ಅನಿತಾ ಈಗ ಗ್ಲಾಮರಸ್ ವಿಲನ್!
ಕೈಯಲ್ಲಿವೆ ನಾಲ್ಕು ಸಿನಿಮಾ
Team Udayavani, Jul 31, 2019, 3:02 AM IST
ನಟಿ ಅನಿತಾಭಟ್, ಈಗ ಒಂದಲ್ಲ, ಎರಡಲ್ಲ ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅನಿತಾಭಟ್ ಚಿತ್ರವೊಂದರಲ್ಲಿ ಮೊದಲ ಬಾರಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಅಷ್ಟಕ್ಕೂ ಅನಿತಾ ಭಟ್ ಖಳನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರದ ಹೆಸರು “ಕನ್ನೇರಿ’. ಈ ಚಿತ್ರದಲ್ಲಿ ಅವರು ವಿಲನ್. ಇಡೀ ಚಿತ್ರದ ಕಥೆ ಅವರ ಮೇಲೆಯೇ ಸುತ್ತಲಿದೆಯಂತೆ. ಈ ಚಿತ್ರವನ್ನು ನೀನಾಸಂ ಮಂಜು ನಿರ್ದೇಶನ ಮಾಡುತ್ತಿದ್ದಾರೆ.
ಅದೊಂದು ಪಕ್ಕಾ ದೇಸಿ ಕಥೆಯಾಗಿದ್ದು, ಅದರಲ್ಲಿ ಅನಿತಾ ಭಟ್ ಪ್ರಮುಖ ವಿಲನ್. ಆದರೆ, ಯಾಕೆ ಅವರು ವಿಲನ್ ಆಗಿದ್ದಾರೆ, ವಿಲನ್ ಆಗಿ ಏನೆಲ್ಲಾ ಮಾಡುತ್ತಾರೆ ಅನ್ನುವುದಕ್ಕೆ “ಕನ್ನೇರಿ’ ಚಿತ್ರ ನೋಡಬೇಕು ಎಂಬುದು ಅನಿತಾಭಟ್ ಮಾತು. ಅಂದಹಾಗೆ, ಅನಿತಾಭಟ್, “ಸದ್ಗುಣ ಸಂಪನ್ನ ಮಾಧವ’ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಪ್ರೀತಮ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅನಿತಾಭಟ್, ಖಳನಟ ರವಿಶಂಕರ್ ಹಾಗು ಸುಮನ್ ಅವರ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಲ್ಲಿ ಕಾಟನ್ ಸ್ಮಿತಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, “ಬೆಂಗಳೂರು 69′ ಎಂಬ ಚಿತ್ರದಲ್ಲೂ ಅನಿತಾಭಟ್ ನಟಿಸುತ್ತಿದ್ದು, ಈ ಚಿತ್ರದಲ್ಲಿ ಪವನ್ ಶೆಟ್ಟಿ, ಶಫಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕ್ರಾಂತಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರೊಂದಿಗೆ “ಕಲಿವೀರ’ ಎಂಬ ಚಿತ್ರದಲ್ಲೂ ಅನಿತಾ ಭಟ್ ಅಭಿನಯಿಸುತ್ತಿದ್ದಾರೆ.
ಈ ಚಿತ್ರವನ್ನು ಅವಿರಾಮ್ ಎಂಬುವವರು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ಎಲ್ಲಾ ಚಿತ್ರಗಳು ಚಿತ್ರೀಕರಣ ಮುಗಿದಿದ್ದು, ಸಣ್ಣಪುಟ್ಟ ಕೆಲಸ ಮುಗಿಸಿಕೊಂಡರೆ, ಪ್ರೇಕ್ಷಕರ ಎದುರು ಬರಲು ಸಿನಿಮಾಗಳು ರೆಡಿ. ಇದುವರೆಗೆ ಅನಿತಾ ಭಟ್ ಅವರ ಗ್ಲಾಮರ್ ಅನ್ನು ಕಣ್ತುಂಬಿಕೊಂಡಿದ್ದ ಪ್ರೇಕ್ಷಕರು “ಕನ್ನೇರಿ ಚಿತ್ರದ ಮೂಲಕ ಪಕ್ಕಾ ವಿಲನ್ ಆರ್ಭಟವನ್ನು ನೋಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.