Anish Tejeshwar; ‘ಮಾಯಾನಗರಿ’ಯಲ್ಲಿ ಲಚ್ಚಿ ಸದ್ದು


Team Udayavani, Nov 23, 2023, 4:07 PM IST

Anish tejeshwar

ಅನೀಶ್‌ ತೇಜೇಶ್ವರ್‌, ತೇಜು ಹಾಗೂ ಶ್ರಾವ್ಯರಾವ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ “ಮಾಯಾನಗರಿ’ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಲಕ್ಷಾಂತರ ಫಾಲೋವರ್ಸ್‌ ಹೊಂದಿರುವ 5 ವರ್ಷದ ಮಗು ನಿಶಿತಾ ಕೈಲಿ ಲಚ್ಚಿ ಹಾಡನ್ನು ಬಿಡುಗಡೆಗೊಳಿಸಲಾಯಿತು

ಈ ಚಿತ್ರಕ್ಕೆ ಶಂಕರ್‌ ಆರಾಧ್ಯ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರರಂಗದಲ್ಲಿ ನಡೆಯುವ ಒಂದಷ್ಟು ಸತ್ಯ ಘಟನೆಗಳನ್ನಿಟ್ಟುಕೊಂಡು ಶಂಕರ್‌ ಆರಾಧ್ಯ ಈ ಚಿತ್ರವನ್ನು ನಿರೂಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಶಂಕರ್‌, “ಈ ಹಾಡು ನಮ್ಮ ಚಿತ್ರಕ್ಕೆ ಟ್ರಂಪ್‌ ಕಾರ್ಡ್‌ ಆಗುತ್ತೆ ಅಂತ ಕಲರ್‌ ಫ‌ುಲ್‌ ಆಗಿಯೇ ಶೂಟ್‌ ಮಾಡಿದ್ದೇವೆ. ಕಂಠೀರವ ಸ್ಟುಡಿಯೋ ಹಾಗೂ ಇನ್ನೋವೇಟಿವ್‌ ಫಿಲಂ ಸಿಟಿಯಲ್ಲಿ 6 ದಿನ ಇದನ್ನು ಚಿತ್ರೀಕರಿಸಿದ್ದೇವೆ. ಹಾರರ್‌, ಆ್ಯಕ್ಷನ್‌, ಫ್ಯಾಮಿಲಿ ಸೆಂಟಿಮೆಂಟ್‌ ಕಥೆ ಇದಾಗಿದ್ದು, ಚಿತ್ರದಲ್ಲಿ ನಾಯಕ ಶಂಕರ್‌ ನಾಗ್‌ ಅಭಿಮಾನಿ, ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಬೇಕೆಂದು ಹೋರಾಟ ನಡೆಸುವ ಆತನಿಗೆ ಕೊನೆಗೂ ಒಂದು ಅವಕಾಶ ಸಿಕ್ಕಿ, ಮಾಯಾನಗರಿ ಎಂಬ ಸ್ಥಳಕ್ಕೆ ಹೋಗಬೆಕಾಗುತ್ತದೆ. ಆ ಊರಿಗೆ ಬರುವ ಆತ ಅಲ್ಲಿ ತಾನೇ ಪಾತ್ರವಾಗಬೇಕಾಗುತ್ತದೆ. ಹೀಗೆ ಕುತೂಹಲಕಾರಿಯಾಗಿ ಸಾಗುವ ಈ ಚಿತ್ರಕ್ಕೆ ಬೆಂಗಳೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಭದ್ರಾವತಿ ಸುತ್ತಮುತ್ತ ಸುಮಾರು 65 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ವಿಶೇಷವಾಗಿ ಹಿರಿಯ ನಟ ದ್ವಾರಕೀಶ್‌ ಅವರು ರಿಯಲ್‌ ಲೈಫ್ ಪಾತ್ರವನ್ನೇ ಮಾಡಿದ್ದಾರೆ’ ಎಂದು ಹೇಳಿದರು.

ನಾಯಕ ಅನೀಶ್‌ ಮಾತನಾಡಿ, “ನಾನು ತುಂಬಾ ಇಷ್ಟಪಟ್ಟು ಮಾಡಿದಂಥ ಪಾತ್ರವಿದು. ದ್ವಾರಕೀಶ್‌ರಂಥ ನಟರ ಜೊತೆ ನಟಿಸಿದ್ದು, ನನ್ನ ಅದೃಷ್ಟ. ಡೈರೆಕ್ಟರ್‌ ಆಗಬೇಕೆಂದು ಕನಸು ಕಾಣೋ ಹುಡುಗನ ಪಾತ್ರ ಮಾಡಿದ್ದೇನೆ’ ಎಂದರು.

ಚಿತ್ರದಲ್ಲಿ ನಾನು ಮಲ್ಲಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತುಂಬಾ ಶೇಡ್ಸ್‌ ಇರುವ ಪಾತ್ರ ಎಂದರು ನಾಯಕಿ ಶ್ರಾವ್ಯಾ. ಸ್ಯಾಂಡಲ್‌ ವುಡ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿ, ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶ್ವೇತಾ ಶಂಕರ್‌ ಸಹ ನಿರ್ಮಾಣವಿದೆ.

ಶರತ್‌ ಲೋಹಿತಾಶ್ವ, ಅವಿನಾಶ್‌, ಸುಚೇಂದ್ರ ಪ್ರಸಾದ್‌, ಎಡಕಲ್ಲು ಗುಡ್ಡದ ಚಂದ್ರಶೇಖರ್‌, ಚಿಕ್ಕಣ್ಣ, ಗಿರಿ ದಿನೇಶ್‌ ಹಾಗೂ ನಿಹಾರಿಕಾ ಚಿತ್ರದ ತಾರಾಬಳಗದಲ್ಲಿದ್ದಾರೆ

ಟಾಪ್ ನ್ಯೂಸ್

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

1-atul-subhash

Atul Subhash ಆತ್ಮಹ*ತ್ಯೆ ಪ್ರಕರಣ: ಪತ್ನಿ, ಕುಟುಂಬದವರಿಗೆ ಜಾಮೀನು ಮಂಜೂರು

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

12

ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.