“ಕೆಜಿಎಫ್’ಗಾಗಿ 25 ಟಿಕೆಟ್ ಬುಕ್ ಮಾಡಿದ ಅಮೂಲ್ಯ
Team Udayavani, Dec 28, 2018, 4:34 PM IST
ರಾಕಿಂಗ್ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ, ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಅಲೆ ಎಬ್ಬಿಸಿರುವ “ಕೆಜಿಎಫ್’ ಚಿತ್ರದ ಹವಾ ಮುಂದುವರೆದಿದ್ದು, ಇಲ್ಲಿಯವರೆಗೂ ನೂರು ಕೋಟಿಗೂ ಆದಾಯ ಗಳಿಸಿದೆ. ಅಲ್ಲದೇ ಚಿತ್ರವನ್ನು ಈಗಾಗಲೇ ನಿರ್ದೇಶಕರು, ನಿರ್ಮಾಪಕರು, ಸ್ಟಾರ್ಸ್ ಸೇರಿದಂತೆ ಚಿತ್ರರಂಗದ ಹಲವರು ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ.
ಇದೀಗ ಸ್ಯಾಂಡಲ್‍ವುಡ್‍ನ ಖ್ಯಾತ ನಟಿಯೊಬ್ಬರು ಒಮ್ಮೆಲೇ 25 ಟಿಕೆಟ್ ಬುಕ್ ಮಾಡಿ ಚಿತ್ರತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೌದು, ನಟಿ ಅಮೂಲ್ಯ 25 ಜನರೊಟ್ಟಿಗೆ “ಕೆಜಿಎಫ್’ ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದು, ಈ ಬಗ್ಗೆ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. “ಕೆಜಿಎಫ್’ ಚಿತ್ರವನ್ನು ಅದ್ಬುತ ಎಂದು ಬಣ್ಣಿಸಿರುವ ಗಜಕೇಸರಿ ಚೆಲುವೆ ಅಮೂಲ್ಯ ತಮ್ಮ ಕುಟುಂಬಸ್ಥರಿಗಾಗಿ 25 ಟಿಕೆಟ್‍ಗಳನ್ನು ಬುಕ್ ಮಾಡಿ ಟಿಕೆಟ್‍ಗಳ ಚಿತ್ರವನ್ನು ಶೇರ್ ಮಾಡಿದ್ದಾರೆ.
1st time ಕನ್ನಡ ಅಭಿಮಾನಿಯಾಗಿ ನನ್ನ ಇಡೀ ಕುಟುಂಬಕ್ಕೆ 25 ticket book ಮಾಡಿ ಕೆಜಿಎಫ್ ಸಿನಿಮಾ ನೋಡಿದೆ … ರಾಕಿ ಬಾಯ್ rocked every single frame …hats off to whole team for taking kannada industry to next level…#kgf has made us proud…waiting for chapter2…@TheNameIsYash @bhuvangowda84 pic.twitter.com/JVKvJv4Jpp
— Amulya (@Amulya_moulya) December 27, 2018
“ರಾಖಿ ಭಾಯ್ ರಾಕಡ್ ಎವೆರಿ ಸಿಂಗಲ್ ಫ್ರೇಮ್, ಪ್ರತಿಯೊಂದು ಸೀನ್‍ನಲ್ಲಿಯೂ ರಾಖಿ ಭಾಯ್ ಮಿಂಚಿದ್ದಾರೆ. ಇಡೀ “ಕೆಜಿಎಫ್’ ಚಿತ್ರತಂಡಕ್ಕೆ ಹ್ಯಾಟ್ಸ್ ಆಫ್. ಕನ್ನಡ ಸಿನಿಮಾವನ್ನು ಬೇರೆ ಲೆವೆಲ್‍ಗೆ ಕೊಂಡೊಯ್ದಿದ್ದಕ್ಕಾಗಿ ಧನ್ಯವಾದ. ನಾವು ಹೆಮ್ಮೆ ಪಡುವಂತೆ “ಕೆಜಿಎಫ್’ ಮಾಡಿದೆ.. ಕೆಜಿಎಫ್ ಚಾಪ್ಟರ್ 2ಗೆ ಕಾಯುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.