ಸಮನ್ವಿ ಮತ್ತೆ ಮಗಳಾಗಿ ಹುಟ್ಟಿ ಬರಲಿ: ಅಮೃತಾ ಪ್ರಾರ್ಥನೆ
Team Udayavani, Jan 17, 2022, 11:17 AM IST
ಇತ್ತೀಚೆಗಷ್ಟೇ ಕಿರುತೆರೆ ರಿಯಾಲಿಟಿ ಶೋನ ಬಾಲ ಪ್ರತಿಭೆ ಸಮನ್ವಿ ಅಪಘಾತದಲ್ಲಿ ಮೃತರಾಗಿದ್ದರು. ಸಮನ್ವಿ ನಿಧನಕ್ಕೆ ಕಿರುತೆರೆ, ಹಿರಿತೆರೆ ಮಂದಿ, ಪ್ರೇಕ್ಷಕರು ಕೂಡ ಕಂಬನಿ ಮಿಡಿಯುತ್ತಿದ್ದಾರೆ. ಇದರ ನಡುವೆಯೇ ಸಮನ್ವಿ ಅವರ ತಾಯಿ, ನಟಿ ಅಮೃತಾ ನಾಯ್ಡು ಅವರ ಮಾತುಗಳು ಎಂದು ಹೇಳಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಹೋಮ
ಸಮನ್ವಿ ಮತ್ತೆ ಮಗಳಾಗಿ ಹುಟ್ಟಿ ಬರಲಿ’ ಎಂದು ಅಮೃತಾ ಈ ಪೋಸ್ಟ್ ನಲ್ಲಿ ಪ್ರಾರ್ಥಿಸಿದ್ದಾರೆ. “ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಮಗೆಲ್ಲರಿಗೂ ನನ್ನದೊಂದು ಪ್ರಾರ್ಥನೆ. ನಾನು ಈಗ ನಾಲ್ಕು ತಿಂಗಳ ಗರ್ಭಿಣಿ ಮತ್ತು ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಕೆಗಾಗಿ ಈ ತಾಯಿ ಜೀವ ಹಂಬಲಿಸುತ್ತಿದೆ. ದಯವಿಟ್ಟು ನನಗೊಂದು ಸಹಾಯ ಮಾಡಿ, ಆ ಭಗವಂತನಲ್ಲಿ ಪ್ರಾರ್ಥಿಸಿ. ನಿಮ್ಮ ಎಲ್ಲರ ಪ್ರಾರ್ಥನೆಯಿಂದ ನನ್ನ ಮುದ್ದು ಕಂದಮ್ಮನನ್ನು ದೇವರು ಮರಳಿ ಕಳುಹಿಸಿ ಬಿಡಲಿ. ಅವಳನ್ನು ನಾನು ಗರ್ಭದಲ್ಲಿ ಜೋಪಾನ ಮಾಡಿ ಕಾಪಾಡುಕೊಳ್ಳುತ್ತೇನೆ. ದಯಮಾಡಿ ಈ ತಾಯಿ ಕರೆಗೆ ಕೈ ಜೋಡಿಸಿ, ಸಮನ್ವಿ ಬರುವಿಕೆಗಾಗಿ ಸಹಾಯ ಮಾಡಿ ಪ್ರಾರ್ಥಿಸಿ. ಅವಳೇ ಮತ್ತೆ ಮಗಳಾಗಿ ಹುಟ್ಟಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯವಾಗುತ್ತದೆ’ ಎಂದು ಅಮೃತಾ ನಾಯ್ಡು ಹೇಳಿಕೊಂಡಿದ್ದಾರೆ ಎನ್ನಲಾದ ಪೋಸ್ಟ್ ಇನ್ಸಾಗ್ರಾಂನಲ್ಲಿ ಹರಿದಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.