ಮಿತ್ರ + ರಕ್ಷಕ = “ಮಿತ್ರ ರಕ್ಷಕ’
Team Udayavani, Sep 29, 2017, 3:00 PM IST
“ಆಪ್ತಮಿತ್ರ’, “ಆಪ್ತರಕ್ಷಕ’ ಚಿತ್ರಗಳು ಬಂದಿರೋದು, ದೊಡ್ಡ ಹಿಟ್ ಆಗಿರೋದು ನಿಮಗೆ ಗೊತ್ತೇ ಇದೆ. ಆ ನಂತರ ಅದೇ ಟೈಟಲ್‌ಗಳನ್ನು ಹೋಲುವ ಕೆಲವು ಸಿನಿಮಾಗಳು ಬಂದುವು. ಈಗ ಆ ಸಾಲಿಗೆ ಹೊಸ ಸೇಪೇಡೆ “ಮಿತ್ರ ರಕ್ಷಕ-3′. ಹೌದು, ಹೀಗೊಂದು ಚಿತ್ರ ಸದ್ದಿಲ್ಲದೇ ಆರಂಭವಾಗಿ ಚಿತ್ರೀಕರಣ ಕೂಡಾ ಮುಗಿಸಿಬಿಟ್ಟಿದೆ.
“ಮಿತ್ರ ರಕ್ಷಕ-3′ ಎಂಬ ಟೈಟಲ್ ಕೇಳಿದೊಡನೆ, ಇದು ಯಾವುದಾದರೂ ಸಿನಿಮಾದ ಮುಂದುವರಿದ ಭಾಗನಾ ಎಂದು ನೀವು ಕೇಳಬಹುದು. ಖಂಡಿತಾ ಅಲ್ಲ, ಟೈಟಲ್‌ನಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಚಿತ್ರತಂಡ ಈ ಟೈಟಲ್ ಇಟ್ಟಿದೆ. ಅಂದಹಾಗೆ, ಈ ಚಿತ್ರ ಕೂಡಾ ಹಾರರ್ ಜಾನರ್‌ಗೆ ಸೇರುವ ಚಿತ್ರ.
ಓಂ ಪ್ರಕಾಶ್ ನಾಯ್ಕ ಈ ಚಿತ್ರದ ನಿರ್ದೇಶಕರು. ಚಿತ್ರತಂಡವೊಂದು “ಆಪ್ತಮಿತ್ರ-3′ ಎಂಬ ಚಿತ್ರದ ಶೂಟಿಂಗೆಂದು ಮಡಿಕೇರಿಯ ಕಾಡಿನ ಮನೆಯೊಂದಕ್ಕೆ ಹೋದಾಗ ತಂಡದಲ್ಲಿದ್ದವರೆಲ್ಲಾ ಒಬ್ಬೊಬ್ಬರೇ ಕೊಲೆಯಾಗುತ್ತಾ ಹೋಗುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ.
ಹಾಗಾಗಿ, ಇಲ್ಲಿ ಹೆದರಿಸುವ, ಬೆದರಿಸುವ ಅಂಶಗಳಿಗೇನು ಕೊರತೆಯಿಲ್ಲ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಎರಡು ಹಾಡುಗಳನ್ನು ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಿಸುವ ಉದ್ದೇಶ ಚಿತ್ರತಂಡಕ್ಕಿದೆ.
ಮಾದೇಶ್ವರ ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಿರಣ್ ಛಾಯಾಗ್ರಹಣ, ದೇವು, ಮಧುರಾ ಸಂಗೀತಾ, ಕುಮಾರ್‌ಗೌಡ ಸಂಕಲನ, ಸಂತೋಷ್ ನೃತ್ಯ ನಿರ್ದೇಶನವಿದೆ. ಶ್ರೀಧರ್, ಸ್ವಪ್ನ, ಸ್ಮೈಲ್ ಶಿವು, ಕಾವ್ಯ, ಓಂಪ್ರಕಾಶ್ ನಾಯ್ಕ, ಅವಿನಾಶ್ ಭಾರದ್ವಾಜ್, ಶಂಕರ್ ಬಾಬು, ರುದ್ರೇಶ್, ಸ್ಮಿತಾ, ಅನಿಲ್, ನವೀನ್, ನೆಲಮಂಗಲ ಜಗದೀಶ್ ಬಾಬು, ಪ್ರಸನ್ನ ಮುಂತಾದವರ ತಾರಾಬಳಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.