ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಅಮೆಜಾನ್ ಪ್ರೈಮ್
ಪಿಆರ್ ಕೆ ಪ್ರೊಡಕ್ಷನ್ ನ ಮೂರು ಚಿತ್ರಗಳು ಶೀಘ್ರವೇ ಪ್ರೈಮ್ ವಿಡಿಯೋದಲ್ಲಿ
Team Udayavani, Jan 21, 2022, 3:27 PM IST
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಪಿಆರ್ ಕೆ ಪ್ರೊಡಕ್ಷನ್‍ನ ಮೂರು ಚಲನಚಿತ್ರಗಳನ್ನು ಓಟಿಟಿ ವೇದಿಕೆ ಅಮೆಜಾನ್ ಪ್ರೈಮ್ ವಿಡಿಯೋ ಶೀಘ್ರವೇ ಬಿಡುಗಡೆ ಮಾಡುತ್ತಿದೆ. ಅಲ್ಲದೇ ಪುನೀತ್ ರಾಜ್‍ಕುಮಾರ್ ಅವರಿಗೆ ತನ್ನದೇ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಪಿ ಆರ್ ಕೆ ಪ್ರೊಡಕ್ಷನ್ ನಿರ್ಮಿಸಿ, ಈಗಾಗಲೇ ಪ್ರೈಮ್ ವಿಡಿಯೋದಲ್ಲಿರುವ ನಾಲ್ಕು ಚಿತ್ರಗಳು ಹಾಗೂ ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಚಿತ್ರವನ್ನು ಫೆ. 1ರಿಂದ 28ರವರೆಗೆ ಉಚಿತವಾಗಿ ನೋಡುವ ಅವಕಾಶ ನೀಡಿದೆ.
ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿಂದ ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ ಕಟ್ ಟು ಕಟ್’ ಮತ್ತು ‘ಫ್ಯಾಮಿಲಿ ಪ್ಯಾಕ್’ ಸಿನಿಮಾಗಳ ಎಕ್ಸ್‌ಕ್ಲೂಸಿವ್ ವರ್ಲ್ಡ್ ಪ್ರೀಮಿಯರ್ ಅನ್ನು ಪ್ರೈಮ್ ವೀಡಿಯೋ ಘೋಷಿಸಿದೆ.
ಅವರ ಐದು ಸ್ಮರಣೀಯ ಚಲನಚಿತ್ರಗಳನ್ನು ಪ್ರೈಮ್ ವೀಡಿಯೋ ಉಚಿತವಾಗಿ ನೀಡುತ್ತಿದೆ. ‘ಯುವರತ್ನ’, ‘ಕವಲುದಾರಿ’, ‘ಮಾಯಾಬಜಾರ್’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಚಿತ್ರಗಳನ್ನು ಫೆಬ್ರವರಿ 1 ರಿಂದ ಒಂದು ತಿಂಗಳವರೆಗೆ ಪ್ರೈಮ್ ಸದಸ್ಯರಲ್ಲದವರಿಗೂ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ:ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್ ನಲ್ಲಿ ಹೊಸ ಮಿಂಚು
ಕೇವಲ ಅಮೆಜಾನ್ ಪ್ರೈಮ್ ಸದಸ್ಯರು ಮಾತ್ರವಲ್ಲದೇ, ಈ ಐದು ಚಲನಚಿತ್ರಗಳನ್ನು ಅಮೆಜಾನ್ ಖಾತೆಯನ್ನು ಹೊಂದಿರುವ ಯಾರಾದರೂ ವಿಶ್ವಾದ್ಯಂತ ಉಚಿತವಾಗಿ ಸ್ಟ್ರೀಮ್ ಮಾಡಬಹುದಾಗಿದೆ.
ಇದರಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ ಕಟ್ ಟು ಕಟ್’ ಮತ್ತು ‘ಫ್ಯಾಮಿಲಿ ಪ್ಯಾಕ್ ಪ್ರೈಮ್’ ಸದಸ್ಯರಿಗೆ ವಿಶೇಷವಾಗಿ ಲಭ್ಯವಿರುತ್ತದೆ.
ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆಗಿನ ಒಡನಾಟದ ಬಗ್ಗೆ ಅಮೆಜಾನ್ ಪ್ರೈಮ್ ವಿಡಿಯೋದ ಕಂಟೆಂಟ್ ಲೈಸೆನ್ಸಿಂಗ್ ಮುಖ್ಯಸ್ಥ ಮನೀಶ್ ಮೆಂಘಾನಿ ಮಾತನಾಡಿ, “ಕಳೆದ ಕೆಲವು ವರ್ಷಗಳಿಂದ, ನಾವು ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆಗೆ ಯಶಸ್ವಿ ಸಹಯೋಗವನ್ನು ಹೊಂದಿದ್ದೇವೆ. ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸೃಜನಶೀಲ ಪ್ರತಿಭೆ ಮತ್ತು ಕಥೆ ಹೇಳುವ ಅವರ ವಿಶಿಷ್ಟ ದೃಷ್ಟಿಗೆ ನಮ್ರ ಗೌರವವನ್ನು ಸಲ್ಲಿಸುವ ಪ್ರಯತ್ನ ನಮ್ಮದಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಕುರಿತ ಧ್ಯೇಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಹಭಾಗಿತ್ವವನ್ನು ಸಾಧಿಸಲಾಗಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದೆ ಮತ್ತು ಈ ಚಲನಚಿತ್ರಗಳು ಭಾರತ ಮತ್ತು ಅದರಾಚೆಗಿನ ಅವರ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತವೆ. ಪುನೀತ್ ರಾಜ್‌ಕುಮಾರ್ ಅವರ ಪ್ರೀತಿಯ ನೆನಪಿಗಾಗಿ ಈ ಸಹಯೋಗದ ಮೂಲಕ ಕೆಲವು ಅತ್ಯುತ್ತಮ ಕಥೆಗಳನ್ನು ಪ್ರಸ್ತುತಪಡಿಸಲು ನಾವು ಸಂತೋಷಪಡುತ್ತೇವೆ. ಪ್ರೈಮ್ ವೀಡಿಯೋದಲ್ಲಿ, ದೇಶೀಯ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಾವು ಯಾವಾಗಲೂ ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, “ಪುನೀತ್ ರಾಜ್‌ಕುಮಾರ್ ಅವರ ವಿಭಿನ್ನ ದೃಷ್ಟಿಕೋನ ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದೆ. ಅವರಿಗೆ ಹೆಚ್ಚಿನ ಅಭಿಮಾನಿಗಳನ್ನು ಮತ್ತು ಗೌರವವನ್ನು ಗಳಿಸಿಕೊಟ್ಟಿದೆ. ಇದನ್ನು ಮುಂದುವರೆಸುವುದು ನಮ್ಮ ಪ್ರಯತ್ನವಾಗಿದೆ. ಪ್ರೈಮ್ ವೀಡಿಯೋ ಮೂಲಕ ನಮ್ಮ ಚಲನಚಿತ್ರಗಳನ್ನು ಪ್ರಪಂಚದಾದ್ಯಂತದ ವೀಕ್ಷಕರಿಗೆ ನೀಡುವ ಉದ್ದೇಶ ಹೊಂದಿದ್ದೇವೆ” ಎಂದಿದ್ದಾರೆ.
ಈ ಚಲನಚಿತ್ರಗಳು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ 240 ದೇಶಗಳಲ್ಲಿ ಪ್ರದರ್ಶನಗೊಳ್ಳಲಿದೆ.
‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರವು ಮಾನವ ಭಾವನೆಗಳು ಮತ್ತು ಸಾಮಾಜಿಕ ಸವಾಲುಗಳ ಆಧುನಿಕ ಕಾಲದ ಪ್ರತಿಬಿಂಬವಾಗಿದ್ದು, ಅಥರ್ವ, ಪ್ರಕಾಶ್ ಕೆ ಜಯರಾಮ್, ಧರ್ಮಣ್ಣ ಕಡೂರ್ ಮತ್ತು ನಟರಾಜ್ ನಟಿಸಿದ್ದಾರೆ. ‘ರಾಮಾ ರಾಮಾ ರೇ’ ಖ್ಯಾತಿಯ ಡಿ. ಸತ್ಯಪ್ರಕಾಶ್ ನಿರ್ದೇಶನ ಮಾಡಿದ್ದು, ವಾಸುಕಿ ವೈಭವ್ ಸಂಗೀತವಿದೆ.
‘ಒನ್ ಕಟ್ ಟು ಕಟ್’ ಒಂದು ದಿನದ ಕಥೆಯನ್ನು ಹೊಂದಿದೆ. ಡ್ಯಾನಿಶ್ ಸೇಟ್, ಪ್ರಕಾಶ್ ಬೆಳವಾಡಿ ಮತ್ತು ಸಂಯುಕ್ತಾ ಹೊರನಾಡು ಅಭಿನಯಿಸಿದ್ದಾರೆ. ವಂಶೀಧರ್ ಭೋಗರಾಜ್ ನಿರ್ದೇಶನ ಮಾಡಿದ್ದು, ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ.
‘ಫ್ಯಾಮಿಲಿ ಪ್ಯಾಕ್’ ಒಂದು ರೊಮ್ಯಾಂಟಿಕ್ ಕಾಮಿಡಿಯಾಗಿದ್ದು, ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಕುಮಾರ್ ನಿರ್ದೇಶನ ಮಾಡಿದ್ದು, ಗುರುಕಿರಣ್ ಸಂಗೀತ ನೀಡಿದ್ದಾರೆ.
ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.