ಪರ್ಫೆಕ್ಟ್ ಹುಡುಗನ ಕರೆಕ್ಟ್ ಮಾತು
Team Udayavani, Dec 5, 2017, 11:35 AM IST
“ಡವ್’ ಮೂಲಕ ಭರವಸೆ ನಟ ಎನಿಸಿಕೊಂಡ ಅನೂಪ್ ಸಾ.ರಾ.ಗೋವಿಂದು ಅಭಿನಯದ “ಮಿ.ಪರ್ಫೆಕ್ಟ್’ ಈಗ ರಿಲೀಸ್‌ಗೆ ರೆಡಿಯಾಗಿದೆ. “ಡವ್’ ಬಳಿಕ ಒಂದಷ್ಟು ಸಿನಿಮಾಗಳು ಹುಡುಕಿ ಬಂದಿದ್ದೇನೋ ನಿಜ. ಆದರೆ, ಅನೂಪ್ ಮಾತ್ರ ಎಲ್ಲವನ್ನೂ ಒಪ್ಪಿಕೊಳ್ಳಲಿಲ್ಲ. ಕಾರಣ, ಒಳ್ಳೆಯ ಕಥೆ ಮತ್ತು ಪಾತ್ರಕ್ಕಾಗಿ ಎದುರು ನೋಡುತ್ತಿದ್ದರು.
ಅಂತಹ ಕಥೆ, ಪಾತ್ರ ಸಿಕ್ಕ ಖುಷಿಯಲ್ಲೇ “ಮಿ.ಪರ್ಫೆಕ್ಟ್’ ಚಿತ್ರವನ್ನು ಅನೂಪ್ ಸಾ.ರಾ.ಗೋವಿಂದು ಒಪ್ಪಿಕೊಂಡರು. ಆ ಚಿತ್ರದಲ್ಲಿ ಪಾತ್ರ ಹೇಗಿದೆ. ಕಥೆ ಎಂಥದ್ದು, ಗ್ಯಾಪ್‌ನಲ್ಲಿ ಅನೂಪ್ ಏನೆಲ್ಲಾ ಮಾಡುತ್ತಿದ್ದರು. ಅವರ ಕನಸಿನ ಪಾತ್ರವೇನು ಇತ್ಯಾದಿ ಕುರಿತು “ಉದಯವಾಣಿ’ ಜತೆ ಅನೂಪ್ ಮಾತಾಡಿದ್ದಾರೆ.
“ಡವ್’ ಬಳಿಕ ಅನೂಪ್‌ಗೆ ಗ್ಯಾಪ್ ಆಯ್ತು ಅಂತ ಎಲ್ಲರೂ ತಿಳಿದಿದ್ದರು. ಆದರೆ, ನನ್ನ ಪ್ರಕಾರ ಗ್ಯಾಪ್ ಆಗಿರಲಿಲ್ಲ. ಸಾಕಷ್ಟು ಕಥೆಗಳು ಹುಡುಕಿ ಬಂದಿದ್ದು ನಿಜ. ಬಂದ ಅಷ್ಟೂ ಕಥೆಗಳೂ ನನಗೆ ಇಷ್ಟವಾಗಲಿಲ್ಲ. ಹಾಗಾಗಿ ನಾನು ಯಾವ ಚಿತ್ರ ಮಾಡಲಿಲ್ಲ. ಒಂದು ವೇಳೆ, ಬಂದ ಕೆಲ ಕಥೆ ಒಪ್ಪಿದ್ದರೆ, ನನ್ನ ಖಾತೆಯಲ್ಲಿ ಹತ್ತಾರು ಚಿತ್ರಗಳಾಗುತ್ತಿದ್ದವು. ಆದರೆ, ನಾನು ಮಾತ್ರ ಒಳ್ಳೆಯ ಕಥೆ ಎದುರು ನೋಡುತ್ತಿದ್ದೆ. ಎಂದಿಗೂ ಸಿನಿಮಾ ಸಂಖ್ಯೆ ಹೆಚ್ಚಿಸಿಕೊಳ್ಳಬೇಕೆಂಬ ಆಸೆ ಇಲ್ಲ.
