ಅಂಬಿ ಅಂಕಲ್ ನಿಧನದ ಸುದ್ದಿಯೇ ಗೊತ್ತಿರಲಿಲ್ಲ!
Team Udayavani, Dec 1, 2018, 11:30 AM IST
ನಟ ಅಂಬರೀಶ್ ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಸ್ತಬ್ದಗೊಂಡಿವೆ. ಚಿತ್ರರಂಗ, ರಾಜಕೀಯ ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಅಂಬರೀಶ್ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕುತ್ತಿದ್ದಾರೆ. ನಿನ್ನೆಯಷ್ಟೇ ಚಿತ್ರರಂಗ ಪರವಾಗಿ, ಚಿತ್ರರಂಗದ ಅನೇಕ ಗಣ್ಯರ ಸಮ್ಮುಖದಲ್ಲಿ ಅಂಬರೀಶ್ ಅವರ ಶ್ರದ್ಧಾಂಜಲಿ ಸಭೆಯನ್ನೂ ನಡೆಸಲಾಯಿತು.
ಇಷ್ಟೆಲ್ಲಾ ನಡೆದರೂ ಕನ್ನಡದ ನಟಿ ಹರ್ಷಿಕಾ ಪೂಣಚ್ಚಗೆ ಅಂಬರೀಶ್ ನಿಧನ ಹೊಂದಿರುವ ಬಗ್ಗೆ ಇದುವರೆಗೂ ಗೊತ್ತೇ ಇರಲಿಲ್ಲವಂತೆ! ಹೌದು. ಸ್ವತಃ ಹರ್ಷಿಕಾ ಅವರೇ ಟ್ವಿಟರ್‌ನಲ್ಲಿ ಈ ವಿಚಾರವನ್ನ ಹೇಳಿಕೊಂಡಿದ್ದಾರೆ. ಅಂಬಿ ನಿಧನದ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಹರ್ಷಿಕಾ, ಇಂದು ನನಗೆ ಅತ್ಯಂತ ದುಃಖದ ದಿನ. ನಾನು ಚಿತ್ರ ಒಂದರ ಶೂಟಿಂಗ್‌ನಲ್ಲಿದ್ದೆ. ಈ ಹಿನ್ನೆಲೆಯಲ್ಲಿ ನವೆಂರ್ಬ 23 ರಿಂದ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ನೆಚ್ಚಿನ ಅಂಬರೀಶ್ ಅಂಕಲ್ ನಿಧನದ ಸುದ್ದಿ ಈಗ ತಿಳಿಯಿತು.
ನಾನು ಎಂಥ ದುರಾದೃಷ್ಟವಂತೆ, ನಾನು ಅವರನ್ನು ಕೊನೆಯದಾಗಿ ನೋಡುವ ಅವಕಾಶವೂ ನನಗೆ ಸಿಕ್ಕಿಲ್ಲ ಅಂತಾ ಟ್ವೀಟ್ ಮಾಡಿದ್ದಾರೆ. ಇನ್ನು ಹರ್ಷಿಕಾ ಅವರ ಈ ಟ್ವೀಟ್ ಸಹಜವಾಗಿಯೇ ಒಂದಷ್ಟು ಅಂಬರೀಶ್ ಅಭಿಮಾನಿಗಳನ್ನ ಕೆರಳಿಸಿದೆ. ಅಂಬಿ ನಿಧನದ ಸುದ್ಧಿ ಸ್ವೀಡನ್‌ನಲ್ಲಿದ್ದ ನಟ ದರ್ಶನ್ ಅವರಿಗೇ ತಿಳಿದು, ತಕ್ಷಣ ಬಂದಿರುವಾಗ ಹರ್ಷಿಕಾ ಒಂದುವಾರಗಳ ಕಾಲ ನೆಟ್‌ವರ್ಕ್ ಸಿಗದಿರುವ ಅದ್ಯಾವ ಜಾಗದಲ್ಲಿದ್ದರು? ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.