ರಜನಿ ಮಾತಲ್ಲಿ ಅಂಬಿ ಸ್ನೇಹ
Team Udayavani, Nov 26, 2018, 11:40 AM IST
ಅಂಬರೀಷ್ ಅವರ ವ್ಯಕ್ತಿತ್ವ ಎಂಥವರನ್ನಾದರೂ ಸೆಳೆಯುವಂಥದ್ದು. ಅದೇ ಕಾರಣದಿಂದ ಅವರ ಸ್ನೇಹಿತರ ಬಳಗ ದೊಡ್ಡದಿದೆ. ಕೇವಲ ಕನ್ನಡವಷ್ಟೇ ಅಲ್ಲದೇ ಪರಭಾಷಾ ನಟರು ಕೂಡಾ ಅಂಬರೀಷ್ ಅವರ ಆಪ್ತರಾಗಿದ್ದರು. ಅದರಲ್ಲಿ ಪ್ರಮುಖವಾಗಿದ್ದವರೆಂದರೆ ರಜನಿಕಾಂತ್. ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಅಪಾರ ಸಂಖ್ಯೆಯ ಅಭಿಮಾನಿ ವರ್ಗವನ್ನು ಹೊಂದಿರುವ ರಜನಿಕಾಂತ್, ಅಂಬಿಯವರ “ಹೋಗೋ ಬಾರೋ’ ಸ್ನೇಹಿತ.
ಇಬ್ಬರು ಚಿತ್ರರಂಗದಲ್ಲಿ ಕಷ್ಟಪಟ್ಟು ಗಟ್ಟಿ ನೆಲೆ ಕಂಡುಕೊಂಡವರು. ಅಂದು ಆರಂಭವಾದ ಅವರಿಬ್ಬರ ನಿಷ್ಕಲ್ಮಶ ಸ್ನೇಹ ಹಾಗೆ ಮುಂದುವರೆದುಕೊಂಡು ಬಂದಿದೆ. ಅಂಬರೀಷ್ ಚೆನ್ನೈಗೆ ಹೋದರೆ ರಜನಿಕಾಂತ್ ಅವರನ್ನು ಭೇಟಿಯಾಗದೇ ಬರುತ್ತಿರಲಿಲ್ಲ. ಅದರಂತೆ ರಜನಿಕಾಂತ್ ಕೂಡಾ ಬೆಂಗಳೂರಿಗೆ ಬಂದರೆ ಅಂಬಿ ಮನೆಗೆ ಹೋಗಿ ಮಾತನಾಡಿ, ಊಟ ಮಾಡದೇ ಹೋಗುತ್ತಿರಲಿಲ್ಲ.
ಆದರೆ, ಇತ್ತೀಚೆಗೆ ಒಂದು ಬಾರಿ ರಜನಿಕಾಂತ್ ಅವರು ಬೆಂಗಳೂರಿಗೆ ಬಂದು ಹೋದರೂ ತುರ್ತು ಕಾರಣಗಳಿಂದಾಗಿ ಅಂಬಿ ಮನೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದು ಅಂಬಿಗೆ ಗೊತ್ತಾಗಿ, ತಮ್ಮದೇ ಶೈಲಿಯಲ್ಲಿ ರಜನಿಗೆ ಗದರಿದ್ದಾರೆ. “ಬಡ್ಡಿ ಮಗನೇ ಇನ್ನೊಂದ್ಸಾರಿ ಮನೆಗೆ ಬಾರದೇ ಹಾಗೇ ಹೋದರೆ ಸಾಯಿಸಿ ಬಿಡ್ತೀನಿ’ ಎಂದು. ಈ ವಿಚಾರವನ್ನು ಸ್ವತಃ ರಜನಿಕಾಂತ್ ಹೇಳಿಕೊಂಡು ಭಾವುಕರಾದರು.
ಅಂಬಿಯ ಅಂತಿಮ ದರ್ಶನಕ್ಕಾಗಿ ಚೆನ್ನೈನಿಂದ ಬಂದ ರಜನಿ, ಗೆಳೆಯನನ್ನು ನೋಡಿ ಕಣ್ಣೀರು ಹಾಕಿದರು. ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆಯುತ್ತಾ ಸುಮಲತಾ ಅವರಿಗೆ ಸಾಂತ್ವನ ಹೇಳಿದರು. ಆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅಂಬರೀಷ್, “ಒಬ್ಬ ಅದ್ಭುತ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಆತ ರಾಜನಂತೆ ಬದುಕಿದ. ಆತನ ತರಹ ಬದುಕಲು ಯಾರಿಂದಲೂ ಸಾಧ್ಯವಿಲ್ಲ. ಸಾಮಾನ್ಯವಾಗಿ ನಾನು ಬೆಂಗಳೂರಿಗೆ ಬಂದರೆ ಅಂಬಿ ಮನೆಗೆ ಹೋಗಿ ಹೋಗುತ್ತಿದ್ದೆ.
ಆದರೆ ಕಳೆದ ಬಾರಿ ಭೇಟಿ ಕೊಟ್ಟಾಗ ಆತನ ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದರಿಂದ ಸಿಟ್ಟಾದ ಆತ ಕರೆ ಮಾಡಿ, “ಬಡ್ಡಿ ಮಗನೇ ಇನ್ನೊಂದ್ಸಾರಿ ಮನೆಗೆ ಬಾರದೇ ಹಾಗೇ ಹೋದರೆ ಸಾಯಿಸಿ ಬಿಡ್ತೀನಿ’ ಎಂದಿದ್ದ. ಆ ತರಹದ ಸ್ನೇಹ ನಮ್ಮಿಬ್ಬರ ಮಧ್ಯೆ ಇತ್ತು. ಚಿತ್ರರಂಗಕ್ಕೆ ಅಂಬರೀಷ್‌ನಂತಹ ನಟ ಬರಬಹುದು, ಆದರೆ ಆತನಂತಹ ಮನುಷ್ಯ ಬರಲು ಸಾಧ್ಯವಿಲ್ಲ’ ಎಂದು ತಮ್ಮಿಬ್ಬರ ಗೆಳೆತನವನ್ನು ಮೆಲುಕು ಹಾಕಿದರು ರಜನಿಕಾಂತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.