ಅಂಬಿ ಸಂಭ್ರಮ : ಆಗಸ್ಟ್‌10ಕ್ಕೆ ಹಾಡು ಬಿಡುಗಡೆ


Team Udayavani, Aug 1, 2018, 11:48 AM IST

ambareesh-1-8.jpg

ಎಲ್ಲಾ ಅಂದುಕೊಂಡಂತಾಗಿದ್ದರೆ, ಆಗಸ್ಟ್‌ 10ರಂದು ಅಂಬರೀಶ್‌ ಮತ್ತು ಸುದೀಪ್‌ ಅಭಿನಯದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆ ಸ್ವಲ್ಪ ಮುಂದಕ್ಕೆ ಹೋಗಿದ್ದು, ಆಗಸ್ಟ್‌10ರಂದು ಚಿತ್ರದ ಹಾಡುಗಳು ಬಿಡುಗಡೆಯಾಗಲಿದೆ. ಅರಮನೆ ಮೈದಾನದಲ್ಲಿ ಆಯೋಜಿತವಾಗಿರುವ ಈ ಸಮಾರಂಭದ ವಿಶೇಷತೆ ಏನೆಂದರೆ, ಕನ್ನಡ ಚಿತ್ರರಂಗದ ಎಲ್ಲಾ ಟಾಪ್‌ ಸ್ಟಾರ್‌ಗಳು ಭಾಗವಹಿಸುತ್ತಿರುವುದು. ಅಷ್ಟೇ ಅಲ್ಲ, ಈ ಸಮಾರಂಭಕ್ಕೆ ತಮಿಳಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಸಹ ಬರುವ ಸಾಧ್ಯತೆ ಇದೆ. ಈಗಾಗಲೇ ರಜನಿಕಾಂತ್‌ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಸಮಾರಂಭಕ್ಕೆ ಬರುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ಅವರ ಅಳಿಯ ಮತ್ತು ಮೂಲ ಚಿತ್ರವನ್ನು ನಿರ್ದೇಶಿಸಿ, ಅದರಲ್ಲಿ ನಟಿಸಿದ್ದ ಧನುಷ್‌ ಈ ಸಮಾರಂಭಕ್ಕೆ ಖಂಡಿತಾ ಬರುತ್ತಾರಂತೆ.

ಸುದೀಪ್‌ ಈ ಚಿತ್ರದ ನಿಜವಾದ ಬ್ಯಾಕ್‌ ಬೋನ್‌: ಅಂಬರೀಶ್‌
ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟಿದ್ದಾರೆ. ಅದಕ್ಕೆ ಕಾರಣ ಚಿತ್ರ ಮೂಡಿಬಂದಿರುವ ರೀತಿ. ಇತ್ತೀಚೆಗೆ ಅಂಬರೀಶ್‌ ಅವರು ತಮ್ಮ ಪಾತ್ರಕ್ಕೆ ಡಬ್‌ ಮಾಡಿದ್ದು, ಆ ಸಂದರ್ಭದಲ್ಲಿ ಚಿತ್ರ ನೋಡಿ ಖುಷಿಯಾಗಿದ್ದಾರೆ. ಅದರಲ್ಲೂ ಸುದೀಪ್‌ ಅವರ ಬಗ್ಗೆ ಸ್ವಲ್ಪ ಜಾಸ್ತಿಯೇ ಖುಷಿಯಿಂದ ಮಾತನಾಡುತ್ತಾರೆ. ‘ನಾನು ಈ ಚಿತ್ರದಲ್ಲಿ ಬರೀ ನಟನೆ ಮಾಡಿದ್ದೀನಿ. ಆದರೆ, ಸುದೀಪ್‌ ಈ ಚಿತ್ರದ ನಿಜವಾದ ಬ್ಯಾಕ್‌ ಬೋನ್‌. ಇಲ್ಲಿ ನನಗಿಂಥ ಅವನ ಪಾಲು ಜಾಸ್ತಿ ಇದೆ. ತೆರೆಯ ಮೇಲೆ ಅವನು ಕಾಣಿಸಿಕೊಳ್ಳುವುದು ಅರ್ಧ ಗಂಟೆಯಾದರೂ, ತೆರೆಯ ಹಿಂದೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾನೆ. ಬಿಡುವಿಲ್ಲದಂತೆ ಓಡಾಡಿದರೂ ಚಿತ್ರದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾನೆ. ಸಿನಿಮಾ ಬಿಟ್ಟರೆ ಅವನ ಹತ್ತಿರ ಬೇರೆ ವಿಷಯ ಮಾತಾಡೋದು ಕಷ್ಟ. ಅಂತ ಹಾರ್ಡ್‌ ವರ್ಕರ್‌ ಅವನು. ಮೊದಲು ಈ ಚಿತ್ರವನ್ನ ನಾನು ಮಾಡೋದಿಲ್ಲ ಅಂತ ಹೇಳಿದ್ದೆ. ಮೂಲ ಚಿತ್ರ ನೋಡಿ ಖುಷಿ ಆಯ್ತು. ಅಷ್ಟರಲ್ಲಿ ಈ ಸಿನಿಮಾ ನಿರ್ಮಿಸಬೇಕಿದ್ದವರು ಬದಲಾಗಿ, ಕೊನೆಗೆ ಸುದೀಪ್‌ ಈ ಚಿತ್ರವನ್ನು ನಿರ್ಮಿಸೋಕೆ ಮುಂದೆ ಬಂದ. ಬಹಳ ಖುಷಿಯಿಂದ ಈ ಚಿತ್ರದಲ್ಲಿ ನಟಿಸೋಕೆ ಒಪ್ಪಿಕೊಂಡೆ’ ಎನ್ನುತ್ತಾರೆ ಅಂಬರೀಶ್.

