ಅಂಬಿ ನಿಂಗ್‌ ವಯಸ್ಸಾಗಿಲ್ಲ!


Team Udayavani, Sep 29, 2018, 11:33 AM IST

ambi-ning-vayasaitoo.jpg

“ಮನೆಬಿಟ್ಟು ಹೋದ ವಯಸ್ಸಾದ ಅಪ್ಪನನ್ನು ಮಗ ಹುಡುಕಿ ಹೊರಟರೆ, ಆ ವಯಸ್ಸಾದ ಅಪ್ಪ, ತನ್ನ ಮೊದಲ ಪ್ರೇಯಸಿಯನ್ನು ಹುಡುಕಿ ಹೊರಟಿರುತ್ತಾನೆ…’ ಮಗನಿಗೆ ತನ್ನ ವಯಸ್ಸಾದ ಅಪ್ಪ ಸಿಗುತ್ತಾನಾ? ಆ ವಯಸ್ಸಾದ ಅಪ್ಪನಿಗೆ ಮೊದಲ ಪ್ರೇಯಸಿ ಸಿಗುತ್ತಾಳಾ? ಇದು “ಅಂಬಿ ನಿಂಗ್‌ ವಯಸ್ಸಾಯ್ತೋ’ ಚಿತ್ರದ ಒನ್‌ಲೈನ್‌. ಇದನ್ನು ಕೇಳುವುದಕ್ಕೇ ಒಂದು ಮಜಾ ಅಂದಮೇಲೆ ನೋಡಿದರೆ ಇನ್ನೆಷ್ಟು ಮಜಾ ಸಿಗಬೇಡ. ಇಷ್ಟಕ್ಕೂ ಆ ವಯಸ್ಸಾದ ಅಪ್ಪ, ಮಗನ ಮನೆ ಬಿಟ್ಟು ಹೋಗುವುದೇಕೆ?

ಆ ವಯಸ್ಸಲ್ಲೂ ತನ್ನ ಮೊದಲ ಪ್ರೇಯಸಿಯನ್ನು ಬಯಸಿ ಹೊರಡಲು ಕಾರಣವೇನು? ಇಷ್ಟು ಹೇಳಿದ ಮೇಲೆ ಕುತೂಹಲ ಸಹಜ. ಆ ಕುತೂಹಲ ತಣಿಯಬೇಕಾದರೆ ಚಿತ್ರ ನೋಡಬೇಕು. ಇಲ್ಲಿ ಸ್ಟಾರ್‌ ನಟರಿದ್ದಾರೆ ಎನ್ನುವುದಕ್ಕಿಂತ ಸ್ಟಾರ್‌ ಎನ್ನುವ ಕಥೆ ಇದೆ. ಅದೇ ಚಿತ್ರದ ಜೀವಾಳ. ಅದಕ್ಕೆ ತಕ್ಕಂತಿರುವ ಚಿತ್ರಕಥೆ ಚಿತ್ರದ ವೇಗಕ್ಕೊಂದು ಹೆಗಲು ಕೊಟ್ಟಂತಿದೆ. ಇವೆಲ್ಲದರ ನಡುವೆ ಸುಮ್ಮನೆ ನೋಡಿಸಿಕೊಂಡು ಹೋಗುವ “ಅಂಬಿ’, ಯಾವ ನಂಬಿಕೆಗೂ ಧಕ್ಕೆ ತಂದಿಲ್ಲ. ಚಿತ್ರದ ಮೊದಲರ್ಧ ಮನರಂಜನೆಯ ಹೂರಣ.

ದ್ವಿತಿಯಾರ್ಧ ಭಾವುಕತೆಗೆ ಕಾರಣ. ಇಲ್ಲಿ ನಗುವಿದೆ, ಅಳುವಿದೆ, ಸ್ವಾಭಿಮಾನದ ತುಡಿತವಿದೆ, ಭಾವನಾತ್ಮಕ ಸಂಬಂಧವಿದೆ. ಕಳೆದು ಹೋದ ಮನಸ್ಸುಗಳ ಬೆಸುಗೆಯ ಆಪ್ತತೆ ಇದೆ. ಎಲ್ಲರಿಗೂ ಒಂದೊಳ್ಳೆಯ ಜೀವನವಿದೆ ಎಂಬ ಸಾರವಿದೆ. ಇವೆಲ್ಲವನ್ನೂ ಹದವಾಗಿಸಿ, ಎಲ್ಲೂ ರುಚಿಗೆಡದಂತೆ ಅಲ್ಲಲ್ಲಿ ಮನರಂಜನೆಯ ಪಾಕ ಬೆರೆಸಿ, ಎದೆ ಭಾರವಾಗಿಸುವ ದೃಶ್ಯಗಳೊಂದಿಗೆ ಮಾಸ್‌ ಮತ್ತು ಕ್ಲಾಸ್‌ ಅಂಶಗಳ ಮಿಶ್ರಣ ಮಾಡಿ ಎಲ್ಲಾ ವಯಸ್ಸಿನವರಿಗೂ ಚಿತ್ರ ಕಟ್ಟಿಕೊಡುವಲ್ಲಿ ನಿರ್ದೇಶಕ ಗುರುದತ್ತ ಗಾಣಿಗ ತಕ್ಕಮಟ್ಟಿಗೆ ಯಶಸ್ವಿ.

