ಷಣ್ಮುಖ ಗೋವಿಂದ ರಾಜ್- ಬೆಳ್ಳಿತೆರೆಗೆ ರಾಜ್ ಕುಟುಂಬದ ಮತ್ತೊಂದು ಕುಡಿ
Team Udayavani, Jan 15, 2023, 5:52 PM IST
ವರನಟ ಡಾ. ರಾಜಕುಮಾರ್ ನಂತರ ಎರಡನೇ ತಲೆಮಾರಿನಲ್ಲಿ ಅವರ ಮೂವರು ಪುತ್ರರು, ಅದಾದ ನಂತರ ಮೂರನೇ ತಲೆಮಾರಿನಲ್ಲಿ ಅವರ ಮೂವರು ಮೊಮ್ಮಕ್ಕಳು ನಟರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿರುವುದು ಗೊತ್ತೇ ಇದೆ. ಈಗ ಡಾ. ರಾಜ್ ಕುಟುಂಬದ ಮೂರನೇ ತಲೆಮಾರಿನ ಮತ್ತೂಂದು ಕುಡಿಯನ್ನು ಬೆಳ್ಳಿತೆರೆಗೆ ಪರಿಚಯಿಸಲು ಸದ್ದಿಲ್ಲದೆ ತಯಾರಿ ನಡೆದಿದೆ. ಅಂದಹಾಗೆ, ಈ ಬಾರಿ ರಾಜ್ ಕುಟುಂಬದಿಂದ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವುದು ಷಣ್ಮುಖ ಗೋವಿಂದ ರಾಜ್.
ಹೌದು, ಡಾ. ರಾಜಕುಮಾರ್ ಪುತ್ರಿ ಲಕ್ಷ್ಮೀ ಮತ್ತು ಎಸ್. ಎ ಗೋವಿಂದ ರಾಜ್ ದಂಪತಿ ಪುತ್ರ ಷಣ್ಮುಖ ಗೋವಿಂದ ರಾಜ್ ಈ ವರ್ಷ ನಾಯಕ ನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅಂದಹಾಗೆ, ಷಣ್ಮುಖ ಗೋವಿಂದ ರಾಜ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರಕ್ಕೆ “ನಿಂಬಿಯಾ ಬನಾದ ಮ್ಯಾಗ’ ಎಂದು ಟೈಟಲ್ ಇಡಲಾಗಿದ್ದು, ತಾಯಿ ಮಗನ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅಶೋಕ್ ಕಡಬ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:ತಿರುವನಂತಪುರಂನಲ್ಲಿ ವಿರಾಟ್-ಗಿಲ್ ಶತಕದಬ್ಬರ: ಲಂಕಾಗೆ ಕಠಿಣ ಗುರಿ
ಈಗಾಗಲೇ “ನಿಂಬಿಯಾ ಬನಾದ ಮ್ಯಾಗ’ ಸಿನಿಮಾದ ಚಿತ್ರೀಕರಣ ಕೂಡ ಸದ್ದಿಲ್ಲದೆ ಆರಂಭವಾಗಿದ್ದು, ಇದೇ ಸಂಕ್ರಾಂತಿ ಹಬ್ಬದಂದು ಸಿನಿಮಾದ ಟೈಟಲ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
“ಎಂಜಿಪಿಎಕ್ಸ್ ಎಂಟರ್‌ಪ್ರೈಸಸ್’ ಬ್ಯಾನರಿನಲ್ಲಿ ವಿ. ಮಾದೇಶ್ ನಿರ್ಮಿಸುತ್ತಿರುವ “ನಿಂಬಿಯಾ ಬನಾದ ಮ್ಯಾಗ’ ಸಿನಿಮಾದಲ್ಲಿ ಷಣ್ಮುಖ ಅವರೊಂದಿಗೆ ಭವ್ಯಾ, ವಿನಯ ಪ್ರಸಾದ್, ರಾಮಕೃಷ್ಣ, ಉಮೇಶ್ ಸೇರಿದಂತೆ ಹಲವು ನಟರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ, ಬೆಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರದ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಈ ವರ್ಷದ ಮಧ್ಯ ಭಾಗದಲ್ಲಿ ದೊಡ್ಮನೆಯ ಹೊಸ ಪ್ರತಿಭೆಯ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.