ಅಂಬರೀಷ್‌ ಪುತ್ರ ಅಭಿಷೇಕ್‌ ಚಿತ್ರರಂಗಕ್ಕೆ ಬರಲು ರೆಡಿ


Team Udayavani, Oct 3, 2017, 9:00 PM IST

ambi2.jpg

ಹಿರಿಯ ನಟ ಅಂಬರೀಷ್‌ ಪುತ್ರ ಅಭಿಷೇಕ್‌ ಸಿನಿಮಾ ರಂಗಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಕೆಲವರು ಬರಬಹುದು ಅಂದರೆ, ಇನ್ನೂ ಕೆಲವರು ಅಭಿಷೇಕ್‌ಗೆ ಸಿನಿಮಾ ರಂಗ ಇಷ್ಟವಿಲ್ಲವಂತೆ ಎಂಬಂತಹ ಮಾತುಗಳನ್ನಾಡುತ್ತಿದ್ದರು. ಆದರೆ, ಅದಕ್ಕೆ ಈಗ ಉತ್ತರ ಸಿಕ್ಕಿದೆ. ಸ್ವತಃ ಸುಮಲತ ಮತ್ತು ಅಂಬರೀಷ್‌ ಅವರೇ, ತಮ್ಮ ಪುತ್ರ ಅಭಿಷೇಕ್‌, ಸಿನಿಮಾ ರಂಗಕ್ಕೆ ಎಂಟ್ರಿಯಾಗುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಅಭಿಷೇಕ್‌ ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಅಂಬರೀಷ್‌ ಹಾಗೂ ಸುಮಲತ ಇಬ್ಬರೂ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಪುತ್ರ ಅಭಿಷೇಕ್‌, ಸಿನಿ ಜಗತ್ತಿಗೆ ಕಾಲಿಡುತ್ತಿದ್ದು, ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ. ಈ ಕುರಿತು ಮೊದಲು ಮಾತನಾಡಿದ ಅಂಬರೀಷ್‌, “ಪ್ರತಿ ವರ್ಷವೂ ನನ್ನ ಮಗ ಅಭಿಷೇಕ್‌ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾನೆ. ಆದರೆ, ನಾವೇ ಏನಾದರೂ ಸಾಧನೆ ಮಾಡಿ, ಗ್ರ್ಯಾಂಡ್‌ ಆಗಿ ಹುಟ್ಟು ಹಬ್ಬ ಆಚರಿಸೋಣ ಅಂತ ಹೇಳಿದ್ವಿ.

ಇದೀಗ ಅಭಿಷೇಕ್‌ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾನೆ. ಅದಕ್ಕೆ ಕಾರಣ, ಸಿನಿಮಾರಂಗ. ಸಿನಿಮಾ ಜಗತ್ತಿಗೆ ಎಂಟ್ರಿ ಕೊಡಲು ಅಭಿಷೇಕ್‌ ಬೇಕಾದ ವರ್ಕೌಟ್‌ ಮಾಡಿದ್ದಾನೆ. ಮೆಂಟಲಿ ಪ್ರಿಪೇರ್‌ ಆಗಿದ್ದಾನೆ. ಈಗಾಗಲೇ ಅಭಿಷೇಕ್‌ಗೆ ಬೇರೆ ಪ್ರೊಡಕ್ಷನ್‌ ಹೌಸ್‌ನಿಂದ ಆಫ‌ರ್‌ಗಳು ಬರುತ್ತಿವೆ. ಆದರೆ, ನಾವಿನ್ನೂ ಅಂತಿಮ ಮಾಡಿಲ್ಲ. ಆ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕಿದೆ. ಇನ್ನು, ಅಭಿಷೇಕ್‌ ಚಿತ್ರದಲ್ಲಿ ಅಂಬರೀಷ್‌ ನಟಿಸುತ್ತಾರಾ? ಈ ಪ್ರಶ್ನೆಗೆ, ಉತ್ತರಿಸಿದ ಅಂಬರೀಷ್‌, ಅದು ಮಗನ ಚಿತ್ರದ ಸ್ಕ್ರಿಪ್ಟ್ ಮೇಲೆ ಡಿಪೆಂಡ್‌ ಆಗುತ್ತೆ.

