ಬಡವ ರಾಸ್ಕಲ್ ಸಕ್ಸಸ್ ಖುಷಿಯಲ್ಲಿ ಅಮೃತಾ
Team Udayavani, Jan 12, 2022, 9:53 AM IST
“ಸಿನಿಮಾ ಇಂಡಸ್ಟ್ರಿಗೆ ಬಂದವರೆಲ್ಲರೂ ಒಂದಾದ್ರೂ ಬಿಗ್ ಸಕ್ಸಸ್ ಸಿಗಬೇಕು ಅಂಥ ಕಾಯ್ತಿರುತ್ತಾರೆ. ಆದ್ರೆ ಇಲ್ಲಿ ಕೆಲವರಿಗೆ ಬೇಗ ಸಕ್ಸಸ್ ಸಿಗುತ್ತೆ. ಇನ್ನು ಕೆಲವರಿಗೆ ಲೇಟ್ ಆಗಿ ಸಕ್ಸಸ್ ಸಿಗುತ್ತೆ. ಆದ್ರೆ ಸಿನಿಮಾ ಸಕ್ಸಸ್ ವಿಷಯದಲ್ಲಿ ನಾನಂತೂ ತುಂಬಾ ಅದೃಷ್ಟವಂತೆ ಎಂದೇ ಹೇಳ್ಬೇಕು. ನಾಲ್ಕೈದು ವರ್ಷದ ಹಿಂದೆ ಸಿನಿಮಾ ಇಂಡಸ್ಟ್ರಿಗೆ ಬಂದಾಗ ಏನು ಆಗ್ಬೇಕು ಅಂಥ ಕನಸು ಕಂಡಿದ್ದೆನೋ, ಅದು ಈಗ ನನಸಾಗಿದೆ. ಒಮ್ಮೆ ಹಿಂದಿರುಗಿ ನೋಡಿದ್ರೆ, ಇಲ್ಲಿಗೆ ಬಂದಿರುವುದಕ್ಕೂ ಖುಷಿಯಿದೆ…’ ಇದು ನಟಿ ಅಮೃತಾ ಅಯ್ಯಂಗಾರ್ ಮಾತು.
ಇತ್ತೀಚೆಗಷ್ಟೇ ಅಮೃತಾ ಅಯ್ಯಂಗಾರ್ ಅಭಿನಯದ “ಬಡವ ರಾಸ್ಕಲ್’ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ತೆರೆಕಂಡ ಎಲ್ಲ ಕೆಂದ್ರಗಳಲ್ಲೂ ಯಶಸ್ವಿ ಪ್ರದರ್ಶನ ಕಂಡಿದ್ದು, ಒಮಿಕ್ರಾನ್ ಆತಂಕ, ಲಾಕ್‌ಡೌನ್ ಭಯದ ನಡುವೆಯೂ “ಬಡವ ರಾಸ್ಕಲ್’ ಬಾಕ್ಸ್ ಆಫೀಸ್‌ನಲ್ಲೂ ಗೆಲುವಿನ ನಗೆ ಬೀರಿದೆ. ಇನ್ನು “ಬಡವ ರಾಸ್ಕಲ್’ ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಎರಡು ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅಮೃತಾಅವರ ಅಭಿನಯಕ್ಕೂ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೇ ಖುಷಿಯಲ್ಲಿ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಅಮೃತಾ ಅಯ್ಯಂಗಾರ್ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. “ಸುಮಾರು ಎರಡೂವರೆ ವರ್ಷದಿಂದ “ಬಡವ ರಾಸ್ಕಲ್’ ಸಿನಿಮಾಕ್ಕಾಗಿ ಇಡೀ ತಂಡ ಸಾಕಷ್ಟು ಪರಿಶ್ರಮವಹಿಸಿ ಕೆಲಸ ಮಾಡಿದೆ. ಕೋವಿಡ್ ಆತಂಕ, ಲಾಕ್‌ಡೌನ್ ಭಯದ ನಡುವೆಯೇ ಸಿನಿಮಾ ಮಾಡಿದ್ದೆವು. ಕೊನೆಗೆ ಇದೇ ಭಯದ ನಡುವೆಯೇ ಸಿನಿಮಾ ರಿಲೀಸ್ ಕೂಡ ಮಾಡಿದ್ದೆವು. ಕೊನೆಗೆ ನಮ್ಮ ನಿರೀಕ್ಷೆಯಂತೆ, ಸಿನಿಮಾ ಆಡಿಯನ್ಸ್‌ಗೆ ಇಷ್ಟವಾಯ್ತು. “ಬಡವ ರಾಸ್ಕಲ್’ ಸಕ್ಸಸ್‌ನಿಂದ ಇಡೀ ಟೀಮ್ ಖುಷಿಯಾಗಿದೆ. ಎಲ್ಲರೂ ಇಂಥದ್ದೊಂದು ಸಕ್ಸಸ್ ನಿರೀಕ್ಷೆಯಲ್ಲಿದ್ದರು. ಕೊನೆಗೂ ನಮ್ಮೆಲ್ಲರ ಕನಸು ನನಸಾಗಿದೆ. ನನ್ನ ಮಟ್ಟಿಗೆ ಹೇಳುವುದಾದ್ರೆ, ಇದೊಂದುಎಮೋಶನಲ್ ಸಕ್ಸಸ್ ಸಿನಿಮಾ’ ಅನ್ನೋದು ಅಮೃತಾ ಮಾತು.