ಸಿನಿಮಾ ನೋಡಿ ನನಗೆ ವಯಸ್ಸಾಯ್ತಾ ಅಂತ ಹೇಳಿ:
ಇನ್ನು ನಿರ್ದೇಶಕ ಗುರುದತ್‌ ಗಾಣಿಗ ಅವರ ಬಗ್ಗೆ ಮಾತನಾಡುವ ಅಂಬರೀಶ್‌, ಮೊದಲು ಗುರುದತ್‌ ಅವರನ್ನು ನೋಡಿದಾಗ ನಕ್ಕಿದ್ದರಂತೆ. ‘ಆ ಹುಡುಗ ಏನು ಮಾಡಬಹುದು ಎಂಬ ಕುತೂಹಲವಿತ್ತು. ಆದರೆ, ಕೆಲವು ಮಹತ್ವದ ದೃಶ್ಯಗಳನ್ನ ಬಹಳ ಚೆನ್ನಾಗಿ ಚಿತ್ರೀಕರಣ ಮಾಡಿದ್ದಾನೆ. ಯಾರದೋ ದೇಹ, ಗಾತ್ರ ನೋಡಿ ಅವರನ್ನು ಅಳಿಯಬಾರದು. ಅದಕ್ಕೆ ಒಳ್ಳೆಯ ಉದಾಹರಣೆ ನಾನೇ. 500 ರೂಪಾಯಿಗೆ ವಿಲನ್‌ ಪಾತ್ರ ಮಾಡೋಕೆ ಬಂದ ನಾನು, ನಂತರದ ವರ್ಷಗಳಲ್ಲಿ ಪೋಷಕ ಪಾತ್ರ ಮಾಡಿ, ನಾಯಕನಾಗಿ, ಜನನಾಯಕನಾಗಲಿಲ್ಲವಾ? ಅದೇ ತರಹ ಈ ಚಿತ್ರದ ಪಾತ್ರವೂ ಇದೆ. ತಲೆಗೂದಲು ಬೆಳ್ಳಗಾದ ಮಾತ್ರಕ್ಕೆ ಅವನಿಗೆ ವಯಸ್ಸಾಯ್ತು ಅಂತ ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ. ಸಿನಿಮಾ ನೋಡಿ, ನನಗೆ ನಿಜಕ್ಕೂ ವಯಸ್ಸಾಯ್ತಾ? ಅಂತ ನೀವೇ ಹೇಳಿ’ ಎನ್ನುತ್ತಾರೆ ಅಂಬರೀಶ್‌.

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Devaraj; ಡಿಸೆಂಬರ್‌ ಗೆ ಬರಲಿದೆ ʼರಾಕ್ಷಸʼ

Prajwal Devaraj; ಡಿಸೆಂಬರ್‌ ಗೆ ಬರಲಿದೆ ʼರಾಕ್ಷಸʼ

Mooru Kaasina Kudure movie is in Amazon prime

Mooru Kaasina Kudure: ಅಮೆಜಾನ್‌ ನಲ್ಲಿ ನವ ತಂಡದ ಸಿನಿಮಾ

Shiva Rajkumar’s Bhairathi ranagal sequel will come soon

Shiva Rajkumar: ಬರಲಿದೆ ಭೈರತಿ ರಣಗಲ್‌-2

BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ

BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ

Jaggesh–Guru

Director Guru: ಗುರುಪ್ರಸಾದ್‌ ಬೆಳವಣಿಗೆಗೆ ಆ ಎರಡು ವಿಚಾರಗಳು ತಡೆಯಾದವು…: ನಟ ಜಗ್ಗೇಶ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.