ವರ್ಷಕ್ಕೊಂದೇ ಚಿತ್ರ ಮಾಡಿದರೂ, ಅದು ಜನರ ಮನಸ್ಸಲ್ಲಿ ಉಳಿಯುವಂತಿರಬೇಕು ಎಂಬ ಲೆಕ್ಕಾಚಾರ ನನ್ನದು. ಆ ನಿಟ್ಟಿನಲ್ಲಿ ಅವರು ಒಳ್ಳೆಯ ಕಥೆ, ಪಾತ್ರ ಆಯ್ಕೆಯತ್ತ ಗಮನಹರಿಸಿದ್ದೇನೆ. “ಡವ್’ ನಂತರ ಪಕ್ಕಾ ಪ್ಲಾನ್ ಮಾಡಿಕೊಂಡು, ಹೊಸ ಬಗೆಯ ಕಥೆ ಕೇಳಿ, ಅದರಲ್ಲಿ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವ ಮೂಡ್‌ನಲ್ಲಿದ್ದೇನೆ. ಹಾಗಾಗಿಯೇ ಅನೂಪ್‌ಗೆ ಗ್ಯಾಪ್ ಆಯ್ತು ಎಂಬ ಮಾತಿದೆ.
ಈಗ ನಾನು ಅಭಿನಯಿಸಿರುವ “ಮಿ.ಪರ್ಫೆಕ್ಟ್’ ಡಿ. 8 ರಂದು ಬಿಡುಗಡೆಗೆ ಸಿದ್ಧವಾಗಿದೆ. ಶೂಟಿಂಗ್ ಬೇಗ ಮುಗಿದಿದ್ದರೂ, ಬಿಡುಗಡೆಗೆ ಲೇಟ್ ಆಗಿದೆ. ಆದರೂ ಲೇಟೆಸ್ಟ್ ಆಗಿ ಬರುತ್ತಿದೆ. “ಮಿ.ಪರ್ಫೆಕ್ಟ್’ ಬಗ್ಗೆ ಹೇಳುವುದಾದರೆ, ಸದ್ದಿಲ್ಲದೆ ಮುಗಿದ ಚಿತ್ರವಿದು. ಇಲ್ಲಿ ಒಳ್ಳೆಯ ಕಥೆ ಇದೆ. ಪಾತ್ರವೂ ವಿಭಿನ್ನ. ಚಿತ್ರದ ಶೀರ್ಷಿಕೆ ಕೇಳಿದಾಗ, ಬಹುತೇಕರಿಗೆ ತೆಲುಗು ನಟ ಪ್ರಭಾಸ್ ಅಭಿನಯದ “ಮಿ. ಪರ್ಫೆಕ್ಟ್’ ಸಿನಿಮಾದ ರಿಮೇಕ್ ಇರಬಹುದಾ ಎಂಬ ಪ್ರಶ್ನೆ ಬರುತ್ತದೆ.
ಆದರೆ, ಇದು ಪಕ್ಕಾ ಸ್ವಮೇಕ್ ಚಿತ್ರ. ಹೈದರಾಬಾದ್ ತಂಡ ಸೇರಿ ಮಾಡುತ್ತಿರುವ ಕನ್ನಡದ ಮೊದಲ ಸಿನಿಮಾ ಇದು. ರಮೇಶ್ ಬಾಬು ಎಂಬುವವರು “ಮಿ. ಪರ್ಫೆಕ್ಟ್’ ಚಿತ್ರದ ನಿರ್ದೇಶಕರು. ಸುಬ್ಟಾರಾಯಡು ಈ ಚಿತ್ರ ನಿರ್ಮಿಸಿದ್ದಾರೆ. ಇನ್ನು, ಚಿತ್ರಕ್ಕೆ ಪ್ರಭಾಕರ್‌ರೆಡ್ಡಿ ಕ್ಯಾಮೆರಾ ಹಿಡಿದಿದ್ದಾರೆ. ನಾನಿಲ್ಲಿ ಒಬ್ಬ ಜವಾಬ್ದಾರಿಯತ ತಂದೆಯ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಿರಿಯ ಕಲಾವಿದ ರಮೇಶ್‌ಭಟ್ ನನ್ನ ತಂದೆಯಾಗಿ ನಟಿಸಿದ್ದಾರೆ.