ಒಂದು ವೇಳೆ ಏನಾದ್ರೂ ಆ ರೀತಿ ಇತ್ತು ಅಂದರೆ, ನಾನು ನಟಿಸುತ್ತೇನೆ’ ಎಂದು ಹೇಳಿದರು ಅಂಬರೀಷ್‌. ಅಭಿಷೇಕ್‌ ಮುಂದೆ ನಟನಾದ ಮೇಲೆ ಅಥವಾ ರಾಜಕೀಯಕ್ಕೆ ಬಂದ ಮೇಲೆ ಅವನ ಬರ್ತ್‌ಡೇ ಆಚರಿಸಿ ಎಂದು ಅಭಿಮಾನಿಗಳಿಗೆ ಹೇಳಿದ್ದೇನೆ. ನಮ್ಮ ಕಾಲದಲ್ಲಿದ್ದ ಸಿನಿಮಾ ಇಂಡಸ್ಟ್ರಿ ಈಗ ಇಲ್ಲ. ಈಗಂತೂ ಇಲ್ಲಿ ತಯಾರಿ ಇಲ್ಲದೆ ಏನೂ ಆಗಲ್ಲ. ಹಾಗಾಗಿ ಅಭಿಷೇಕ್‌ ತಯಾರಿ ತಗೋತ್ತಿದ್ದಾನೆ. ಸದ್ಯಕ್ಕೆ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದಾನೆ. ಈಗ ಮಕ್ಕಳಿಗೆ ನಾವು ಏನೂ ಹೇಳುವಂತಿಲ್ಲ.

ಈಗ ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಹೇಳಿದರು. ಇನ್ನು, ಪ್ರಜ್ವಲ್‌, ದಿಗಂತ್‌ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಂಬರೀಷ್‌, ಅವರಿಬ್ಬರು ಈಗ ಬೆಳೆಯುತ್ತಿರುವ ಹುಡುಗರು. ಅವರಿಗೆ ಬೆಳೆಯಲು ಬಿಡಿ. ಇಬ್ಬರೂ ಫೋನ್‌ನಲ್ಲಿ ಮಾತನಾಡಿದ್ದಾರೆ. ಆದರೆ, ಪೊಲೀಸ್‌ ತನಿಖೆ ನಡೆಯುತ್ತಿರುವುದರಿಂದ ಏನನ್ನೂ ಮಾತನಾಡಲ್ಲ ಅಂದರು ಅಂಬರೀಷ್‌. ಮಗನ ಸಿನಿಮಾ ಎಂಟ್ರಿ ಕುರಿತು ಮಾತನಾಡಿದ ಸುಮಲತಾ, “ಯಾವುದೇ ಕ್ಷೇತ್ರವಿರಲಿ, ಆ ಬಗ್ಗೆ ಆಸಕ್ತಿ ಇರಬೇಕು.

ಏನೇ ಮಾಡಿದರೂ ಮೊದಲು ಎಜುಕೇಷನ್‌ ಮುಗಿಸಿದ ಬಳಿಕ ನಿನ್ನ ಆಯ್ಕೆ ಮಾಡಿಕೋ ಅಂತ ಹೇಳಿದ್ದೆ. ಅಪ್ಪ, ಅಮ್ಮ ಇಬ್ಬರೂ ಸಿನಿಮಾದಲ್ಲಿ ಇದ್ದುದರಿಂದ ಮಗನಿಗೂ ಸಿನಿಮಾ ಆಸಕ್ತಿ ಇದೆ. ಹಂತ ಹಂತವಾಗಿ ಮಗ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಇನ್ನು, ಅಭಿಷೇಕ್‌ ಮಾರ್ಷಲ್‌ ಆರ್ಟ್ಸ್ ಕಲಿತಿದ್ದಾನೆ. ಫಿಟ್ನೆಸ್‌ ಕೂಡ ಮಾಡುತ್ತಿದ್ದಾನೆ. ನಾವು ಅಭಿಷೇಕ್‌ಗೆ ಡಾಕ್ಟರ್‌, ಲಾಯರ್‌ ಆಗು ಅಂತ ಹೇಳಿಲ್ಲ. ಆದರೆ, ನೀನು ಹೋಗುತ್ತಿರುವ ದಾರಿ ಸರಿಯಾಗಿರಲಿ ಅಂತ ಹೇಳಿದ್ದೇವೆ.

ನಾವಿಬ್ಬರೂ ಅಭಿನಯ ಮಾಡಿರುವುದರಿಂದ ಆ ಎಕ್ಸ್‌ಪೋಷರ್‌ ಇದ್ದೇ ಇರುತ್ತೆ. ಸೋಲನ್ನು ಹ್ಯಾಂಡಲ್‌ ಮಾಡಬಹುದು. ಆದರೆ, ಸಕ್ಸಸ್‌ ಅನ್ನು ಹ್ಯಾಂಡಲ್‌ ಮಾಡೋದು ಕಷ್ಟ. ಹಾಗಾಗಿ ಹಂತ ಹಂತವಾಗಿ ಬರಬೇಕು ಎಂದು ಹೇಳಿದ್ದೇವೆ. ಅಭಿಷೇಕ್‌ ತುಂಬಾ ಆಸಕ್ತಿ ವಹಿಸಿ, ಮಾರ್ಷಲ್‌ ಆರ್ಟ್ಸ್ ಕಲಿತಿದ್ದಾನೆ. ನನ್ನ ಸಲಹೆಯಂತೆ ಮೊದಲು ಮಾಸ್ಟರ್ಸ್‌ ಫಿನಿಶ್‌ ಮಾಡಿದ್ದಾನೆ. ಅವನು ಸಿನಿಮಾ ಇರಲಿ, ಬೇರೆ ಬಿಜಿನೆಸ್‌ ಇರಲಿ ಆಯ್ಕೆ ಮಾಡಿಕೊಳ್ಳುವುದು ಅವನ ಇಷ್ಟ.

