ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಬ್ಬಳು ನಿಖಿತಾ
Team Udayavani, Dec 4, 2018, 11:21 AM IST
ಮಾಡೆಲಿಂಗ್‌ಗೂ, ಚಿತ್ರರಂಗಕ್ಕೂ ಒಂಥರಾ ಬಿಟ್ಟೆನೆಂದರೂ ಬಿಡದಂಥ ನಂಟಿರುತ್ತದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ ಬಹುತೇಕ ತಾರೆಯರ ಮೊದಲ ಆಯ್ಕೆ ಚಿತ್ರರಂಗವಾಗಿರುತ್ತದೆ. ಇನ್ನು ಹುಡುಕುತ್ತ ಹೋದರೆ, ಮಾಡೆಲಿಂಗ್ ಮೂಲಕ ಚಿತ್ರರಂಗದ ಕದ ತಟ್ಟಿದ ತಾರೆಯರ ದೊಡ್ಡ ಪಟ್ಟಿಯೇ ಸಿಗುತ್ತದೆ. ಈಗ ಆ ಪಟ್ಟಿಗೆ ನಿಖಿತಾ ರಮ್ಯಾ ಸತೀಶ್ ಎಂಬ ಮತ್ತೊಂದು ಹೆಸರು ಸೇರ್ಪಡೆಯಾಗುತ್ತಿದೆ.
“ಮಿಸ್ ಟೂರಿಸಂ ಇಂಟರ್ ನ್ಯಾಷನಲ್ ಇಂಡಿಯಾ-2018′ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಮಾಡೆಲಿಂಗ್‌ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕನ್ನಡದ ಕುವರಿ ನಿಖಿತಾ ರಮ್ಯಾ ಸತೀಶ್, ಮಿಸ್ ಟೂರಿಸಂ ಇಂಟರ್‌ನ್ಯಾಷನಲ್ ಇಂಡಿಯಾಗೆ ಆಯ್ಕೆಯಾಗಿರುವ ದಕ್ಷಿಣ ಭಾರತದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ.
ಇದೀಗ ನಿಖಿತಾ ರಮ್ಯಾ ಕನ್ನಡ ಚಿತ್ರವೊಂದರಲ್ಲಿ ನಾಯಕ ನಟಿಯಾಗಿ ಬೆಳ್ಳಿತೆರೆಗೆ ಪ್ರವೇಶ ಪಡೆಯುತ್ತಿದ್ದಾರೆ. ಈಗಾಗಲೇ ಚಲನಚಿತ್ರ ಅಭಿನಯ, ನೃತ್ಯ ಮೊದಲಾದ ವಿಭಾಗಗಳಲ್ಲಿ ತರಬೇತಿ ಕೂಡ ಪಡೆದಿದ್ದಾರೆ. ಇತ್ತೀಚೆಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕನಸು ಇಟ್ಟುಕೊಂಡಿರೋ ನಿಖಿತಾ ಮಾಧ್ಯಮಗಳ ಮುಂದೆ ಬಂದು, ತಾನು ಈವರೆಗೆ ನಡೆದು ಬಂದ ಹಾದಿಯನ್ನು ತೆರೆದಿಟ್ಟರು.
“ಚಿತ್ರರಂಗದಲ್ಲಿ ಮಿಂಚಬೇಕು ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಕನಸಿನಿಂದ ಅದಕ್ಕೆ ಬೇಕಾದ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಈಗಾಗಲೇ ಕೇರಳದಲ್ಲಿ ಮಾರ್ಷಿಯಲ್ ಆರ್ಟ್ಸ್ ಕೂಡ ಕಲಿತುಕೊಂಡು ಬಂದಿದ್ದೇನೆ. ಈ ಸಂದರ್ಭದಲ್ಲಿ ಮಲಯಾಳಂ ಚಿತ್ರರಂಗದಿಂದ ಅವಕಾಶ ಹುಡುಕಿಕೊಂಡು ಬಂದಿತ್ತು.
ಜೊತೆಗೆ ಪುಣೆಯಲ್ಲಿ ಫಿಲಂ ಟ್ರೈನಿಂಗ್ ಪಡೆಯುತ್ತಿದ್ದ ಸಮಯದಲ್ಲೂ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಆಫರ್ ಸಿಕ್ಕಿತ್ತು. ಆದರೆ, ನಾನು ಕನ್ನಡ ಚಿತ್ರರಂಗದಲ್ಲಿಯೇ ಮೊದಲು ನಟಿಸಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿಂದ ಆ ಅವಕಾಶಗಳನ್ನು ಸ್ವೀಕರಿಸಲಿಲ್ಲ ಎಂದರು. ಎಲ್ಲಾ ಅಂದುಕೊಂಡಂತೆ ಆದರೆ ನಿಖಿತಾ, ಮುಂದಿನ ದಿನಗಳಲ್ಲಿ ಸ್ಯಾಂಡಲ್‍ವುಡ್‌ಗೆ ಎಂಟ್ರಿಕೊಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.