ನನಗೆ ಶಾಲಿನಿ ನಾಯಕಿ. ಈ ಪಾತ್ರ ಆಯ್ಕೆ ಮಾಡಿಕೊಳ್ಳಲು ಕಾರಣ, ಪಾತ್ರದಲ್ಲಿ ವಿಭಿನ್ನತೆ ಜತೆಗೆ ಎನರ್ಜಿ ಇತ್ತು. ಸಮಾಜದಲ್ಲಿ ನಡೆಯುವ ಕೆಲ ಅವ್ಯವಸ್ಥೆಗಳನ್ನು ಇಲ್ಲಿ ಹೇಳಲಾಗಿದೆ. ಅಂತಹ ವ್ಯವಸ್ಥೆ ವಿರುದ್ಧ ಹೋರಾಡುವಂತಹ ಪಾತ್ರ ನನ್ನದು. ಹಲವು ಅಕ್ರಮ ಬಯಲಿಗೆಳೆಯುವ ಪಾತ್ರ ಇಲ್ಲಿದೆ. ಆದರೆ, ಅದು ಎಂತಹ ಅಕ್ರಮ ಅನ್ನೋದು ಸಿನಿಮಾದಲ್ಲಿ ಕಾಣಬೇಕು. ಕಥೆಗೆ ಪೂರಕವಾಗಿ ನಾಲ್ಕು ಹಾಡುಗಳಿವೆ.
ಎಲ್ಲಾ ಹಾಡುಗಳು ಜನರ ಮನಸ್ಸನ್ನು ಗೆದ್ದಿವೆ. ನನ್ನ ಪ್ರಕಾರ, ಇದುವರೆಗೆ ನಾನು ಇಂತಹ ಪಾತ್ರ ಮಾಡಿಲ್ಲ. ಮನರಂಜನೆ ಮೂಲಕ ಸಮಾಜಕ್ಕೊಂದು ಸಂದೇಶ ಸಾರುವ ಚಿತ್ರ ಇದಾಗಲಿದೆ. “ಮಿ.ಪರ್ಫೆಕ್ಟ್’ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ. ಇಲ್ಲಿ ಯೂತ್ಸ್ಗೆ ಬೇಕಾದಂತಹ ಎಲ್ಲಾ ಅಂಶಗಳೂ ಇವೆ ಎನ್ನುತ್ತಾರೆ ಅನೂಪ್ ಸಾ.ರಾ.ಗೋವಿಂದು.
ಸದ್ಯಕ್ಕೆ ಮಠ ಗುರುಪ್ರಸಾದ್ ಅವರ “ಅದೇಮಾ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅದಾದ ಬಳಿಕ ಬೇರೆ ಕಥೆ ಕೇಳುತ್ತೇನೆ. ನನಗೆ ಸಿನಿಮಾ ಮಾಡುವ ಅವಸರವಿಲ್ಲ. ಒಳ್ಳೆಯ ಕಥೆ ಸಿಕ್ಕರಷ್ಟೇ ಮಾಡ್ತೀನಿ. ನಿಧಾನವಾದರೂ ಸರಿ, ಒಂದಾದ ಮೇಲೊಂದು ಸಿನಿಮಾ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಹೊಸ ಬಗೆಯ ಕಥೆ, ಪಾತ್ರ ಎದುರು ನೋಡುತ್ತಿದ್ದೇನೆ. ಒಳ್ಳೆಯ ಕಥೆ ಇದ್ದರೆ ಸಾಕು.
ಅದರಲ್ಲಿ ಯಾವುದೇ ಹೀರೋಯಿಸಂ ಅಂತೇನೂ ಬೇಕಿಲ್ಲ. ಕಥೆ ಹೀರೋ ಆಗಿದ್ದರಷ್ಟೇ ಸಾಕು. ತಮಗಾಗಿಯೇ ಕಥೆ ಹೆಣೆಯುವ ಅಗತ್ಯವೂ ಇಲ್ಲ. ಕಥೆ ಚೆನ್ನಾಗಿದ್ದರೆ, ಅದು ಹೊಂದಿಕೆಯಾಗುವಂತಿದ್ದರೆ, ಕಥೆಯನ್ನೇ ಹೀರೋ ಅಂದುಕೊಂಡು ಕೆಲಸ ಮಾಡುತ್ತೇನೆ ಎನ್ನುವ ಅನೂಪ್, “ಮಿ.ಪರ್ಫೆಕ್ಟ್’ ಬಳಿಕ ಹೊಸ ಸುದ್ದಿ ಹೊರಬಿಡುವ ಯೋಚನೆಯಲ್ಲಿದ್ದಾರೆ. ಇನ್ನು, ಫೆಬ್ರವರಿಯಲ್ಲಿ ಅವರ ಮದುವೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.