್ರಭು ಕುರಿತು ನಾಗಾಭರಣರು ಮಾಡಿದ ಚಿತ್ರದ ಬಗ್ಗೆ ಆರಂಭದಲ್ಲಿ ಸಾಕಷ್ಟು ಸುದ್ದಿಯಾದರೂ, ಬಿಡುಗಡೆಯ ನಂತರ ಸುದ್ದಿಯಾಗಲೇ ಇಲ್ಲ. “ಅಲ್ಲಮ’ ಚಿತ್ರವು ಇನ್ನೊಂದು “ಜನುಮದ ಜೋಡಿ’ಯಾಗುವುದಕ್ಕಿಂತ ಇನ್ನೊಂದು “ಮೈಸೂರು ಮಲ್ಲಿಗೆ’ ಅಥವಾ ಇನ್ನೊಂದು “ಸಂತ ಶಿಶುನಾಳ ಷರೀಪ’ ಆಗಬೇಕು ಎಂಬ ನಾಗಾಭರಣರು ಬಹಳ ಆಸೆಪಟ್ಟಿದ್ದರೂ, ಅದ್ಯಾಕೋ ಈಡೇರಲೇ ಇಲ್ಲ.
“ಅಲ್ಲಮ’ ಚಿತ್ರವು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯದೇ ಇರಬಹುದು ಅಥವಾ ಜನ ವಿಪರೀತ ಕೊಂಡಾಡದೇ ಇರಬಹುದು. ಆದರೆ, ಚಿತ್ರ ಕ್ರಮೇಣ ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳು ಮತ್ತು ಬೇರೆ ರಾಷ್ಟ್ರಗಳತ್ತ ಪ್ರಯಾಣ ಬೆಳೆಸುತ್ತಿದೆ. ಈಗಾಗಲೇ ಚಿತ್ರವು ನಿನ್ನೆ ಆಸ್ಟ್ರೇಲಿಯಾದಲ್ಲಿ ಪ್ರದರ್ಶನ ಕಂಡಿದೆಯಂತೆ. ಮುಂದಿನ ದಿನಗಳಲ್ಲಿ ಅಮೇರಿಕಾ, ಕೆನಡಾ, ಮಲೇಷ್ಯಾ ಮುಂತಾದ ಕಡೆ ಪ್ರದರ್ಶನ ಕಾಣುವುದಕ್ಕೆ ಸಜ್ಜಾಗಿದೆ. ಹೌದು, “ಅಲ್ಲಮ’ ಚಿತ್ರವು ಮಾರ್ಚ್ ಮೂರರಂದು ಅಮೇರಿಕಾ ಮತ್ತು ಕೆನಡಾಗಳಲ್ಲಿ ಬಿಡುಗಡೆಯಾಗುತ್ತಿದೆ.
ಇನ್ನು ಮಲೇಷ್ಯಾದಲ್ಲಿ ಮಾರ್ಚ್ 11 ಮತ್ತು 12ರಂದು ಪ್ರದರ್ಶನ ಕಾಣುತ್ತಿದೆ. ಈ ಪ್ರದರ್ಶನದಲ್ಲಿ ನಿರ್ದೇಶಕ ನಾಗಾಭರಣ ಮತ್ತು ಅಲ್ಲಮನ ಪಾತ್ರ ಮಾಡಿದ್ದ ಧನಂಜಯ್ ಇಬ್ಬರೂ ಭಾಗವಹಿಸಲಿದ್ದಾರೆ. ಮಾರ್ಚ್ 10ಕ್ಕೆ
ಮಲೇಷ್ಯಾಗೆ ಹೊರಡಲಿರುವ ಅವರಿಬ್ಬರು, ಚಿತ್ರದ ಪ್ರದರ್ಶನದಲ್ಲಿ ಭಾಗವಹಿಸುವುದರ ಜೊತೆಗೆ, ಸಂವಾದದಲ್ಲೂ ಪಾಲ್ಗೊಳ್ಳಲಿದ್ದಾರೆ.
“ಅಲ್ಲಮ’ ಚಿತ್ರದಲ್ಲಿ ಧನಂಜಯ್ ಜೊತೆಗೆ ಮೇಘನಾ ರಾಜ್, ಸಂಚಾರಿ ವಿಜಯ್, ರಾಮಕೃಷ್ಣ, ಲಕ್ಷಿ ಗೋಪಾಲಸ್ವಾಮಿ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಬಾಪು ಪದ್ಮನಾಬ್ ಸಂಗೀತ ಸಂಯೋಜಿಸಿದ್ದಾರೆ. ಜಿ.ಎಸ್. ಭಾಸ್ಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.