“ಬಡವ ರಾಸ್ಕಲ್’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯ ಬಗ್ಗೆ ಮಾತನಾಡುವ ಅಮೃತಾ, “ನಾನು ಈ ಹಿಂದೆ ಅಭಿನಯಿಸಿದ್ದ “ಲವ್ ಮಾಕ್ಟೇಲ್’ ಮತ್ತು “ಪಾಪ್ ಕಾರ್ನ್ ಮಂಕಿ ಟೈಗರ್’ ಎರಡೂ ಸಿನಿಮಾಗಳೂ ಹಿಟ್ ಆಗಿದ್ದವು. ಆದ್ರೆ, ಈ ಎರಡೂ ಸಿನಿಮಾಗಳಲ್ಲೂ ಹೀರೋ ನನಗೆ ಕೈಕೊಟ್ಟು ಹೋಗುವಂಥ ಪಾತ್ರಗಳೇ ಸಿಕ್ಕಿದ್ದವು. ಆ ಎರಡೂ ಸಿನಿಮಾಗಳಲ್ಲಿ ನನ್ನ ಪಾತ್ರ ನೋಡಿದ ಅನೇಕರು, “ಛೇ… ಪಾಪ.., ನಿಮ್ಮ ಪಾತ್ರಕ್ಕೆ ಸಿನಿಮಾದಲ್ಲಿ ಹೀಗಾಗಬಾರದಿತ್ತು…’ ಅಂತಿದ್ರು.
ಆದ್ರೆ “ಬಡವರಾಸ್ಕಲ್’ ಸಿನಿಮಾದಲ್ಲಿ ಹಾಗಾಗಲಿಲ್ಲ. ಇಲ್ಲಿ ಒಂದೇ ಸಿನಿಮಾದಲ್ಲಿ ಎರಡು ಶೇಡ್‌ನ ಪಾತ್ರ ನನಗೆ ಸಿಕ್ಕಿದೆ.ಫಸ್ಟ್‌ಹಾಫ್ ಒಂದು ಲುಕ್, ಸೆಕೆಂಡ್ ಹಾಫ್ ಇನ್ನೊಂದು ಲುಕ್. ಎರಡೂ ಲುಕ್‌ನಲ್ಲೂಅಭಿನಯಕ್ಕೆ ಸಾಕಷ್ಟು ಅವಕಾಶವಿತ್ತು. ನನಗೂ ಈ ಥರದ ಕ್ಯಾರೆಕ್ಟರ್ ತುಂಬಚಾಲೆಂಜಿಂಗ್ ಆಗಿತ್ತು. ನಾನು ನನ್ನಕೈಲಾದ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದೆ. ಸಿನಿಮಾ ರಿಲೀಸ್ ಆದಮೇಲೆ ನನ್ನ ಪಾತ್ರ ನೋಡಿದಆಡಿಯನ್ಸ್ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ’ ಎಂದು ತಮ್ಮ ಖುಷಿ ಹಂಚಿಕೊಳ್ಳುತ್ತಾರೆ.
ಇನ್ನು ಕಳೆದ ಒಂದು ತಿಂಗಳಿನಿಂದ “ಬಡವ ರಾಸ್ಕಲ್’ ಸಿನಿಮಾದ ಪ್ರಮೋಶನ್ಸ್‌ಗಾಗಿ ಸಂಪೂರ್ಣ ಸಮಯ ತೆಗೆದಿರಿಸಿರುವ ಅಮೃತಾ ಅಯ್ಯಂಗಾರ್, ಚಿತ್ರತಂಡದ ಜೊತೆ ಅರ್ಧದಷ್ಟು ಕರ್ನಾಟಕ ಸುತ್ತಾಡಿ “ಬಡವ ರಾಸ್ಕಲ್’ ಪ್ರಚಾರ ಮಾಡಿ ಬಂದಿದ್ದಾರಂತೆ. ಹೋದ ಕಡೆಗಳಲ್ಲಿ ಜನ ಪ್ರೀತಿಯಿಂದ ಬಂದು ಅಮೃತಾ ಅವರ ಪಾತ್ರದ ಬಗ್ಗೆ ಅಭಿನಯದ ಬಗ್ಗೆ ಮಾತನಾಡುತ್ತಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.