ಇನ್ನು, ನಿರ್ದೇಶಕರಿಗೂ ಅಲ್ಲಲ್ಲಿ ಗೊಂದಲವಾದಂತಿದೆ. ಆದರೆ, ನೋಡುಗನಿಗೆ ಗೊಂದಲವಾಗದ ರೀತಿ ಚಿತ್ರ ನಿರೂಪಿಸುವ ಮೂಲಕ “ಅಂಬಿ’ಗೆ ವಯಸ್ಸಾಗಿಲ್ಲ ಎಂಬುದನ್ನು ಸಾಬೀತುಪಡಿಸಿರುವುದೇ ಚಿತ್ರದ ಅಲ್ಪ ಹೆಗ್ಗಳಿಕೆ. ಬೆರಳೆಣಿಕೆಯ ದೃಶ್ಯಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದ ಪ್ರಸಂಗ ಇಲ್ಲಿದ್ದರೂ, ಅದಕ್ಕೊಂದು “ಹಿನ್ನೆಲೆ’ ಕಟ್ಟಿಕೊಟ್ಟಿರುವ ಪ್ರಯತ್ನ ಕೆಲ ತಪ್ಪುಗಳನ್ನು ಪಕ್ಕಕ್ಕಿಡುವಂತೆ ಮಾಡುತ್ತದೆ. ಅದು ಬಿಟ್ಟರೆ, ಸರಾಗವಾಗಿ ಹರಿಯುವ ತಿಳಿ ನೀರಿಗೆ ಕಲ್ಲೆಸದಂತೆ ಹಾಡುಗಳು ಎದುರಾಗುತ್ತವೆ.

ಇಂತಹ ಚಿತ್ರಕ್ಕೆ ಹಾಡುಗಳಲ್ಲಿನ್ನೂ ಹೆಚ್ಚಿನ ಪರಿಶ್ರಮ ಇರಬೇಕಿತ್ತೇನೋ ಅನಿಸೋದು ನಿಜ. ಹಾಡಿಗೆ ಹೆಜ್ಜೆ ಹಾಕಿರುವ ಅಂಬರೀಶ್‌ ಅವರಲ್ಲಿರುವ ಉತ್ಸಾಹ ಹಾಡಿನಲ್ಲಿ ಇಲ್ಲ ಎಂಬುದೇ ಮೈನಸ್‌. ಇಲ್ಲಿ “ಹೇ ಜಲೀಲ…’ ಹಾಡೊಂದು ಶಿಳ್ಳೆಗಿಟ್ಟಿಸಿಕೊಳ್ಳುತ್ತದೆಯಷ್ಟೇ.  ಇನ್ನು, 67 ರ ವಯಸ್ಸಲ್ಲೂ “ರೆಬೆಲ್‌’ ಅಂಶ ಮೇಳೈಸಿರುವುದು ಇಡೀ ಚಿತ್ರದ ಚಲನಶೀಲತೆಗೆ ಕಾರಣ. ಹುಚ್ಚೆಬ್ಬಿಸಿ ಕುಣಿಸೋ ಅಂಬಿ ಎಂಟ್ರಿಯೂ ಇದೆ, ಶಿಳ್ಳೆ ಹಾಕುವ ಮಾಸ್‌ ಡೈಲಾಗೂ ಇಲ್ಲಿದೆ. ಭಾವುಕರನ್ನಾಗಿಸುವ ದೃಶ್ಯಗಳೂ ತುಂಬಿವೆ.

