ಮತ್ತೆ ಬಾಲಿವುಡ್‌ನತ್ತ ಐಂದ್ರಿತಾ ರೇ
Team Udayavani, Jun 4, 2018, 11:03 AM IST
ಗ್ಲಾಮರ್ ಬೆಡಗಿ ಐಂದ್ರಿತಾ ರೇ ಇದೀಗ ಮತ್ತೆ ಸುದ್ದಿಯಾಗಿದ್ದಾರೆ! ಹೌದು, “ಚೌಕ’ ಮತ್ತು “ಮೇಲುಕೋಟೆ ಮಂಜ’ ಚಿತ್ರದ ನಂತರ ಐಂದ್ರಿತಾ ರೇ ಕನ್ನಡದಲ್ಲಿ ಎಲ್ಲೂ ಸುದ್ದಿಯಾಗಿರಲಿಲ್ಲ. ಈಗ ಬಾಲಿವುಡ್ ಅಂಗಳದಲ್ಲಿ ಮತ್ತೂಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ “ಎ ಫ್ಲಾಟ್’ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದ ಐಂದ್ರಿತಾ ರೇ, ಪುನಃ ಬಾಲಿವುಡ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ.
ಅಂದಹಾಗೆ, ಹಿಂದಿಯಲ್ಲಿ ನಟಿಸುತ್ತಿರುವ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಆದರೆ, ಐಂದ್ರಿತಾ ರೇ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಗುಜರಾತ್‌ನ ಕಚ್‌ನಲ್ಲಿ ಧಗ ಧಗ ಅನ್ನುವ ಬಿಸಿಲಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಐಂದ್ರಿತಾ ರೇ ಬಿಜಿಯಾಗಿದ್ದಾರೆ. ಪಕ್ಕಾ ಗ್ಲಾಮರ್ ಬೆಡಗಿ ಎಂದೇ ಕರೆಸಿಕೊಳ್ಳುತ್ತಿದ್ದ ಐಂದ್ರಿತಾ ರೇ, ಇನ್ನೂ ಹೆಸರಿಡದ ಹಿಂದಿ ಚಿತ್ರದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ.
ಆ ಚಿತ್ರದಲ್ಲಿ ಬೀದಿ ನಾಟಕ ಪ್ರದರ್ಶನ ಮಾಡುವ ರಂಗಭೂಮಿ ತಂಡದ ಸದಸ್ಯೆಯಾಗಿ, ಆ ತಂಡ ಮಾಡುವ ನಾಟಕದಲ್ಲಿ ಸೀತೆ ಪಾತ್ರ ಮಾಡುತ್ತಿದ್ದಾರೆ ಐಂದ್ರಿತಾ ರೇ. ಅಂದಹಾಗೆ, ಐಂದ್ರಿತಾ ರೇ ಹಿಂದಿ ಚಿತ್ರದಲ್ಲಿ ಸೀತೆ ಪಾತ್ರ ನಿರ್ವಹಿಸಿದರೆ, ರಾಮನ ಪಾತ್ರವನ್ನು “ಸ್ಲಂ ಡಾಗ್ ಮಿಲೇನಿಯರ್’ ಖ್ಯಾತಿಯ ಅಂಕುರ್ ನಿರ್ವಹಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಐಂದ್ರಿತಾ ರೇ, ಸೀತೆ ಪಾತ್ರ ಮಾಡುತ್ತಿದ್ದು, ಅದೊಂದು ಗಂಭೀರವಾದ ಪಾತ್ರ ಆಗಿರುವುದರಿಂದ, ಅವರು ಅದಕ್ಕಾಗಿ ಸಾಕಷ್ಟು ತರಬೇತಿಯನ್ನೂ ಪಡೆಯುತ್ತಿದ್ದಾರಂತೆ.
ಕಳೆದ ಎರಡು ತಿಂಗಳಿನಿಂದಲೂ ಐಂದ್ರಿತಾ ರೇ ಗುಜರಾತ್‌ನಲ್ಲೇ ಬೀಡು ಬಿಟ್ಟಿದ್ದು, ಆ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮರಸುತ್ತುವ ಹಾಡುಗಳಲ್ಲಿ ಕುಣಿದು ಕುಪ್ಪಳಿಸಿದ್ದ ಐಂದ್ರಿತಾ, ಹಲವು ಐಟಂ ಸಾಂಗ್‌ಗಳಿಗೂ ಹೆಜ್ಜೆ ಹಾಕಿದ್ದರು. ಈಗ ಹಿಂದಿಯಲ್ಲಿ ಸಿಕ್ಕಿರುವ ಪಾತ್ರ ವಿಭಿನ್ನವಾಗಿದೆ. ಅದರಲ್ಲೂ ಅದು ರಾಮಾಯಣದ ಸೀತೆಯ ಪಾತ್ರ ಆಗಿರುವುದರಿಂದ ಐಂದ್ರಿತಾ ರೇ,
ಪಕ್ಕಾ ಸೀತೆಯ ಗಾಂಭೀರ್ಯತೆಯನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕಾಟನ್ ಸೀರೆ ತೊಟ್ಟು, ಹೆಚ್ಚು ಮೇಕಪ್ ಇಲ್ಲದೆ, ಹಣೆಗೆ ಸಿಂಧೂರ ಇಟ್ಟುಕೊಂಡು, ಪಕ್ಕಾ ಸೀತಮ್ಮಳಾಗಿ ಕಾಣಿಸಿಕೊಳ್ಳಲು ಏನೆಲ್ಲಾ ಬೇಕೋ ಅದೆಲ್ಲವನ್ನೂ ಕರಗತ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿರುವ ಐಂದ್ರಿತಾ, ಸೀತೆ ಪಾತ್ರದಲ್ಲಿ ಹೇಗೆಲ್ಲಾ ನಡೆಯಬೇಕು,
ಡೈಲಾಗ್ ಡೆಲಿವರಿ ಕುರಿತು ಸಾಕಷ್ಟು ತರಬೇತಿ ಪಡೆದುಕೊಳ್ಳುತ್ತಿರುವುದಾಗಿ ಹೇಳುತ್ತಾರೆ. ಒಟ್ಟಾರೆ, ಬಾಲಿವುಡ್‌ನಲ್ಲಿ ಸಿಕ್ಕಿರುವ ಅಪರೂಪದ ಅವಕಾಶ ಇದಾಗಿರುವುದರಿಂದ ಐಂದ್ರಿತಾ, ಚಾಲೆಂಜ್‌ನಲ್ಲೇ ಪಾತ್ರ ಮಾಡುತ್ತಿದ್ದಾರಂತೆ. ಅಂದಹಾಗೆ, ಈ ಚಿತ್ರಕ್ಕೆ ಹಾರ್ದಿಕ್ ಗುಜ್ಜರ್ ನಿರ್ದೇಶಕರು. ಚಿತ್ರದಲ್ಲಿ ಅಭಿಮನ್ಯು ಸಿಂಗ್, ರಾಜೇಶ್ ಶರ್ಮಾ, ರಾಜೇಂದ್ರ ಗುಪ್ತ ಸೇರಿದಂತೆ ಹಲವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.