![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 16, 2021, 2:45 PM IST
‘ನೂರು ಜನ್ಮಕೂ ನೂರಾರು ಜನ್ಮಕೂ….’ ಇದು ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನಿಸುವ ಸುಮಧುರ ಗೀತೆ. ಈ ಹಾಡು ಕಿವಿಗೆ ಬಿದ್ದಾಗಲೆಲ್ಲ ನೆನಪಾಗುವುದು ಎಂದೂ ಮರೆಯಲಾಗದಂತಹ ‘ಅಮೆರಿಕ ಅಮೆರಿಕ’ ಸಿನಿಮಾ. ಅಂದು ಇಂದು ಎಂದೆಂದೂ ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತಹ ಈ ಅದ್ಭುತ ಸಿನಿಮಾ ತೆರೆ ಕಂಡು ಇಂದಿಗೆ 25 ವರ್ಷಗಳು ತುಂಬಿವೆ.
ಹೌದು, ಸ್ಯಾಂಡಲ್ ವುಡ್ ನಲ್ಲಿ 90 ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದ ಅಮೆರಿಕಾ ಅಮೆರಿಕಾ ಚಿತ್ರಕ್ಕೆ ಇಂದಿಗೆ 25 ವಸಂತಗಳ ಸಂಭ್ರಮ. ಈ ವಿಶೇಷ ದಿನವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಾಯಕ ನಟ ರಮೇಶ್ ಅರವಿಂದ್ ಸ್ಮರಿಸಿಕೊಂಡಿದ್ದಾರೆ.
ಅಮೆರಿಕಾ ಅಮೆರಿಕಾ ಸಿನಿಮಾದ ಹಾಡುಗಳು ಇಂದಿಗೂ ಹಿಟ್. ರಾಜೇಶ್ ಕೃಷ್ಣ ಧ್ವನಿಯಲ್ಲಿ ನೂರು ಜನ್ಮಕೂ ಹಾಡು ಇಂದಿನ ಜನರೇಷನ್ ನವರಿಗೂ ಫೇವರಿಟ್ ಹಾಡು. ರಮೇಶ್ ಅರವಿಂದ್-ಹೇಮಾ ಪಂಚಮುಖಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸಿನಿಮಾದ ಹೆಚ್ಚಿನ ಭಾಗ ಅಮೆರಿಕಾದಲ್ಲೇ ಚಿತ್ರೀಕರಣವಾಗಿತ್ತು. ಪಕ್ಕಾ ನಾಗತಿಹಳ್ಳಿ ಚಂದ್ರಶೇಖರ್ ಅಭಿರುಚಿಯ ಸಿನಿಮಾ ಇದಾಗಿತ್ತು.
ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾ ಚಿತ್ರೀಕರಣದ ಮೊದಲ ದಿನದ ಫೋಟೋ ಹಾಕಿಕೊಂಡರೆ, ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ಈ ಸಿನಿಮಾ ಮಾಡಿದ ಹೆಗ್ಗಳಿಕೆಗಳ ವಿಡಿಯೋವೊಂದನ್ನು ಹಾಕಿ ಇದೊಂದು ಸುಂದರ ನೆನಪು ಎಂದು ಬರೆದುಕೊಂಡಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.