ಒಟ್ಟಾರೆ “ಮಂಡ್ಯ ಗೌಡ್ರು’ ನಡಿಗೆ ಸೂಪರ್‌ ಎನಿಸುವಷ್ಟರ ಮಟ್ಟಿಗೆ ಚಿತ್ರ ಹತ್ತಿರವಾಗುತ್ತದೆ. ಇದು ತಮಿಳಿನ “ಪವರ್‌ ಪಾಂಡಿ’ ಚಿತ್ರದ ರಿಮೇಕ್‌. ಹಾಗಂತ ಆ ಚಿತ್ರದ ಹೆಸರಷ್ಟೇ ಕೇಳಬಹುದು ವಿನಃ, ಇಲ್ಲಿ ಸಾಕಷ್ಟು ಹೊಸತನ ತುಂಬಿದೆ. ದೇಸೀತನವಿದೆ. ನೆಲದ ಮಣ್ಣಿನ ವಾಸನೆಯೂ ಇದೆ. ತಾತ ಎನಿಸಿಕೊಂಡರೂ ಅಂಬಿಯ ಫಿಗರ್ರು, ಖದರ್ರು, ಪವರ್ರು, ತುಂಟಾಟಗಳೆಲ್ಲವೂ ನೈಜತೆಗೆ ಹತ್ತಿರವೆನಿಸುತ್ತದೆ. ರೆಬೆಲ್‌ ವ್ಯಕ್ತಿಯ ಕಲರ್‌ಫ‌ುಲ್‌ ಚಿತ್ರಣದಲ್ಲಿ ಒಂದೊಳ್ಳೆಯ ಭಾವನಾತ್ಮಕ ಸಂದೇಶವಿದೆ. ಅದೇ ಚಿತ್ರದ ಜೀವಾಳ.

ಮೂಲ ಚಿತ್ರ ನೋಡಿದವರಿಗೆ ಇದು ಅಷ್ಟಾಗಿ ರುಚಿಸದೇ ಇರಬಹುದು. ಆದರೆ, ಮೊದಲ ಸಲ ನೋಡುಗರಿಗಂತೂ “ಅಂಬಿ’ ಕಬ್ಬಿನ ಹಾಲು. ಅಂಬಿ (ಅಂಬರೀಶ್‌) ಒಬ್ಬ ಸೀನಿಯರ್‌ ಫೈಟ್‌ ಮಾಸ್ಟರ್‌. ನಿವೃತ್ತಿಯಲ್ಲೂ ರೆಬೆಲ್‌ ನಂಟು ಬಿಡದ ವ್ಯಕ್ತಿತ್ವ. ತಪ್ಪು ಕಂಡರೆ ತಿದ್ದುವ, ದುಷ್ಟರನ್ನು ಸದೆಬಡಿಯುವ ವ್ಯಕ್ತಿ. ಒಂದಿಲ್ಲೊಂದು ಕಾರಣಕ್ಕೆ ಆಗಾಗ ಪೊಲೀಸ್‌ ಮೆಟ್ಟಿಲು ತುಳಿಯುವ ಪರಿಸ್ಥಿತಿ. ಅತ್ತ, ನಿತ್ಯವೂ ಮಗನ ಬೈಗುಳ. ಇದರಿಂದ ಬೇಸರಗೊಳ್ಳುವ ಅಂಬಿ, “ಮಕ್ಕಳ ಜೀವನದಲ್ಲಿ ನಾನಿದ್ದೇನೆ.

ನನಗೂ ಒಂದು ಜೀವನ ಇದೆ’ ಅಂದುಕೊಂಡು ರಾತ್ರೋ ರಾತ್ರಿ ತನ್ನ ಬುಲೆಟ್‌ನೊಂದಿಗೆ ಜರ್ನಿ ಶುರು ಮಾಡುತ್ತಾರೆ. ತನ್ನ ಹಳೆಯ ಪ್ರೇಯಸಿ ನಂದಿನಿ (ಸುಹಾಸಿನಿ)ಯನ್ನು ಹುಡುಕಿ ಹೊರಡುತ್ತಾರೆ. ಜರ್ನಿ ನಡುವೆ ಒಂದಷ್ಟು ಫ್ಲ್ಯಾಶ್‌ಬ್ಯಾಕ್‌ಗೆ ಹೋಗುತ್ತಾರೆ. ಆ ಫ್ಲ್ಯಾಶ್‌ಬ್ಯಾಕ್‌ನಲ್ಲೊಂದು ಪ್ರೇಮ ಕಥೆ ತೆರೆದುಕೊಳ್ಳುತ್ತೆ. ಯೌವ್ವನದಲ್ಲಿದ್ದಾಗ ತನ್ನ ಹಳ್ಳಿ ಜಾತ್ರೆಗೆ ಬಂದ ಹುಡುಗಿಯೊಬ್ಬಳಿಗೆ ಮನಸೋತು ಪ್ರೀತಿಸಿದ ಅಂಬಿಗೆ, ಹುಡುಗಿ ಅಪ್ಪನ ಅಡ್ಡಿಯಾಗುತ್ತೆ. ಅಲ್ಲಿಗೆ ಇಬ್ಬರ ಪ್ರೀತಿಗೂ ಬ್ರೇಕ್‌ ಬೀಳುತ್ತೆ.

