Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Team Udayavani, Nov 22, 2024, 11:43 AM IST
ಅನೀಶ್ ನಾಯಕರಾಗಿರುವ “ಆರಾಮ್ ಅರವಿಂದ ಸ್ವಾಮಿ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಒಂದು ಗೆಲುವು ಸಿಗಬಹುದು ಎಂಬ ನಿರೀಕ್ಷೆ ಅನೀಶ್ ಅವರದು.
ಈ ಕುರಿತು ಮಾತನಾಡುವ ಅನೀಶ್, ಕಷ್ಟಪಡುತ್ತಿದ್ದರೆ ಒಂದಲ್ಲ ಒಂದು ದಿನ ಫಲ ಸಿಗುತ್ತದೆ ಎನ್ನುವ ನಂಬಿಕೆ ನನ್ನದು. ಇದು ನನ್ನ 12ನೇ ಸಿನಿಮಾ. ಚಿತ್ರರಂಗಕ್ಕೆ ಬಂದು ಬಂದು ಅನೀಶ್ 14 ವರ್ಷವಾಯ್ತು ಎನ್ನುತ್ತಾರೆ. ನನಗೆ ಯಾವುದು ನೆನಪಿಲ್ಲ. 12ನೇ ಶುಕ್ರವಾರ ಎದುರಿಸ್ತಿದ್ದೇನೆ. ಅನೀಶ್ ನಟನೆ, ಡ್ಯಾನ್ಸ್, ಆ್ಯಕ್ಷನ್ ಎಲ್ಲಾ ಚೆನ್ನಾಗಿ ಮಾಡಿದ್ದಾನೆ ಎನ್ನುತ್ತಾರೆ. ಹಾಸನ, ಬೆಂಗಳೂರು, ಮಂಗಳೂರಲ್ಲಿ ಎಷ್ಟು ಕಲೆಕ್ಷನ್ ಆಯ್ತು ಅನ್ನೋದನ್ನು ನೋಡಬೇಕು. ಈ ಪಯಣದಲ್ಲಿ ಏನು ಕಲಿತೆ ಎಂದರೆ, ಒಳ್ಳೆ ನಟ ಆಗಿರಬಹುದು, ಒಳ್ಳೆ ನಟ ಶುಕ್ರವಾರದ ಬಾಕ್ಸಾಫೀಸ್ನಲ್ಲಿ ಸೋತರೆ ಕೆಟ್ಟ ಆತ ನಟ. ಒಂದೊಳ್ಳೆ ತಂಡ ನನ್ನ ಜೊತೆ ಇದೆ. ಈ ಬಾರಿ ಜನ ಕೈ ಹಿಡಿಯುವ ನಿರೀಕ್ಷೆ ಇದೆ’ ಎಂದರು.
ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾತನಾಡಿ, “ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಪ್ರೀಮಿಯರ್ ಶೋನಲ್ಲಿ ಅನೀಶ್ ಹಾಗೂ ಪ್ರಸನ್ನ ನನಗೆ ಪರಿಚಯವಾಗಿದ್ದು. ಆರಾಮ್ ಅರವಿಂದ್ ಸ್ವಾಮಿ ಸ್ಕ್ರೀಪ್ಟ್ ಮಾಡಿಕೊಂಡು ಅಲೆದಾಡುವಾಗ ಅನೀಶ್ ಅವರಿಗೆ ಕಥೆ ಮಾಡಬೇಕು ಅಂತಾ ಕಾಲ್ ಮಾಡಿ ಪ್ರಸನ್ನ ಅವರ ತಂಡದವರು ಕರೆದರು. ಆಗ ಅನೀಶ್ಗೆ ಎರಡು ಬ್ಯಾಕ್ ಟು ಬ್ಯಾಕ್ ಮಾಸ್ ಕಥೆ ಹೇಳಿದೆ. ಅವರಿಗೆ ಇಷ್ಟವಾಗಲಿಲ್ಲ. ಆ ಬಳಿಕ ನನಗೆ ಮಾಡಿಕೊಂಡು ಆರಾಮ್ ಅರವಿಂದ್ ಸ್ವಾಮಿ ಸ್ಕ್ರೀಪ್ಟ್ ಹೇಳಿದೆ. ಆಗ ಅವರು ಖುಷಿಯಾದರು. ಕಮ್ಮಿ ಬಜೆಟ್ ನಲ್ಲಿ ಸಿನಿಮಾ ಮಾಡಿದೆವು. ನಾನು ಯಾವುದನ್ನು ಪ್ಲ್ಯಾನ್ ಮಾಡಿಲ್ಲ. ಸಿನಿಮಾಗೆ ಏನೂ ಬೇಕು ಅದು ತೆಗೆದುಕೊಂಡಿದೆ. ನಮ್ಮ ಅಷ್ಟು ಜನರ ಶ್ರಮ, ಶ್ರದ್ಧೆ ತೆರೆಮೇಲೆ ಕಾಣುತ್ತದೆ’ ಎಂದರು.
ಆರಾಮ್ ಅರವಿಂದ್ ಸ್ವಾಮಿ ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೈವಿಬಿ ಶಿವಸಾಗರ್ ಛಾಯಾಗ್ರಹಣವಿದೆ. “ಅಕಿರಾ’ ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ “ಗುಳ್ಟು’ ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.