ಗುರುವಿನ ಟೈಟಲ್; ಶಿಷ್ಯನ ಸಿನಿಮಾ; ಈಗ ಅಮೃತವರ್ಷಿಣಿ; ಮುಂದೆ…
Team Udayavani, Jul 31, 2018, 5:16 PM IST
ಕನ್ನಡದ ಜನಪ್ರಿಯ ಮತ್ತು ಯಶಸ್ವಿ ಚಿತ್ರಗಳ ಪೈಕಿ ದಿನೇಶ್ ಬಾಬು ನಿರ್ದೇಶನದ “ಅಮೃತವರ್ಷಿಣಿ’ ಸಹ ಒಂದು. ರಮೇಶ್ ಅರವಿಂದ್, ಸುಹಾಸಿನಿ, ಶರತ್ ಬಾಬು ಮುಂತಾದವರು ಅಭಿನಯಿಸಿರುವ ಈ ಚಿತ್ರವು ದೊಡ್ಡ ಯಶಸ್ಸು ಪಡೆದಿದ್ದಷ್ಟೇ ಅಲ್ಲ, ಅದರ ಹಾಡುಗಳು ಈಗಲೂ ಜನಪ್ರಿಯ. ಈಗ ಅದೇ ಶೀರ್ಷಿಕೆಯನ್ನಿಟ್ಟುಕೊಂಡು, ದಿನೇಶ್ ಬಾಬು ಅವರ ಶಿಷ್ಯ ಶಿವಪ್ರಭು ಹೊಸದೊಂದು ಸಿನಿಮಾ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ ಯೋಗಿ ಅಭಿನಯದ “ಕಾಲಭೈರವ’ ಚಿತ್ರ ನಿರ್ದೇಶಿಸಿದ್ದ ಶಿವಪ್ರಭು, ಈಗ ಹೊಸದೊಂದು ಥಾಟ್‌ನೊಂದಿಗೆ, “ಅಮೃತವರ್ಷಿಣಿ’ ಎಂಬ ಚಿತ್ರವನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ದೇಶಕರಷ್ಟೇ ಅಲ್ಲ, ಕಥೆ, ಚಿತ್ರಕಥೆ ಮತ್ತು ನಿರ್ಮಾಣ ಸಹ ಅವರದ್ದೇ. ಹೆಸರು ಬಿಟ್ಟರೆ, ಮೂಲ ಚಿತ್ರಕ್ಕೂ, ಈ “ಅಮೃತವರ್ಷಿಣಿ’ಗೂ ಯಾವುದೇ ಸಂಬಂಧವಿಲ್ಲ. ಹೆಸರು ಮಾತ್ರ ಅದೇ. ಮಿಕ್ಕಂತೆ ಈ ಎರಡು ವರ್ಷಗಳಲ್ಲಿ ಒಂದು ತಂಡ ಕಟ್ಟಿಕೊಂಡು, ಒಂದು ಹೊಸ ಕಥೆ ಮಾಡಿ, ಚಿತ್ರ ಮಾಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ ಶಿವಪ್ರಭು.
ಅಂದಹಾಗೆ, ಈ ಚಿತ್ರ ಆಗಸ್ಟ್ 19ರಂದು ಪ್ರಾರಂಭವಾಗಲಿದ್ದು, ಮಡಿಕೇರಿಯ ಮನೆಯೊಂದರಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. “ಅಮೃತವರ್ಷಿಣಿ’ ಚಿತ್ರಕ್ಕೆ ಯಶಸ್ ಸೂರ್ಯ ನಾಯಕನಾಗಿ ಆಯ್ಕೆಯಾಗಿದ್ದು, ನಾಯಕಿಯ ಹುಡುಕಾಟದಲ್ಲಿದ್ದಾರೆ ಶಿವಪ್ರಭು. ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಛಾಯಾಗ್ರಾಹಕ, ಇತರೆ ತಂತ್ರಜ್ಞರು ಮತ್ತು ಕಲಾವಿದರ ಹುಡುಕಾಟ ನಡೆಯುತ್ತಲಿದೆ.
ಅಂದಹಾಗೆ, ಸದ್ಯಕ್ಕೆ “ಅಮೃತವರ್ಷಿಣಿ’ ಕೈಗೆತ್ತಿಕೊಂಡಿರುವ ಶಿವಪ್ರಭು, ಅದರ ನಂತರ “ಸುಪ್ರಭಾತ’ ಎಂಬ ಇನ್ನೊಂದು ಚಿತ್ರವನ್ನು ನಿರ್ದೇಶಿಸುತ್ತಾರಂತೆ. ವಿಶೇಷವೆಂದರೆ, “ಸುಪ್ರಭಾತ’ ಸಹ ದಿನೇಶ್ ಬಾಬು ಅವರ ಚಿತ್ರವೇ. ಅದೇ ಹೆಸರಿಟ್ಟು, ಹೊಸ ಕಥೆ ಮಾಡಿ, ಹೊಸ ಚಿತ್ರ ಮಾಡುವುದು ಶಿವಪ್ರಭು ಯೋಚನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.