ಅಂಬಿಗೆ ವಯಸ್ಸಾದರೂ ಭಾವನೆಗಳಿಗೆ ಕೊನೆಯಿಲ್ಲ. ಆ ಹಂತದಲ್ಲೂ ತನ್ನ ಪ್ರೇಯಸಿ ಹುಡುಕಿ ಹೊರಡುವ ಅಂಬಿಗೆ ಹಳೇ ಹುಡುಗಿ ಸಿಗುತ್ತಾಳಾ, ಇಲ್ಲವಾ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಸಿನಿಮಾ ನೋಡಬಹುದು. ಅಂಬರೀಶ್‌ ಅವರ ನಟನೆ, ಪಡ್ಡೆಗಳ ಜೊತೆಗಿನ ಡ್ಯಾನ್ಸು, ಪುಡಿರೌಡಿಗಳ ಜೊತೆ ಫೈಟು, ಪಂಚಿಂಗ್‌ ಡೈಲಾಗು ಎಲ್ಲವನ್ನೂ ನೋಡಿದರೆ, ಅವರಿಗೆ “ವಯಸ್ಸಾಯ್ತು’ ಅಂತ ಹೇಳಿದವರ್ಯಾರು ಎಂಬ ಪ್ರಶ್ನೆ ಬರುತ್ತೆ. ಅಷ್ಟರ ಮಟ್ಟಿಗೆ ಎಂದಿನ ಎನರ್ಜಿ ಪಾತ್ರದಲ್ಲಿದೆ. ಅವರಿಗೆ ವಯಸ್ಸಾಗಿದ್ದರೂ, ಅವರೊಳಗಿನ ಕಲಾವಿದ ಮಾತ್ರ ಹದಿಹರೆಯ.

ತೆರೆಯ ಮೇಲೆ ಕೆಲ ಹೊತ್ತು ಬಂದರೂ ಸುದೀಪ್‌ ಇಷ್ಟವಾಗುತ್ತಾರೆ. ಹಳ್ಳಿ ಹೈದನಾಗಿ, ಮುಗ್ಧ ಪ್ರೇಮಿಯಾಗಿ ಖುಷಿಕೊಡುತ್ತಾರೆ. ಸುಹಾಸಿನಿ ಅವರದು ನೈಜತೆ ತುಂಬಿದ ಅಭಿನಯ. ಅವರ ಎಂದಿನ ನಗುವೇ ಇಲ್ಲಿ ಹೈಲೆಟ್‌. ಶ್ರುತಿಹರಿಹರನ್‌ ಸಿಕ್ಕ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಬಂದು ಹೋಗುವ ಪಾತ್ರಗಳೆಲ್ಲವೂ ನ್ಯಾಯ ಒದಗಿಸಿವೆ. ಅರ್ಜುನ್‌ ಜನ್ಯ ಹಿನ್ನೆಲೆ ಸಂಗೀತಕ್ಕೆ ಕೊಟ್ಟಷ್ಟು ಗಮನವನ್ನು  ಹಾಡಿಗೂ ಕೊಡಬಹುದಿತ್ತು. ಜೆಬಿನ್‌ ಜೇಕಬ್‌ ಛಾಯಾಗ್ರಹಣದಲ್ಲಿ “ಅಂಬಿ’ಯ ಸೊಗಸಿದೆ. -ಕೊನೇ ಮಾತು, ಅಂಬಿ ಎವರ್‌ಗ್ರೀನ್‌ ಲವ್‌ಸ್ಟೋರಿಗೆ ಇದೂ ಹೊಸ ಸೇರ್ಪಡೆ.

ಚಿತ್ರ: ಅಂಬಿ ನಿಂಗ್‌ ವಯಸ್ಸಾಯ್ತೋ
ನಿರ್ಮಾಣ: ಜಾಕ್‌ ಮಂಜು
ನಿರ್ದೇಶನ: ಗುರುದತ್ತ ಗಾಣಿಗ
ತಾರಾಗಣ: ಅಂಬರೀಶ್‌, ಸುಹಾಸಿನಿ, ಸುದೀಪ್‌, ಶ್ರುತಿ ಹರಿಹರನ್‌, ದಿಲೀಪ್‌ರಾಜ್‌, ಅವಿನಾಶ್‌, ಜೈ ಜಗದೀಶ್‌ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.