ಆದರೆ, ಯಾವುದೇ ಹೊಸ ಕಾರ್ಯಕ್ಕೆ ಕೈ ಹಾಕಿದರೆ ಅದರಲ್ಲಿ ಹಂತ ಹಂತವಾಗಿ ಯಶಸ್ಸು ಕಾಣಬೇಕು, ಹಾರ್ಡ್‌ವರ್ಕ್‌ ಮಾಡಬೇಕು ಎಂಬುದು ನನ್ನ ಅಭಿಪ್ರಾಯ ಅಂದರು ಸುಮಲತಾ. ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಮಾತಿಗಿಳಿದ ಅಭಿಷೇಕ್‌, “ಪ್ರತಿ ವರ್ಷ ಕೂಡ ನನ್ನ ಬರ್ತ್‌ಡೇಗೆ ಅಭಿಮಾನಿಗಳು ಬರುತ್ತಾರೆ. ಆದರೆ, ಇದೇ ಮೊದಲ ಸಲ ನಾನು ಮಾಧ್ಯಮ ಮುಂದೆ ನಿಂತು ಮಾತಾಡುತ್ತಿದ್ದೇನೆ. ನಾನು ಸಿನಿಮಾ ಕುಟುಂಬದಿಂದ ಬಂದವನು. ಅಪ್ಪ, ಅಮ್ಮ ಇಬ್ಬರೂ ಚಿತ್ರರಂಗದಲ್ಲಿ ಯಶಸ್ವಿ ಚಿತ್ರ ಕೊಟ್ಟವರು.

ಹಾಗಾಗಿ ನನಗೂ ಸಿನಿಮಾ ಮಾಡಬೇಕು ಅಂತ ಅನಿಸಿದೆ. ಈಗಾಗಲೇ ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಬ್ಯಾಂಕಾಕ್‌ನಲ್ಲಿ ಫೈಟ್‌, ಯೋಗ ಕಲಿತಿದ್ದೇನೆ. ಬೆಂಗಳೂರಿನ ಅಭಿನಯ ತರಂಗದಲ್ಲಿ ನಟನಾ ತರಬೇತಿ ಪಡೆಯುತ್ತೇನೆ. ಮೊದಲು ಓದಬೇಕಿತ್ತು. ಓದಿದೆ. ಅದಾದ ಬಳಿಕ ಏನು ಮಾಡ್ತೀಯ ಅಂತ ಅಪ್ಪ, ಅಮ್ಮ ಕೇಳಿದರು. ನಾನು ಸಿನಿಮಾ ಮಾಡ್ತೀನಿ ಅಂತ ಹೇಳಿದೆ. ಈಗ ತಯಾರಿ ನಡೆಯುತ್ತಿದೆ’ ಎಂದಷ್ಟೇ ಹೇಳಿದರು ಅಭಿಷೇಕ್‌.

ಅವರಿಗೆ ಬೆಳೆಯಲು ಬಿಡಿ!: ಇತ್ತೀಚೆಗೆ ನಡೆದ ಅಪಘಾತ ಪ್ರಕರಣವೊಂದರಲ್ಲಿ ಪ್ರಜ್ವಲ್‌, ದಿಗಂತ್‌ ಜೊತೆಗೆ ಅಭಿಷೇಕ್‌ ಹೆಸರು ಸಹ ಕೇಳಿಬಂದಿತ್ತು. ಆದರೆ, ಈ ಪ್ರಕರಣಕ್ಕೂ ತಮ್ಮ ಮಗನಿಗೂ ಯಾವುದೇ ಸಂಬಂಧವಿಲ್ಲ ಎಂದು ಅಂಬರೀಶ್‌ ಮತ್ತು ಸುಮಲತಾ ಸ್ಪಷ್ಟಪಡಿಸಿದ್ದರು. ಇನ್ನು ಪ್ರಜ್ವಲ್‌ ಮತ್ತು ದಿಗಂತ್‌ ಅವರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಂಬರೀಶ್‌, “ಅವರಿಬ್ಬರು ಈಗ ಬೆಳೆಯುತ್ತಿರುವ ಹುಡುಗರು. ಅವರಿಗೆ ಬೆಳೆಯಲು ಬಿಡಿ. ಇಬ್ಬರೂ ಫೋನ್‌ನಲ್ಲಿ ಮಾತನಾಡಿದ್ದಾರೆ. ಆದರೆ, ಪೊಲೀಸ್‌ ತನಿಖೆ ನಡೆಯುತ್ತಿರುವುದರಿಂದ ಏನನ್ನೂ ಮಾತನಾಡಲ್ಲ’ ಅಂದರು ಅಂಬರೀಶ್‌.

ಟಾಪ್ ನ್ಯೂಸ್

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.